More

    ರಾಜ್ಯಪಾಲರ ವಿರುದ್ಧ ಸುಪ್ರೀಂ ಮೊರೆಹೋದ ಸ್ಟಾಲಿನ್​…

    ಚೆನ್ನೈ: ಮಂಜೂರಾತಿಗಾಗಿ ಕಳುಹಿಸಿದ ಬಿಲ್‌ಗಳನ್ನು ರಾಜ್ಯಪಾಲ ಆರ್.ಎನ್.ರವಿ ಅವರು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ನಿಗದಿತ ಕಾಲಮಿತಿಯೊಳಗೆ ಮಸೂದೆಗಳಿಗೆ ಒಪ್ಪಿಗೆ ನೀಡಲು ಅಥವಾ ವಿಲೇವಾರಿ ಮಾಡಲು ರಾಜ್ಯಪಾಲರಿಗೆ ನಿರ್ದೇಶನ ನೀಡುವಂತೆ ಸರ್ಕಾರವು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದೆ.

    ಇದನ್ನೂ ಓದಿ: ಕೇರಳ ಸರಣಿ ಸ್ಫೋಟ: ಬಾಂಬ್‌ ತಯಾರಿಸಲು ಆರೋಪಿ ಖರ್ಚು ಮಾಡಿದ್ದು 3ಸಾವಿರ ರೂ.ಮಾತ್ರ!

    ಕಳೆದ ಕೆಲವು ತಿಂಗಳುಗಳಿಂದ ಡಿಎಂಕೆ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ವಾಕ್ಸಮರ ನಡೆಯುತ್ತಿದೆ. ರಾಜ್ಯಪಾಲ ರವಿ ಅವರು ಸ್ಟಾಲಿನ್ ಅವರ ವಿದೇಶಿ ಪ್ರವಾಸ, ದ್ರಾವಿಡ ಮಾದರಿಯ ಆಡಳಿತಕ್ಕೆ ಸಂಬಂಧಿಸಿದ ಮಸೂದೆಗಳನ್ನು ತಡೆಹಿಡಿದಿದ್ದಾರೆ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆರೋಪಿಸಿದ್ದರು.

    ರಾಜ್ಯ ವಿಧಾನಸಭೆಯಿಂದ ರವಾನಿಸಲಾಗುತ್ತಿರುವ ಮಸೂದೆಗಳು ಮತ್ತು ಆದೇಶಗಳನ್ನು ರಾಜ್ಯಪಾಲರು ಸಮಯಕ್ಕೆ ಸರಿಯಾಗಿ ಅನುಮೋದಿಸುತ್ತಿಲ್ಲ. 54 ಕೈದಿಗಳ ಅವಧಿಪೂರ್ವ ಬಿಡುಗಡೆಗೆ ಸಂಬಂಧಿಸಿದ ಹನ್ನೆರಡು ಮಸೂದೆಗಳು, ನಾಲ್ಕು ಪ್ರಾಸಿಕ್ಯೂಷನ್ ನಿರ್ಬಂಧಗಳು ಮತ್ತು ಕಡತಗಳು ಪ್ರಸ್ತುತ ರಾಜ್ಯಪಾಲ ರವಿ ಅವರ ಮುಂದೆ ಬಾಕಿ ಉಳಿದಿವೆ ಎಂದು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದೆ.

    ರಾಜ್ಯಪಾಲರು ಜನರ ಇಚ್ಛೆಗೆ ಧಕ್ಕೆ ತಂದಿದ್ದಾರೆ. ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸರ್ಕಾರ ಆರೋಪಿಸಿದೆ.
    ರಾಜ್ಯಪಾಲ ರವಿ ಅವರು ಜ.4 ರಂದು ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಜ್ಯದ ಹೆಸರಿನ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದ್ದರು. ರಾಜ್ಯವನ್ನು ತಮಿಳಗಂ ಎಂದು ಕರೆಯುವುದು ಸೂಕ್ತ ಪದವಾಗಿದೆ ಎಂದು ಅವರು ಹೇಳಿದರು.

    ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಮಾತ್ರ ರೆಕಾರ್ಡ್ ಮಾಡಲು ಸ್ಪೀಕರ್‌ಗೆ ಸೂಚಿಸುವ ನಿರ್ಣಯವನ್ನು ಸ್ಟಾಲಿನ್ ಮಂಡಿಸಿದ ನಂತರ ಆರ್‌.ಎನ್.ರವಿ ಅವರು ವಿಧಾನಸಭೆಯಿಂದ ಹೊರನಡೆದರು. ರಾಜ್ಯಪಾಲರು ಸಾಂಪ್ರದಾಯಿಕ ಭಾಷಣಕ್ಕೆ ಸೇರಿಸಿದ ಅಥವಾ ಬಿಟ್ಟುಬಿಟ್ಟ ಭಾಗಗಳನ್ನು ದಾಖಲೆಯಿಂದ ತೆಗೆದುಹಾಕಲಾಗಿತ್ತು.

    ಮರಾಠ ಮೀಸಲಾತಿ ಕಿಚ್ಚು| KKRTC ಬಸ್​ಗೆ ಬೆಂಕಿ; ಅಂತರ್​ರಾಜ್ಯ ಸಾರಿಗೆ ಸಂಚಾರ ಸ್ಥಗಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts