More

    ಮುಖ್ಯಮಂತ್ರಿಗಳಿಗೆ ತಾರಾ ಕೊಟ್ಟ ಐದು ಸಲಹೆಗಳೇನು?

    ಲಾಕ್‌ಡೌನ್‌ನಿಂದಾಗಿ ಚಿತ್ರರಂಗ ಎದುರಿಸುತ್ತಿರುವ ಹಲವು ಸಮಸ್ಯೆಗಳ ಕುರಿತಾಗಿ ಚಿತ್ರರಂಗದ ನಿಯೋಗವೊಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಗಮನಕ್ಕೆ ತಂದಿದೆ. ಈಗ ನಟಿ ತಾರಾ ಸಹ ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಏನೆಲ್ಲಾ ಮಾಡಬಹುದು ಎಂದು ಸಲಹೆ ಸಹ ನೀಡಿದ್ದಾರೆ.

    ಸೋಮವಾರ ಸಂಜೆ ಮುಖ್ಯಮಂತ್ರಿಗಳ ಅಧಿಕೃತ ಸರ್ಕಾರಿ ನಿವಾಸವಾದ ಕಾವೇರಿಗೆ ತೆರಳಿ ಚಿತ್ರರಂಗದ ಸ್ಥಿತಿ-ಗತಿಯ ಬಗ್ಗೆ ವರದಿ ಕೊಟ್ಟು ಬಂದಿದ್ದಾರೆ. ವರದಿ ಸ್ವೀಕರಿಸಿರುವ ಮುಖ್ಯಮಂತ್ರಿಗಳು, ಈ ಬಗ್ಗೆ ಚರ್ಚೆಸುವುದಾಗಿ ಆಶ್ವಾಸನೆ ನೀಡಿದ್ದಾರೆ.

    ಪ್ರಮುಖವಾಗಿ ಲಾಕ್‌ಡೌನ್ ಜಾರಿಯ ಮುನ್ನ ಬಿಡುಗಡೆಯಾದ ಕನ್ನಡ ಚಿತ್ರಗಳಿಗೆ ಕಡ್ಡಾಯವಾಗಿ ಸಬ್ಸಿಡಿ ದೊರೆಯುವಂತೆ ಮಾಡುವುದು, ಲಾಕ್‌ಡೌನ್ ಮುಗಿದ ನಂತರ ಎದುರಾಗಬಹುದಾದ ಸಮಸ್ಯೆಗಳ ಕುರಿತು ಪರಿಶೀಲನೆ ಮಾಡಿ ಅವುಗಳ ಪರಿಹಾರಕ್ಕೆ ಅಗತ್ಯ ರೋಡ್ ಮ್ಯಾಪ್ ಸಿದ್ಧಪಡಿಸುವುದು, ಚಿತ್ರರಂಗದಲ್ಲಿನ ಕಡುಬಡವರಿಗೆ ಸರ್ಕಾರದ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ನೀಡುವುದು, ಅಸಂಘಟಿತ ಕಾರ್ಮಿಕರಿಗೆ ಆರೋಗ್ಯ ಭಾಗ್ಯ ಕಾರ್ಡ್ ಒದಗಿಸಿ ಉಚಿತ ಆರೋಗ್ಯ ಸೇವೆ ಲಭ್ಯವಾಗುವಂತೆ ಮಾಡುವುದು, ಇನ್ನು ಈ ವರ್ಗದವರಿಗೆ ಅಗತ್ಯ ದಿನಸಿ ಮತ್ತು ಔಷಧಿ ಕೊಳ್ಳಲು ಅನುಕೂಲವಾಗುವಂತೆ ಅಂದಾಜು ಐದು ಸಾವಿರ ರೂಪಾಯಿಗಳ ಮೊತ್ತದ ಕೂಪನ್ ಕೊಡುವುದು … ಇವೇ ತಾರಾ ಅವರು ಸರ್ಕಾರಕ್ಕೆ ಸಲ್ಲಿಸಿರುವ ಪಂಚಸೂತ್ರಗಳು.

    ತಾರಾ ಅವರ ಈ ವರದಿಯಲ್ಲಿ ಚಿತ್ರರಂಗಕ್ಕೆ ಸರ್ಕಾರ ಏನೆಲ್ಲಾ ಮಾಡಬಹುದು ಎಂದಷ್ಟೇ ಅಲ್ಲ, ಚಿತ್ರರಂಗ ಸಹ ಸರ್ಕಾರಕ್ಕೆ ಯಾವೆಲ್ಲಾ ರೀತಿಯಲ್ಲಿ ಸಹಾಯ ಮಾಡಬಹುದು ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಲಾಕ್​ಡೌನ್​ ಕುರಿತ ಸಿನಿಮಾ ಮಾಡಲು ಸಜ್ಜಾದ್ರು ಈ ನಿರ್ದೇಶಕ ; ವಿಚಿತ್ರ ಏನಂದ್ರೆ, ಈ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲ್ವಂತೆ..!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts