More

    ಜ.5ರಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

    ರಿಪ್ಪನ್‌ಪೇಟೆ: ಹೊಸನಗರ ತಾಲೂಕಿನ ಬಟ್ಟೆಮಲ್ಲಪ್ಪದಲ್ಲಿ ಜ.5ರಂದು ನಡೆಯುವ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ರಿಪ್ಪನ್‌ಪೇಟೆಯ ಸಾಹಿತಿ ಹನುಮಂತ ಅನಂತ ಪಾಟೀಲ್ ಆಯ್ಕೆಯಾಗಿದ್ದಾರೆ.
    ಮಂಗಳವಾರ ತಾಲೂಕು ಕಸಾಪ ಪದಾಧಿಕಾರಿಗಳು ಸಮ್ಮೇಳನಾಧ್ಯಕ್ಷರನ್ನು ಭೇಟಿ ಮಾಡಿ ಅಧಿಕೃತ ಆಹ್ವಾನ ನೀಡಿದರು. ತಾಲೂಕು ಕಸಾಪ ಅಧ್ಯಕ್ಷ ತ.ಮ.ನರಸಿಂಹ, ಪದಾಧಿಕಾರಿಗಳಾದ ಮಂಜುನಾಥ ಕಾಮತ್, ದೇವದಾಸ್, ಹಸನಬ್ಬ, ರಾಘವೇಂದ್ರ, ಶಿಕ್ಷಕರಾದ ನಾಗಭೂಷಣ, ರವಿಕುಮಾರ್ ಇದ್ದರು.

    ಮಲೆನಾಡ ನಂಟು:
    ಹನುಮಂತ ಅನಂತ ಪಾಟೀಲ ಅವರು 1948ರ ಜೂ.1ರಂದು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಹಾವೇರಿ ಜಿಲ್ಲೆ ಶಿಗ್ಗಾಂ ತಾಲೂಕಿನ ತಡಸ ಗ್ರಾಮದಲ್ಲಿ ನಡೆಸಿದರು. 1975ರಲ್ಲಿ ಪೊಲೀಸ್ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಬಹುತೇಕ ಸೇವೆಯನ್ನು ಮಲೆನಾಡಿನ ಭಾಗಗಳಲ್ಲಿಯೇ ಮುಗಿಸಿ 2006ರಲ್ಲಿ ನಿವೃತ್ತಿ ಹೊಂದಿದರು. ಮಲೆನಾಡಿನ ಪ್ರಕೃತಿ ಸೌಂದರ್ಯ ಪಾಟೀಲರನ್ನು ಕವಿಯನ್ನಾಗಿ ರೂಪಿಸಿದೆ. ಪರಿಣಾಮ ಅನೇಕ ಕವಿತೆ, ಕವನ, ಕಥೆ, ಲೇಖನ, ಕಾದಂಬರಿಗಳನ್ನು ಬರೆದಿದ್ದಾರೆ. ಚುಟುಕುಗಳು, ಹನಿಗವನಗಳ ಮೂಲಕ ಓದುಗರನ್ನು ಆಕರ್ಷಿಸಿದ್ದಾರೆ. ಇವರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಅನೇಕ ಸಂಘ ಸಂಸ್ಥೆಗಳು ಗೌರವಿಸಿ ಸನ್ಮಾನಿಸಿವೆ. ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯಲ್ಲಿ ನಿವೃತ್ತ ಜೀವನವನ್ನು ಪತ್ನಿ ಭಾರತಿ, ಮಗಳು ರಾಜೇಶ್ವರಿ, ಪುತ್ರ ಭಾರ್ಗವ ಜತೆ ನಡೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts