More

    ಇತಿಹಾಸ ನಿರ್ಮಿಸಿದ ಟಾಟಾ ಷೇರು; ಒಂದೇ ದಿನದಲ್ಲಿ 1000 ರೂ. ಹೆಚ್ಚಳ; 7730% ಲಾಭ ನೀಡಿದ ಮಲ್ಟಿಬ್ಯಾಗರ್​

    ಮುಂಬೈ: ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ (Tata Investment Corporation) ಕಂಪನಿಯ ಷೇರುಗಳು ಮಂಗಳವಾರ, ಜನವರಿ 30ರಂದು ಒಂದೇ ದಿನದಲ್ಲಿ ಶೇ. 20ರಷ್ಟು ಹೆಚ್ಚಳ ಕಂಡಿವೆ. ಅಂದರೆ ಪ್ರತಿ ಷೇರಿನ ಬೆಲೆ 1000 ರೂ.ವರೆಗೆ ಏರಿಕೆಯಾಗಿದೆ.

    ಇದಲ್ಲದೆ, ಈ ಕಂಪನಿಯ ಷೇರುಗಳು 52 ವಾರಗಳ ದಾಖಲೆಯ ಗರಿಷ್ಠ ಬೆಲೆ 5799.40 ರೂಪಾಯಿ ತಲುಪಿದ ದಾಖಲೆಯನ್ನೂ ಬರದಿವೆ.

    ಈ ಏರಿಕೆಯ ಹಿಂದೆ ಬಹುದೊಡ್ಡ ಕಾರಣವಿದೆ. ವಾಸ್ತವವಾಗಿ, ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ಲಾಭವು 53% ರಷ್ಟು ಹೆಚ್ಚಾಗಿದೆ. ಡಿಸೆಂಬರ್ 2023 ತ್ರೈಮಾಸಿಕದಲ್ಲಿ ನಿವ್ವಳ ಲಾಭ 53.2 ಕೋಟಿ ರೂ.ಗೆ ಏರಿಕೆಯಾಗಿದೆ. ಹಿಂದಿನ ವರ್ಷದ ತ್ರೈಮಾಸಿಕದಲ್ಲಿ 34.5 ಕೋಟಿ ರೂ. ಲಾಭವನ್ನು ಕಂಪನಿ ಗಳಿಸಿತ್ತು.

    ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಶನ್‌ನ ಷೇರುಗಳು ಹೂಡಿಕೆದಾರರಿಗೆ ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ ಮಲ್ಟಿಬ್ಯಾಗರ್ (ಹಲವು ಪಟ್ಟು) ರಿಟರ್ನ್ಸ್ ನೀಡಿವೆ. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ, ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಶನ್‌ನ ಆದಾಯವು ಶೇಕಡಾ 34.2 ರಷ್ಟು ಏರಿಕೆಯಾಗಿದೆ.

    ಟಾಟಾ ಇನ್ವೆಸ್ಟ್ಮೆಂಟ್ ಸ್ಟಾಕ್ ಈ ವರ್ಷ 33.37% ಮತ್ತು ಕಳೆದ ವರ್ಷದಲ್ಲಿ 169% ಹೆಚ್ಚಳ ಕಂಡಿದೆ. ಕಂಪನಿಯ ಒಟ್ಟು 1.05 ಲಕ್ಷ ಷೇರುಗಳು ಬಿಎಸ್‌ಇಯಲ್ಲಿ ಲಿಸ್ಟ್ ಆಗಿವೆ.

    1999ರ ಜನವರಿ 6 ರಂದು ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಶನ್‌ನ ಷೇರುಗಳ ಬೆಲೆಯು 72 ರೂಪಾಯಿಯ ಕಡಿಮೆ ಮಟ್ಟದಲ್ಲಿತ್ತು, ಅಲ್ಲಿಂದ ಇಲ್ಲಿಯವರೆಗೆ ಹೂಡಿಕೆ ಮಾಡಿದವರು ಶೇಕಡಾ 7730 ರಷ್ಟು ಬಂಪರ್ ಲಾಭವನ್ನು ಪಡೆದಿದ್ದಾರೆ. ಕಳೆದ 1 ವರ್ಷದಲ್ಲಿ ಹೂಡಿಕೆದಾರರಿಗೆ 170 ಪ್ರತಿಶತದಷ್ಟು ಲಾಭವನ್ನು ನೀಡಿವೆ. ಈ ಷೇರುಗಳು ಕಳೆದ 6 ತಿಂಗಳಲ್ಲಿ ಹೂಡಿಕೆದಾರರಿಗೆ 124 ಪ್ರತಿಶತದಷ್ಟು ಲಾಭವನ್ನು ನೀಡಿದರೆ ಕಳೆದ 1 ತಿಂಗಳಲ್ಲಿ ಅದು 33 ಪ್ರತಿಶತದಷ್ಟು ಲಾಭವನ್ನು ನೀಡಿವೆ.

    ಈ ಕಂಪನಿಯ ಷೇರುಗಳ ಬೆಲೆ ಕರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ 27 ಮಾರ್ಚ್ 2020 ರಂದು 630 ರೂ. ಇತ್ತು. ಅಲ್ಲಿಂದ ಇದುವರೆಗೆ ಈ ಸ್ಟಾಕ್ ಮಾರುಕಟ್ಟೆ ಹೂಡಿಕೆದಾರರಿಗೆ 800 ಪ್ರತಿಶತದಷ್ಟು ಬಂಪರ್ ಲಾಭವನ್ನು ನೀಡಿದೆ.

    ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಮುಖ್ಯವಾಗಿ ಈಕ್ವಿಟಿ ಷೇರುಗಳು ಮತ್ತು ಇಕ್ವಿಟಿ ಸಂಬಂಧಿತ ಭದ್ರತೆಗಳಂತಹ ದೀರ್ಘಾವಧಿಯ ಹೂಡಿಕೆಗಳಲ್ಲಿ ತೊಡಗಿಸಿಕೊಂಡಿದೆ. ಕಂಪನಿಯ ಚಟುವಟಿಕೆಗಳು ಮುಖ್ಯವಾಗಿ ಪಟ್ಟಿ ಮಾಡಲಾದ ಮತ್ತು ಪಟ್ಟಿ ಮಾಡದ ಈಕ್ವಿಟಿ ಷೇರುಗಳು, ಸಾಲ ಉಪಕರಣಗಳು ಮತ್ತು ಮ್ಯೂಚುಯಲ್ ಫಂಡ್​ಗಳು ಮತ್ತು ವಿವಿಧ ಕೈಗಾರಿಕೆಗಳನ್ನು ಒಳಗೊಂಡಿವೆ.

    ಮಂಗಳವಾರದಂದು ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಷೇರುಗಳ ವಹಿವಾಟಿನ ಪ್ರಮಾಣ 13 ಪಟ್ಟು ಹೆಚ್ಚಾಗಿದೆ. ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಷೇರುಗಳು ಪ್ರಸ್ತುತ ಓವರ್‌ಬಾಟ್ (ಅತಿಹೆಚ್ಚು ಖರೀದಿ) ವಿಭಾಗದಲ್ಲಿದ್ದು, ಬೆಲೆ ದೌರ್ಬಲ್ಯವಿದ್ದಲ್ಲಿ ನೀವು ಅವುಗಳನ್ನು ಖರೀದಿಸಬೇಕು ಎಂದು ಷೇರು ಮಾರುಕಟ್ಟೆ ತಜ್ಞರು ಹೇಳುತ್ತಾರೆ.

    ಭೂಮಿ ಖರೀದಿ, ಉತ್ತಮ ತ್ರೈಮಾಸಿಕ ಫಲಿತಾಂಶ: ಎರಡೇ ದಿನಗಳಲ್ಲಿ ಷೇರು ಬೆಲೆ ಶೇ. 40 ಹೆಚ್ಚಳ

    ಒಂದೇ ಗಂಟೆಯಲ್ಲಿ 100% ಸಬ್​ಸ್ಕ್ರಿಪ್ಶನ್​; ಗ್ರೇ ಮಾರುಕಟ್ಟೆಯಲ್ಲಿ ಡಬಲ್​ ರೇಟ್​; ಡಿಜಿಟಲ್​ ಸರ್ವೀಸ್​ ಕಂಪನಿಯ ಐಪಿಒಗೆ ಅಪಾರ ಬೇಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts