More

    ಹೊಸ ಇತಿಹಾಸ ಬರೆದ ತಮಿಳುನಾಡು: ಏಕದಿನ ಕ್ರಿಕೆಟ್​ನಲ್ಲಿ 500 ರನ್​ ಗಡಿ ದಾಟಿದ ವಿಶ್ವದ ಏಕೈಕ ತಂಡವೆಂಬ ಹೆಗ್ಗಳಿಕೆ

    ನವದೆಹಲಿ: ಏಕದಿನ ಮಾದರಿಯ ಪಂದ್ಯದ ಇತಿಹಾಸದಲ್ಲೇ ತಮಿಳುನಾಡು (Tamil Nadu) ಕ್ರಿಕೆಟ್ (Cricket)​ ತಂಡ ಹೊಸ ಇತಿಹಾಸ ಬರೆದಿದೆ. ಐವತ್ತು ಓವರ್‌ಗಳ ಪಂದ್ಯ (One Day Match)ದಲ್ಲಿ 500 ರನ್ ಗಳಿಸಿದ ವಿಶ್ವದ ಮೊದಲ ವೃತ್ತಿಪರ ತಂಡವೆಂಬ ಹೆಗ್ಗಳಿಕೆ ಪಾತ್ರವಾಗಿದೆ.

    ಅರುಣಾಚಲ ಪ್ರದೇಶ (Arunachal Pradesh)ದ ವಿರುದ್ಧ ಇಂದು ನಡೆದ ವಿಜಯ್​ ಹಜಾರೆ ಟ್ರೋಫಿ (Vijay Hazare Trophy) ಟೂರ್ನಿಯ ಪಂದ್ಯದಲ್ಲಿ ತಮಿಳುನಾಡು ತಂಡ ಐತಿಹಾಸಿಕ ಸಾಧನೆ ಮಾಡಿದೆ. ಮೊದಲು ಬ್ಯಾಟಿಂಗ್​ ಮಾಡಿದ ತಮಿಳುನಾಡು ತಂಡ ಎರಡು ವಿಕೆಟ್​ ನಷ್ಟಕ್ಕೆ 506 ರನ್ ಗಳಿಸಿತು. ಆರಂಭಿಕ ಆಟಗಾರ ಬಿ ಸಾಯಿ ಸುದರ್ಶನ್ (Sai Sudharsan) 2 ಸಿಕ್ಟರ್​ ಮತ್ತು 19 ಬೌಂಡರಿಯನ್ನೊಳಂಡ 102 ಎಸೆತಗಳಲ್ಲಿ 154 ರನ್​ ಕಲೆಹಾಕಿದರು.

    ಇನ್ನೊಬ್ಬ ಆರಂಭಿಕ ಆಟಗಾರ ಎನ್​. ಜಗದೀಶನ್​ (N Jagadeesan) 141 ಎಸೆತಗಳಲ್ಲಿ 15 ಸಿಕ್ಸರ್​ ಮತ್ತು 25 ಬೌಂಡರಿ ಒಳಗೊಂಡಂತೆ ಬರೋಬ್ಬರಿ 277 ರನ್​ ಕಲೆ ಹಾಕಿದರು. ಉಳಿದ ಇಬ್ಬರು ಬ್ಯಾಟ್ಸ್​ಮನ್​ಗಳಾದ ಬಿ. ಅಪರಾಜಿತ್​ ಮತ್ತು ಬಿ. ಇಂದ್ರಜಿತ್ ತಲಾ 31 ರನ್​ ಕಲೆಹಾಕಿದರು. ​

    ತಮಿಳುನಾಡು ತಂಡದ ಆರಂಭಿಕ ಆಟಗಾರರ ಅಬ್ಬರದ ಬ್ಯಾಟಿಂಗ್​ಗೆ ಅರುಣಾಚಲ ಪ್ರದೇಶ ತಂಡ ಬಳಲಿ ಬೆಂಡಾಯಿತು. ವಿಕೆಟ್​ ಬೀಳಿಸುವಲ್ಲಿ ಸಂಪೂರ್ಣ ವಿಫಲವಾಯಿತು. 8 ಬೌಲರ್​ಗಳನ್ನು ಬದಲಾಯಿಸಿದರು ತಮಿಳುನಾಡು ತಂಡದ ಆರಂಭಿಕ ಜೋಡಿಯ ವಿಕೆಟ್​ ಮುರಿಯುವಲ್ಲಿ ಸೋತರು. ಇದೀಗ ಅರುಣಾಚಲ ಪ್ರದೇಶ ತಂಡ ಗೆಲುವಿಗಾಗಿ 507 ರನ್​ಗಳ ಬೃಹತ್​ ಗುರಿ ಬೆನ್ನತ್ತ ಬೇಕಾಗಿದೆ. ಪ್ರತಿ ಓವರ್​ಗೆ 10 ರನ್​ ಗಳಿಸಲೇಬೇಕಿದೆ.

    ಅಂದಹಾಗೆ ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ (M Chinnaswamy Stadium) ದಲ್ಲಿ ನಡೆಯುತ್ತಿದೆ. 500 ರನ್​ ಗಡಿದಾಟಿ ವಿಶ್ವದ ಮೊದಲ ತಂಡ ಎಂಬ ಖ್ಯಾತಿಗೆ ತಮಿಳುನಾಡು ತಂಡ ಭಾಜನವಾಗಿದೆ. ಸದ್ಯ ಇದುವರೆಗಿನ ಅತ್ಯಧಿಕ ರನ್​ 498 ಆಗಿತ್ತು. 2022ರಲ್ಲೇ ಇಂಗ್ಲೆಂಡ್​ ತಂಡ ನೆದರ್ಲೆಂಡ್​ ವಿರುದ್ಧ 498 ರನ್​ ಗಳಿಸಿತ್ತು. 2007ರಲ್ಲಿ ಸರ್ರೆ ತಂಡ ಗ್ಲೌಸೆಸ್ಟರ್‌ಶೈರ್ ವಿರುದ್ಧ 496 ರನ್​ ಕಲೆ ಹಾಕಿತ್ತು. 2018ರಲ್ಲಿ ಇಂಗ್ಲೆಂಡ್​ ಆಸ್ಟ್ರೇಲಿಯಾ ವಿರುದ್ಧ 481 ರನ್​ ಕಲೆಹಾಕಿತ್ತು. 2018ರಲ್ಲೇ ಭಾರತ ಲೀಸೆಸ್ಟರ್‌ಶೈರ್ ವಿರುದ್ಧ 458 ರನ್​ ಗಳಿಸಿತ್ತು. ಇದೀಗ ಮೊದಲ ಬಾರಿಗೆ ಏಕದಿನ ಪಂದ್ಯದಲ್ಲಿ 500 ರನ್​ ಗಡಿ ದಾಟಿದ ತಂಡವೆಂಬ ಹೆಗ್ಗಳಿಕೆಯನ್ನು ತಮಿಳುನಾಡು ತಂಡ ಪಡೆದುಕೊಂಡಿದೆ. (ಏಜೆನ್ಸೀಸ್​)

    ಹೊಸ ಇತಿಹಾಸ ಬರೆದ ತಮಿಳುನಾಡು: ಏಕದಿನ ಕ್ರಿಕೆಟ್​ನಲ್ಲಿ 500 ರನ್​ ಗಡಿ ದಾಟಿದ ವಿಶ್ವದ ಏಕೈಕ ತಂಡವೆಂಬ ಹೆಗ್ಗಳಿಕೆ

    ಕಣ್ಣಿಗೊಂದು ಸವಾಲು: ಸಾಧ್ಯವಾದ್ರೆ 10 ಸೆಕೆಂಡ್​ನಲ್ಲಿ ಈ ಫೋಟೋದಲ್ಲಿರುವ ಬೆಕ್ಕನ್ನು ಗುರುತಿಸಿ…

    ಎಲ್ಲವನ್ನೂ ಬೇರೆಯವರೇ ಮಾಡ್ತಾರೆ; ಕಲಾವಿದರಿಗೆ ಹೆಚ್ಚು ಕೆಲಸವಿಲ್ಲ ಎಂದ ಪ್ರಿಯಾಂಕಾ ಚೋಪ್ರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts