More

    ಒಟ್ಟಿಗೆ ಕಾಣಿಸಿಕೊಂಡ ತಮನ್ನಾ, ವಿಜಯ್​ ವರ್ಮಾ; ಡೇಟಿಂಗ್ ಮಾಡ್ತಿರೋದು ನಿಜಾನಾ?

    ಮುಂಬೈ: ಗೋವಾದಲ್ಲಿ ಹೊಸ ವರ್ಷದ ಪಾರ್ಟಿಯೊಂದರಲ್ಲಿ ಜೋಡಿಯೊಂದು ಅಪ್ಪಿ, ಮುದ್ದಾಡುತ್ತಿರುವ ವಿಡಿಯೋ ವೈರಲ್​ ಆಗಿದ್ದು, ಆ ಪ್ರಣಯ ಪಗಳು ಬೇರಾರೂ ಅಲ್ಲ, ತಮನ್ನಾ ಮತ್ತು ವಿಜಯ್​ ವರ್ಮಾ ಎಂದು ಹೇಳಲಾಗಿತ್ತು. ಆಗಲೇ ಅವರಿಬ್ಬರೂ ಡೇಟಿಂಗ್​ ಮಾಡುತ್ತಿರುವ ಗುಮಾನಿ ಹಲವರಿಗೆ ಬಂದಿತ್ತು. ಈ ಕುರಿತು ಸಾಕಷ್ಟು ಸುದ್ದಿಯೂ ಆಗಿತ್ತು. ಆದರೆ, ಈ ಕುರಿತು ತಮನ್ನಾ ಭಾಟಿಯಾ ಆಗಲೀ, ವಿಜಯ್​ ಆಗಲೀ ಏನೂ ಮಾತಾಡಿರಲಿಲ್ಲ.

    ಇದನ್ನೂ ಓದಿ: ‘ಸಿಂಗಂ’ ಜತೆಗೆ ‘ಸಿಂಬ’; ಅಜಯ್​ ದೇವಗನ್​ ಚಿತ್ರದಲ್ಲಿ ರಣವೀರ್​ ಸಿಂಗ್​

    ಈಗ ತಮನ್ನಾ ಮತ್ತು ವಿಜಯ್​ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ಸಮಾರಂಭವೊಂದರಲ್ಲಿ ಒಟ್ಟಿಗೆ ಕೈಕೈ ಹಿಡಿದು ಬಂದು, ತಮ್ಮ ಬಗ್ಗೆ ಕೇಳಿ ಬರುತ್ತಿರುವ ಸುದ್ದಿಗಳು ಬರೀ ಊಹಾಪೋಹಗಳಷ್ಟೇ ಅಲ್ಲ, ನಿಜವಾಗುವ ಸಾಧ್ಯತೆ ಇದೆ ಎಂದು ಹಿಂಟ್​ ಕೊಟ್ಟಿದ್ದಾರೆ.

    ಕೆಲವು ದಿನಗಳ ಹಿಂದಷ್ಟೇ ನಟ ತಮನ್ನಾ ಮುಂಬೈ ಮೂಲದ ಉದ್ಯಮಿ ಜತೆ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಅದಕ್ಕೆ ಖುದ್ದು ತಮನ್ನಾ, ತಾವೇ ಹುಡುಗನ ವೇಷ ಧರಿಸಿ ಇವರೇ ನನ್ನ ಬಾಯ್​ಫ್ರೆಂಡ್​ ಎಂದು ಸ್ಪಷ್ಟನೆ ನೀಡಿದ್ದರು. ಆ ನಂತರ ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ತಮನ್ನಾ ಮತ್ತು ವಿಜಯ್​ ವರ್ಮಾ ಒಟ್ಟಿಗೆ ಸಿಕ್ಕಿಬಿದ್ದಿದ್ದರು. ಈಗ ಅವರಿಬ್ಬರೂ ಜತೆಯಾಗಿ ಓಡಾಡುತ್ತಿರುವುದು, ಅವರಿಬ್ಬರೂ ಪ್ರೇಮಿಗಳು ಎಂಬ ವಿಷಯಕ್ಕೆ ಇನ್ನಷ್ಟು ಪುಷ್ಠಿ ನೀಡುತ್ತದೆ.

    ಇದನ್ನೂ ಓದಿ: ಶಾರುಖ್​ ಖಾನ್​ ಅಭಿನಯದ ‘ಪಠಾಣ್​’ ಚಿತ್ರವು ಓಟಿಟಿಗೆ ಬರೋದು ಯಾವಾಗ?

    ಹಾಗಾದರೆ, ತಮನ್ನಾ ಮತ್ತು ವಿಜಯ್​ ತಮ್ಮ ಪ್ರೀತಿಯ ವಿಷಯವನ್ನು ಯಾವಾಗ ಬಹಿರಂಗಪಡಿಸುತ್ತಾರೆ ಮತ್ತು ಯಾವಾಗ ಮದುವೆಯಾಗುವುದಾಗಿ ಅಧಿಕೃತವಾಗಿ ಘೋಷಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಆ ಸಮಯ ಯಾವಾಗ ಬರುತ್ತದೋ ನೋಡಬೇಕು.

    ನಿಮ್ಮನ್ನೆಲ್ಲ ಕೆಲಸದಿಂದ ಕಿತ್ತು ಹಾಕಬೇಕು; ಜಯಾ ಬಚ್ಚನ್​ ಹೀಗೆ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts