More

    ಟ್ಯಾಟೂ ಹಾಕಿಸಿಕೊಳ್ಳುವಾಗ ಎಚ್ಚರಿಕೆ ವಹಿಸಿ

    ಶಿವಮೊಗ್ಗ: ಸಾಮಾಜಿಕ ಜಾಲತಾಣಗಳಿಗೆ ಮಾರುಹೋಗದೆ ವಾಸ್ತವಿಕ ಜೀವನದ ಬಗ್ಗೆ ಯುವ ಸಮೂಹ ಗಮನ ಹರಿಸುವುದು ಇಂದಿನ ಅಗತ್ಯ ಎಂದು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಎಚ್​ಐವಿ, ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದ ಮೇಲ್ವಿಚಾರಕಿ ಎನ್.ಎಂ.ಮಂಗಳಾ ಹೇಳಿದರು.

    ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ಗುರುವಾರ ರೆಡ್ ರಿಬ್ಬನ್ ಘಟಕ ಎನ್​ಎಸ್​ಎಸ್ ಮತ್ತು ಐಕ್ಯೂಎಸಿ ಘಟಕಗಳ ಸಹಯೋಗದೊಂದಿಗೆ ಎಚ್​ಐವಿ, ಏಡ್ಸ್ ಜಾಗೃತಿ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒಂದು ಕಾಲದಲ್ಲಿ ಅತ್ಯಂತ ಆರೋಗ್ಯವಂತ ರಾಷ್ಟ್ರ ಎನಿಸಿಕೊಂಡಿದ್ದ ಭಾರತ 2018-19ರಲ್ಲಿ ಎಚ್​ಐವಿ ಸೋಂಕಿನ ರೋಗದಲ್ಲಿ ಜಗತ್ತಿನಲ್ಲೇ 3ನೇ ಸ್ಥಾನಕ್ಕೇರಿತು ಎಂದು ಕಳವಳ ವ್ಯಕ್ತಪಡಿಸಿದರು.

    ಯುವಜನತೆಯಲ್ಲಿನ ಅಸುರಕ್ಷಿತಾ ಲೈಂಗಿಕ ಸಂಪರ್ಕ, ಆಸ್ಪತ್ರೆಗಳಲ್ಲಿ ಉಪಯೋಗಿಸುವ ಸೂಜಿ, ಸಿರಿಂಜು, ಕತ್ತರಿ, ಬ್ಲೇಡ್ ಕೂಡ ಮಾರಕ ರೋಗ ಹರಡಲು ಕಾರಣವಾಗುತ್ತದೆ. ಇತ್ತೀಚೆಗೆ ಯುವ ಸಮೂಹದಲ್ಲಿ ಶರೀರದ ಬೇರೆ ಬೇರೆ ಭಾಗಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವ ಹವ್ಯಾಸ ಹೆಚ್ಚಿದೆ. ಇದು ಕೂಡ ಎಚ್​ಐವಿ ಸೋಂಕು ಹರಡಲು ಕಾರಣವಾಗಿದೆ. ಆದ್ದರಿಂದ ಟ್ಯಾಟೂ ಹಾಕಿಸಿಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.

    ಪ್ರಾಚಾರ್ಯು ಡಾ. ಕೆ.ಟಿ.ಪಾರ್ವತಮ್ಮ, ಸಂಚಾಲಕ ಡಾ. ಬಾಲಕೃಷ್ಣ ಹೆಗಡೆ, ಮಂಜುಳಾ, ಕೆ.ಪ್ರಿಯಾಂಕಾ, ಎಂ.ನಯನಾ, ಡಾ. ಓಂಕಾರಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts