More

    ಮುಖಕ್ಕೆ ಕಪ್ಪು ಮಸಿ ಬಳಿದುಕೊಂಡು ತಮನ್ನಾ ಪ್ರತಿಭಟನೆ!; ಕಾರಣ ಏನಿರಬಹುದು?

    ಅಮೆರಿಕದಲ್ಲಿ ಜನಾಂಗೀಯ ನಿಂದನೆ ತಾರಕಕ್ಕೇರಿದೆ. ಕರೊನಾ ಕರಾಳತೆಯ ಕಾಲಘಟ್ಟದಲ್ಲೂ ಜನ ಬೀದಿಗಿಳಿದು ಧರಣಿ ನಡೆಸುತ್ತಿದ್ದಾರೆ. ಕಪ್ಪು ಜನಾಂಗದ ಆಫ್ರಿಕಾ ಮೂಲದ 46 ವರ್ಷದ ಜಾರ್ಜ್​ ಪ್ಲಾಯಿಡ್​ ಹತ್ಯೆಗೆ ಸಂಬಂಧಿಸಿದಂತೆ ಇಡೀ ಅಮೆರಿಕಾ ಹೊತ್ತಿ ಉರಿಯುತ್ತಿದೆ. ಆ ಸಾವನ್ನು ಖಂಡಿಸಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಮುಖಕ್ಕೆ ಕಪ್ಪು ಮಸಿ ಬಳಿದುಕೊಂಡು ಖಂಡನೆ ವ್ಯಕ್ತಪಡಿಸಿದ್ದಾರೆ. ಆ ಸಾವಿಗೆ ನ್ಯಾಯ ಸಿಗಬೇಕು ಎಂದಿದ್ದಾರೆ.

    ಇದನ್ನೂ ಓದಿ: ಫೋರ್ಬ್ಸ್ ಪಟ್ಟಿಯಲ್ಲಿ ಏಕೈಕ ಭಾರತೀಯ ಅಕ್ಷಯ್ … ಕಳೆದ ವರ್ಷದ ಸಂಪಾದನೆ ಎಷ್ಟು?

    ಹೌದು, ದಕ್ಷಿಣ ಭಾರತದ ನಟಿಯರಾದ, ಸಮಂತಾ ಅಕ್ಕಿನೇನಿ, ತ್ರಿಷಾ ಕೃಷ್ಣನ್​ ಸೇರಿ ಹಲವರು ಸಾಮಾಜಿಕ ಜಾಲತಾಣದಲ್ಲಿ ಅಮೆರಿಕದಲ್ಲಿ ನಡೆದ ಹತ್ಯೆಯನ್ನು ಖಂಡಿಸಿದ್ದರು. ಬ್ಲಾಕ್​ ಔಟ್​ ಟ್ಯೂಸಡೆ ಹ್ಯಾಷ್​ಟ್ಯಾಗ್​ ಹಾಕಿ ಆ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದರು. ಇದೀಗ ತಮನ್ನಾ ಸಹ ವಿಭಿನ್ನ ರೀತಿಯಲ್ಲಿ ಧರಣಿಗೆ ಮುಂದಾಗಿದ್ದಾರೆ.

    ಇದನ್ನೂ ಓದಿ: ಪ್ರೇಕ್ಷಕರ ಕ್ಷಮೆ ಕೇಳಿದ ನಿರ್ದೇಶಕ ರಘುರಾಮ್!

    ‘ನಿನ್ನ ಮೌನ ಯಾವತ್ತೂ ನಿನ್ನನ್ನು ರಕ್ಷಿಸಲಾರದು. ಅದು ಮನುಷ್ಯನಗಾದರೂ ಅಷ್ಟೇ, ಪ್ರಾಣಿಗಾದರೂ ಅಷ್ಟೇ. ಹಾಗೇ ಯಾವತ್ತೂ ಮೌನವಾಗಿರುವುದು ಜಾಗತೀಕ ಕಾನೂನಿಗೆ ವಿರುದ್ಧ. ನಾವು ಕಲಿಯಬೇಕಾದ್ದು ಬಹಳಷ್ಟಿದೆ. ಪ್ರೀತಿ ಕೊಡುವುದನ್ನು ನಿತ್ಯ ರೂಢಿ ಮಾಡಿಕೊಳ್ಳಬೇಕಿದೆ. ಇದು ಎಲ್ಲ ಜೀವಿಗಳಿಗೆ ಸಂಬಂಧಿಸಿದ್ದು’ ಎಂದು ಮುಖಕ್ಕೆ ಕಪ್ಪು ಮಸಿ ಬಳಿದುಕೊಂಡು ಪ್ರತಿಭಟಿಸುತ್ತಿದ್ದಾರೆ.

    ಇನ್ನು ಇತ್ತೀಚೆಗೆ ಕೇರಳದಲ್ಲಿ ಗರ್ಭಿಣಿ ಆನೆಯನ್ನು ಮದ್ದು ತುಂಬಿದ ಪೈನಾಪಲ್​ ಹಣ್ಣು ನೀಡಿ ಹತ್ಯೆ ಮಾಡಲಾಗಿತ್ತು. ಆ ಕ್ರೂರಿಗಳಿಗೂ ಸರಿಯಾದ ಶಿಕ್ಷೆ ವಿಧಿಸಬೇಕು ಎಂದಿದ್ದರು. ‘ಕೇರಳದಲ್ಲಿ ಏನಾಗುತ್ತಿದೆ. ಆನೆಯನ್ನು ಹತ್ಯೆ ಮಾಡಿದ ಘಟನೆ ನಿಜಕ್ಕೂ ಹೃದಯವಿದ್ರಾವಕ. ಪ್ರಾಣಿ ರಕ್ಷಣೆಗಾಗಿ ಇನ್ನಾದರೂ ಸರ್ಕಾರ ಕಠಿಣ ಕಾನೂನು ಜಾರಿಗೆ ತರುತ್ತದೆ ಎಂಬ ಭರವಸೆ’ ಇದೆ ಎಂದಿದ್ದರು.

    ನೆಟ್‌ಫ್ಲಿಕ್ಸ್, ಅಮೆಜಾನ್ ಎರಡಕ್ಕೂ ‘ತಲೈವಿ’ ಮಾರಾಟ … ಇದು ಹೇಗೆ ಸಾಧ್ಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts