More

    ಪ್ರತಿಭೆಗಳು ರಾಜ್ಯ ಮಟ್ಟದಲ್ಲಿ ಮಿಂಚಲಿ

    ಅರಕೇರಾ: ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ವಿನೂತನ ಕಾರ್ಯಕ್ರಮವಾಗಿದ್ದು, ಕಲಿಕಾ ಅಂತರ ಸರಿದೂಗಿಸಲು ಸೂಕ್ತ ವೇದಿಕೆಯಾಗಿದೆ ಎಂದು ಬಿಇಒ ಎಚ್.ಸುಖದೇವ ಹೇಳಿದರು.

    ಇದನ್ನೂ ಓದಿ: ಅರ್ಹ ಪ್ರತಿಭೆಗೆ ಪ್ರಾಮಾಣಿಕ ಅಂಕ ಸಿಗಲಿ

    ತಾಲೂಕಿನ ಕ್ಯಾದಿಗ್ಗೇರಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ಹಾಗೂ ಗ್ರಾಪಂ ಸಹಯೋಗದೊಂದಿಗೆ ಶುಕ್ರವಾರ ಏರ್ಪಡಿಸಿದ್ದ ಪ್ರತಿಭಾ ಕಾಂಜಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಪ್ರತಿಭಾ ಕಾರಂಜಿ ಎಲ್ಲ ರಂಗದಲ್ಲಿ ಆಸಕ್ತಿ ಇರುವ ಮಕ್ಕಳ ಪ್ರತಿಭೆಯನ್ನು ಪ್ರೇರೇಪಿಸುತ್ತಿದೆ. ಮಕ್ಕಳಲ್ಲಿ ಅಡಗಿರುವ ಶಕ್ತಿಯನ್ನು ಗುರುತಿಸುವ ವಿಶೇಷ ಶಕ್ತಿ ಶಿಕ್ಷಕರಿಗಿದೆ.

    ಲಿಂಗ ಸಮಾನತೆ, ವಿಕಲಚೇತನ ಸೇರಿ ಪ್ರತಿಯೊಬ್ಬ ಮಕ್ಕಳು ಮುಖ್ಯವಾಹಿನಿಗೆ ತರಲು ಶಿಕ್ಷಣ ಇಲಾಖೆ ವಿಶೇಷ ಕಾಳಜಿ ವಹಿಸುತ್ತಿದೆ ಎಂದರು.
    ಪಾರದರ್ಶಕ ತೀರ್ಪು ನೀಡುವ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟದವರೆಗೆ ಪ್ರತಿನಿಧಿಸಲು ಪ್ರೋತ್ಸಾಹಿಸಬೇಕು.

    ಅಂಗನವಾಡಿ ಹಾಗೂ ಶಾಲೆ ಅಭಿವೃದ್ಧಿಗೆ ಸ್ಥಳೀಯ ಗ್ರಾಪಂ ಆಡಳಿತ ಉತ್ತಮ ಪ್ರೋತ್ಸಾಹ ನೀಡುತ್ತಿದೆ ಎಂದು ಶ್ಲಾಘಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಶಿವರಾಜ ಪೂಜಾರಿ ಮಾತನಾಡಿ, ಕಲಿಕೋತ್ಸವ, ಕ್ರೀಡಾಕೂಟ, ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದರಿಂದ ಮಕ್ಕಳಲ್ಲಿ ಶೈಕ್ಷಣಿಕ ಉತ್ಸಾಹ ಹೆಚ್ಚುತ್ತಿದೆ ಎಂದರು.

    ವಿಕಲಚೇತನರಿಗೆ ಚೆಕ್ ವಿತರಣೆ :
    ಕ್ಯಾದಿಗ್ಗೇರಾ ಕ್ಲಸ್ಟರ್ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಚನ್ನಬಸವ, ಮಾರೆಮ್ಮ, ರಾಕೇಶ, ತಾಯಮ್ಮ, ಪ್ರಕಾಶ, ಖಾಜುದ್ದೀನ್ ವಿಕಲಚೇತನ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ 4,500 ರೂ. ಶಿಷ್ಯವೇತನದ ಚೆಕ್ ಶಿಕ್ಷಣ ಇಲಾಖೆಯಿಂದ ವಿತರಿಸಲಾಯಿತು.

    ವಲಯದ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕರಾದ ಲಕ್ಷ್ಮಣ, ಭೋಗಣ್ಣ, ಸದಾಶಿವಪ್ಪ, ಮುನಿಸ್ವಾಮಿ ಅವರನ್ನು ಶಾಲಾ ಸಿಬ್ಬಂದಿ, ಸ್ಥಳೀಯ ಗ್ರಾಪಂಯಿಂದ ವಿಶೇಷ ಸನ್ಮಾನ ಮಾಡಿದರು.

    ಪಿಡಿಒ ಸಿಬಿ ಪಾಟೀಲ್, ಅಂಗನವಾಡಿ ಮೇಲ್ವಿಚಾರಕಿ ಶಾಂತಾಬಾಯಿ, ಗ್ರಾಪಂ ಸದಸ್ಯರಾದ ಪದ್ಮಶ್ರೀ ಕಿಷ್ಟಪ್ಪ ನಾಯಕ ಮಾ.ಪಾ, ಅಮರಮ್ಮ ಮಾನಪ್ಪ, ಮುಕ್ಕಣ್ಣ ನಾಯಕ, ಹೇಮ್ಲವ್ವ, ಮಲ್ಲಮ್ಮ ಯಲ್ಲಪ್ಪ, ಮಾಳಮ್ಮ ರಂಗಪ್ಪ, ಶೃತಿ ಸಂಸ್ಕೃತಿ ಸಂಸ್ಥೆ ಸಂಯೋಜಕ ರಾಮಣ್ಣ ಎನ್.ಗಣೇಕಲ್, ಮಾಜಿ ಸೈನಿಕ ಸಿದ್ದಪ್ಪ, ಸಿಆರ್‌ಪಿ ಅರುಣ ಕುಮಾರ, ಮುಖ್ಯ ಶಿಕ್ಷಕಿ ಬಿ.ಸುರೇಖ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts