More

    8ನೇ ವಿಶ್ವದಾಖಲೆಗೆ ತನುಶ್ರೀ ಪಿತ್ರೋಡಿ ಸಿದ್ಧತೆ

    ವಿಜಯವಾಣಿ ಸುದ್ದಿಜಾಲ ಉಡುಪಿ

    ಯೋಗ ಸಾಧಕಿ ತನುಶ್ರೀ ಪಿತ್ರೋಡಿ 8ನೇ ವಿಶ್ವದಾಖಲೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸಿದ್ಧತೆ ನಡೆಸಿದ್ದಾರೆ. ಏ.4ರಂದು ಸಂಜೆ 4ಕ್ಕೆ ಬನ್ನಂಜೆ ಶ್ರೀ ನಾರಾಯಣಗುರು ಆಡಿಟೋರಿಯಂನಲ್ಲಿ ನಾಟ್ಯಶಾಸ್ತ್ರದಲ್ಲಿ ವಿವರಿಸಿದ 108 ಕರಣಗಳ ಭಂಗಿಗಳನ್ನು 4 ನಿಮಿಷದ ಒಳಗೆ ಪ್ರದರ್ಶಿಸಲಿದ್ದಾರೆ ಎಂದು ಭರತನಾಟ್ಯ ಗುರು ರಾಮಕೃಷ್ಣ ಕೊಡಂಚ ತಿಳಿಸಿದ್ದಾರೆ.

    ಕಾಲು, ಕೈಗಳ ಚಲನೆ, ದೇಹದ ಭಂಗಿ ಈ ಮೂರು ಅಂಶಗಳ ಸಂಯೋಜನೆ 108 ಕರಣಗಳಾಗಿವೆ. ಭಗವಂತ ಶಿವ ಕರಣಗಳ ಮೂಲ ಎನ್ನಲಾಗುತ್ತದೆ. ಪ್ರತಿ ಕರಣವನ್ನು ಚಲನೆಯಂತೆ ಅಭ್ಯಾಸ ಮಾಡಲಾಗಿದ್ದು, ಚಿದಂಬರಂನ ನಟರಾಜ ದೇವಾಲಯಗಳ ಗೋಪುರದಲ್ಲಿ ಗೋಡೆಗಳ ಮೇಲೆ ಕಲ್ಲಿನ ಕೆತ್ತನೆಗಳಲ್ಲಿ ಇದನ್ನು ಚಿತ್ರಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ತನುಶ್ರೀ ತಂದೆ ಉದಯ ಕುಮಾರ್ ಮಾತನಾಡಿ, ತನುಶ್ರೀ ಪ್ರಸ್ತುತ ಸೇಂಟ್ ಸಿಸಿಲಿಯ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದು, ಈಗಾಗಲೆ 7ವಿಶ್ವದಾಖಲೆಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ 8 ವಿದ್ವಾಂಸರಿಗೆ ಗುರುವಂದನೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು. ತನುಶ್ರೀ ಪಿತ್ರೋಡಿ, ಸುರಭಿ ರತನ್, ವಿಜಯ ಕೋಟ್ಯಾನ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts