More

    ಫೆ.4 ರಂದು ತುಂಬಗಿಯಲ್ಲಿ ಪ್ರತಿಭಟನೆ

    ತಾಳಿಕೋಟೆ: ತುಂಬಗಿ ಗ್ರಾಮದಲ್ಲಿ ಕಳೆದ 1 ವರ್ಷದಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ ಧೋರಣೆ ಖಂಡಿಸಿ ಫೆ.4 ರಂದು ತುಂಬಗಿ ಗ್ರಾಮದ ಮುಖ್ಯರಸ್ತೆ ತಡೆ ನಡೆಸಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಕರವೇ ತಾಲೂಕು ಉಪಾಧ್ಯಕ್ಷ ಜೈಭೀಮ ಮುತ್ತಗಿ ಹೇಳಿದರು.
    ನೀರಿನ ಸಮಸ್ಯೆ ಕುರಿತು ಗ್ರಾಪಂ ಪಿಡಿಒ, ಜಿಪಂ ಸಿಇಒ, ಜಿಲ್ಲಾಧಿಕಾರಿ ಹಾಗೂ ಸಂಬಂಧಿತ ಎಲ್ಲ ಹಿರಿಯ ಅಧಿಕಾರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸಂಘಟನೆ ಹಲವಾರು ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಕರವೇ ತಾಲೂಕು ಘಟಕದ ಅಧ್ಯಕ್ಷ ನಿಸಾರ ಬೇಪಾರಿ, ತುಂಬಗಿ ಗ್ರಾಮ ಘಟಕ ಅಧ್ಯಕ್ಷ ಅನೀಲ ಗೊಟಗುಣಕಿ, ಮುಖಂಡರಾದ ಮುತ್ತು ಮಾಳೇಕರ, ದ್ಯಾವಪ್ಪ ದೊಡಮನಿ, ಗುರುಪ್ರಸಾದ ಬಿ.ಜಿ., ದೇವು ಗೊಟಗುಣಕಿ, ಸಾಹೇಬಣ್ಣ ಗುಂಡಕನಾಳ, ಹಳ್ಳಿ ಹೈದರ, ಬಸವರಾಜ ತಳವಾರ, ಶೇಖರ ಹಡಪದ, ಹಣಮಂತ್ರಾಯ ಮಂಗ್ಯಾಳ, ಬಸವರಾಜ ತಳವಾರ, ಬಸವರಾಜ ಸಜ್ಜನ, ಅಶೋಕ ಅಮ್ಮಾಪುರ, ಅಬುಬಕರ ಲಾಹೋರಿ, ನಬಿ ಲಾಹೋರಿ, ಜಬ್ಬಾರ ಹವಾಲ್ದಾರ್, ರಾಮು ಜಂಬಗಿ, ಯಮನಪ್ಪ ಮಾದರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts