More

    ಬಿರೂರಲ್ಲಿ ಕರೊನಾ ಸೋಂಕಿನ ಅಂತ್ಯಕ್ರಿಯೆಗೆ ಆಕ್ಷೇಪ

    ಬೀರೂರು: ಕರೊನಾದಿಂದ ಮೃತಪಟ್ಟ ಕಡೂರು ಶಿಕ್ಷಕನ ಅಂತ್ಯಕ್ರಿಯೆಯನ್ನು ಬೀರೂರಿನ ರೋಟರಿ ಮೋಕ್ಷಧಾಮದಲ್ಲಿ ನಡೆಸಿದ ತಾಲೂಕು ಆಡಳಿತದ ನಿರ್ಧಾರಕ್ಕೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

    ಗುರುವಾರ ಕರೊನಾದಿಂದ ಮೃತಪಟ್ಟ ಶಿಕ್ಷಕನ ಅಂತ್ಯಕ್ರಿಯೆಯನ್ನು ಕಡೂರಿನ ಮೋಕ್ಷಧಾಮದಲ್ಲಿ ನಡೆಸಲು ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆದರೆ ಕಡೂರು ನಾಗರಿಕರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ತಾಲೂಕು ಆಡಳಿತ ರಾತ್ರಿ 10 ಗಂಟೆಗೆ ಆಂಬುಲೆನ್ಸ್ ಮೂಲಕ ಸ್ಥಳಾಂತರಿಸಿ ಬೀರೂರಿನ ಮೋಕ್ಷಧಾಮದಲ್ಲಿ ಅಂತ್ಯಕ್ರಿಯೆ ನಡೆಸಲು ಮುಂದಾಯಿತು. ವಿಷಯ ತಿಳಿದ ಮಹಾನವಮಿ ಬಯಲು, ಶಿವಾಜಿನಗರ ಮತ್ತು ಸರಸ್ವತಿಪುರಂ ಬಡಾವಣೆ ನಿವಾಸಿಗಳು ಕರೊನಾ ಸೋಂಕಿತ ವ್ಯಕ್ತಿ ಅಂತ್ಯಕ್ರಿಯೆ ನಡೆಸಲು ವಿರೋಧ ವ್ಯಕ್ತಪಡಿಸಿದರು.

    ಮೋಕ್ಷಧಾಮಕ್ಕೆ ತೆರಳುವ ಮಾರ್ಗದಲ್ಲಿ ಆಂಬುಲೆನ್ಸ್ ತಡೆಯಲು ಯತ್ನಿಸಿದರು. ಆದರೆ ತಾಲೂಕು ಆಡಳಿತ ಯಗಟಿ ರಸ್ತೆಯ ಪರ್ಯಾಯ ಮಾರ್ಗದ ಮೂಲಕ ನಾಗರಿಕರ ಕಣ್ತಪ್ಪಿಸಿ ಮೋಕ್ಷಧಾಮ ತಲುಪಿ ಕಡೂರಿನಿಂದ ತಂದ ಕಟ್ಟಿಗೆ ಮತ್ತು ಇಂಧನ ಬಳಸಿ ಮೃತದೇಹದ ದಹನ ನಡೆಸಲಾಯಿತು. ಇದನ್ನು ಪ್ರಶ್ನಿಸಿದವರ ಮೇಲೆ ದೌರ್ಜನ್ಯ ನಡೆಸಿ ಲಾಟಿ ಪ್ರಹಾರ ನಡೆಸಿದರು ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದರು.

    ಶುಕ್ರವಾರ ಬೆಳಗ್ಗೆ ಪುರಸಭೆ ಎದುರು ಪ್ರತಿಭಟನೆ ನಡೆಸಿದ ನಾಗರಿಕರು, ಬೀರೂರಲ್ಲಿ ಅಂತ್ಯಕ್ರಿಯೆ ನಡೆಸಲು ಅವಕಾಶ ಕೊಟ್ಟಿದ್ದು ಸರಿಯಲ್ಲ. ಮೃತರ ಸ್ವಗ್ರಾಮ ಅಥವಾ ದೂರದ ಪ್ರದೇಶದಲ್ಲಿ ಅಂತ್ಯಕ್ರಿಯೆ ಮಾಡಬಹುದಿತ್ತು. ಬೀರೂರಲ್ಲಿ ಈಗಾಗಲೇ ಕರೊನಾ ಭಯದಲ್ಲಿ ಜೀವನ ನಡೆಸುತ್ತಿದ್ದಾರೆ. ಇದರಿಂದ 4 ತಿಂಗಳಿನಿಂದ ಪಟ್ಟಣದ ಸುರಕ್ಷತೆಗೆ ಕೈಗೊಂಡ ಎಲ್ಲ ಕ್ರಮಗಳು ವ್ಯರ್ಥವಾಗಿದೆ. ತಾಲೂಕು ಆಡಳಿತ ಮತ್ತೆ ಈ ನಿರ್ಧಾರ ಕೈಗೊಂಡರೆ ಪ್ರತಿಭಟನೆ ನಡೆಸಲಾಗವುದು ಎಂದು ಎಚ್ಚರಿಕೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts