More

    ತಂಬಾಕು ನಿಯಂತ್ರಣ ಕುರಿತು ತರಬೇತಿ ಕಾರ್ಯಾಗಾರ

    ಗದಗ: ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಾಘಟಕ, ಲಾಯನ್ಸ್‍ಕ್ಲಬ್, ರೋಟರಿ ಕ್ಲಬ್ ಹಾಗೂ ರೋಟರಿ ಇನ್ನರ್‍ವ್ಹೀಲ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ  ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಇವರುಗಳ ಸಂಯುಕ್ತಾಶ್ರಯದಲ್ಲಿ ಕರುನಾಡು ಸಭಾಂಗಣ ಜಿಲ್ಲಾ ಸಮೀಕ್ಷಣಾ ಘಟಕದಲ್ಲಿ ತಂಬಾಕು ವ್ಯಸನದಿಂದಾಗುವ ದುಷ್ಪರಿಣಾಮ ಕೋಟ್ಪಾ ಕಾಯ್ದೆ -2003 ತಂಬಾಕು ಮುಕ್ತ ಶಿಕ್ಷಣ ಸಂಸ್ಥೆ ಹಾಗೂ ತಂಬಾಕು ವ್ಯಸನ ಮುಕ್ತ ಕೇಂದ್ರದಲ್ಲಿನ ಸೌಲಭ್ಯಗಳ ಕುರಿತು ಲಾಯನ್ಸ್ ಕ್ಲಬ್, ರೋಟರಿಕ್ಲಬ್ ಹಾಗೂ ರೋಟರಿ ಇನ್ನರ್‍ವ್ಹೀಲ್ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಬುಧವಾರದಂದು  ಹಮ್ಮಿಕೊಳ್ಳಲಾಯಿತು.  

    ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ  ಕೆ.ಗುರುಪ್ರಸಾದ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕೋಟ್ಪಾ ಕಾಯ್ದೆ  ಇನ್ನಷ್ಟು ತಿದ್ದುಪಡಿ ಅವಶ್ಯಕವಿದ್ದು ದಂಡದ ಮೊತ್ತ ಹೆಚ್ಚಿಸಬೇಕೆಂದು ತಿಳಿಸಿದರು.

    ಅಧ್ಯಕ್ಷತೆ ವಹಿಸಿದ ಜಿಲ್ಲಾ ಸಮೀಕ್ಷಣಾಧಿಕಾರಿ ಹಾಗೂ ಕಾರ್ಯಕ್ರಮಾದಿಕಾರಿ  ಡಾ,ವೆಂಕಟೇಶ ರಾಠೋಡ ಮಾತನಾಡಿ ಎನ್.ಟಿ.ಸಿ.ಪಿ  ರವರು ತಂಬಾಕು ಸೇವನೆಯಿಂದ ಕ್ಯಾನ್ಸರ್ ನಂತಹ ಬಯಾನಕ ಕಾಯಿಲೆಗಳು, ಅಸಾಂಕ್ರಾಮಿಕ ಕಾಯಿಲೆಗಳು ಹೆಚ್ಚುತ್ತಿದ್ದು, ಕ್ಯಾನ್ಸರ್ ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಶಿಗ್ರ ಚಿಕಿತ್ಸೆ ಪಡೆಯಲು ತಿಳಿಸಿದರು, ಜಿಲ್ಲಾ ವ್ಯಸನ ಮುಕ್ತ ಕೇಂದ್ರದಲ್ಲಿ ಲಭ್ಯವಿರುವ ಸೌಲಭ್ಯಗಳ ಕುರಿತು ವಿವರವಾದ ಮಾಹಿತಿ ನೀಡಿದರು.  

    ಲಯನ್ಸ್  ಕ್ಲಬ್  ಅಧ್ಯಕ್ಷರಾದ ರಮೇಶ ಶಿದ್ಲಿ  ಮಾತನಾಡಿ ತಂಬಾಕು ನಿಯಂತ್ರಣ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು  ಇನ್ನಿತರ ಚಟುವಟಿಕೆಗಳನ್ನು  ಹಮ್ಮಿಕೊಳ್ಳಬೇಕೆಂದರು.  

    ಜಿಮ್ಸ ಪ್ರಾಧ್ಯಾಪಕರಾದ ಡಾ.ಅರವಿಂದ ಕರಿನಾಗಣ್ಣವರ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ತರಬೇತಿಯಲ್ಲಿ ತಂಬಾಕಿನಲ್ಲಿರುವ ನಿಕೋಟಿನ್ ಅಂಶ ದೇಹದಲ್ಲಿ ಸೇರಿ ನರಮಂಡಲದ ಕಾರ್ಯದ ಮೇಲೆ ಪರಿಣಾಮ ಬೀರಿ ರಕ್ತ ಹಾಗೂ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ದೇಹದ ಪ್ರತಿಯೊಂದು ಅಂಗದ ಮೇಲೆ ಪರಿಣಾಮ ಬೀರುತ್ತದೆಎಂದು ತಿಳಿಸಿದರು.

    ಎನ್.ಟಿ.ಸಿ.ಪಿ. ಜಿಲ್ಲಾ ಸಲಹೆಗಾರರು ಗೋಪಾಲ ಸುರಪುರ ಅವರು ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ-2003 ಕುರಿತು ಮಾತನಾಡುತ್ತಾ ತಂಬಾಕು ಬಳಕೆ ಹಾಗೂ ಮಾರಾಟ ಕೋಟ್ಪಾ ಕಾಯ್ದೆಯಡಿ ಮಾಡಲು ಸೆಕ್ಷನ್ 4 ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ, ಸೆಕ್ಷನ್5 ತಂಬಾಕು ಉತ್ಪನ್ನಗಳ ನೇರ ಪರೋಕ್ಷಜಾಹಿರಾತು ನಿಷೇಧ, ಸೆಕ್ಷನ್ 6ಎ 18 ವರ್ಷದೊಳಗಿನವರಿಗೆ ನಿಷೇಧ, 6ಬಿ ಶಿಕ್ಷಣ ಸಂಸ್ಥೆಗಳ ಆವರಣದಿಂದ 100 ಗಜದ ವರೆಗೆತಂಬಾಕು ನಿಷೆಧ, ಸೆಕ್ಷನ್ 7 ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲೆ ಆರೋಗ್ಯಎಚ್ಚರಿಕೆಚಿನ್ಹೆಕಡ್ಡಾಯ, ಈ ಕಾಯ್ದೆಗಳ ಅನುಷ್ಟಾನ ಕುರಿತು ಮಾತನಾಡಿದರು

    ಶ್ರೀಮತಿ ವರ್ಷಾ ಗುಗ್ಗರಿ ಅವರು ಪ್ರಾರ್ಥಿಸಿದರು. ಎಂ.ಎಸ್. ರಬ್ಬನಗೌಡರ ಕಾರ್ಯಕ್ರಮ ನಿರೂಪಿಸಿದರು.   ವಿಠ್ಠಲ್ ನಾಯ್ಕ ಎನ್.ಸಿ.ಡಿ .ಸ್ವಾಗತಿಸಿ ವಂದಿಸಿದರು, ಕಾರ್ಯಕ್ರಮದಲ್ಲಿ ಶ್ರೀಮತಿ ರಜನಿ ಪಾಟೀಲ ಅಧ್ಯಕ್ಷರು ರೋಟರಿ ಇನ್ನರ್‍ವ್ಹೀಲ್ ಗದಗ,  ಶ್ರೀಮತಿ ಕವಿತಾ ಹೊನ್ನಳ್ಳಿ,  ಶಿವಕುಮಾರ ಬಗಾಡೆ, ಈ ಮಾರುತಿ, ವೀರಪ್ಪ ಕೋಳಿವಾಡ, ಹಾಗೂ ಜಿಲ್ಲಾ ಸಮೀಕ್ಷಾಘಟಕದ ಸಿಬ್ಬಂದಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts