More

    ಪ್ರತಿಭೆ ಪಲಾಯನ ಒಳ್ಳೆಯ ಬೆಳವಣಿಗೆಯಲ್ಲ

    ಶಿರಸಿ: ಶಿಕ್ಷಣದ ಮೂಲ ಉದ್ದೇಶ ಪರದೇಶಕ್ಕೆ ತೆರಳುವುದಲ್ಲ. ಪ್ರತಿಭೆ ಪಲಾಯನ ಒಳ್ಳೆಯ ಬೆಳವಣಿಗೆಯಲ್ಲ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

    ಸ್ವರ್ಣವಲ್ಲೀಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಕೃಷಿ ಜಯಂತಿ ಸಮಾರೋಪದಲ್ಲಿ ಅವರು ಮಾತನಾಡಿದರು. ಕೃಷಿ ಇಟ್ಟುಕೊಂಡೇ ಮುಂದುವರಿಯಬೇಕು. ನಮ್ಮ ಸಂಸ್ಕೃತಿ ಇಟ್ಟುಕೊಂಡೇ ಮುಂದೆ ಹೋಗಬೇಕು. ನಗರಕ್ಕೆ ವಲಸೆ ಹೋದರೆ ಸಂಸ್ಕೃತಿ, ಧಾರ್ಮಿಕ ಆಚರಣೆ ಇಲ್ಲವಾಗುತ್ತಿದೆ. ಸಾಮೂಹಿಕ ಆಚರಣೆ ಕೈ ಬಿಡಬಾರದು ಎಂದರು.

    ಯುವಕರ ಪ್ರವಾಹ ನಗರ ಮುಖಿಯಾಗಿದೆ. ಇದನ್ನು ತಡೆಯದೇ ಹೋದರೆ ಕೃಷಿ ಜತೆಗೆ ಸಹಕಾರಿ ಆಂದೋಲನ ಕೂಡ ದುರ್ಬಲವಾಗುತ್ತದೆ. ಕಲಿತವರು ಕೃಷಿಗೆ ಬಂದರೆ ಇನ್ನಷ್ಟು ಬೆಳವಣಿಗೆ ಸಾಧ್ಯ. ಮೂಲಾಧಾರವಾದ ಕೃಷಿ ಬಿಟ್ಟು ಸಾಧನೆ ಮಾಡಬಾರದು. ಯಾವುದೇ ಶಿಕ್ಷಣ ಪಡೆದವರೂ ಕೃಷಿಗೆ ವಾಪಸು ಬರಬಹುದು. ಇದನ್ನು ಯುವಕರು ಅರ್ಥ ಮಾಡಿಕೊಳ್ಳಬೇಕು ಎಂದರು.

    ನಮಗೆಲ್ಲ ಆಧಾರವಾಗಿರುವುದು ಕೃಷಿ. ಉಪ ಕಸುಬು ವ್ಯಾಪಾರ, ಕೈಗಾರಿಕೆ, ವೃತ್ತಿ ಆಗಬೇಕು. ಮೂಲ ಧ್ಯೇಯ ಬಿಡಬಾರದು ಎಂದರು.
    ಕಿರಿಯ ಯತಿಗಳಾದ ಶ್ರೀಆನಂದ್ಬೋಧೇಂದ್ರ ಸರಸ್ವತ್ಮೀಹಾ ಸ್ವಾಮೀಜಿಗಳು ಆರ್ಶೀವಚನ ನೀಡಿ, ನಮಗೆ ದೇವರಲ್ಲಿ ನಿಜವಾದ ಭಕ್ತಿ ಇದ್ದರೆ ದೇವರು ಒಲಿಯುತ್ತಾನೆ ಎಂಬುದಕ್ಕೆ ನೃಸಿಂಹನೇ ಸಾಕ್ಷಿ. ನಮ್ಮಲ್ಲೂ ಕಾಮ, ಕ್ರೋಧ, ಮದ, ಮತ್ಸರಗಳೆಂಬ ಹಿರಣ್ಯ ಕಶ್ಯಪು ಇದ್ದಾನೆ. ಪ್ರಹ್ಲಾದನ ಭಕ್ತಿ ಎಲ್ಲರಲ್ಲೂ ಇರಲಿ. ಜ್ಞಾನ ಎಂಬ ನರಸಿಂಹನ ಮೂಲಕ ಹಿರಣ್ಯಕಶ್ಯಪು ಎಂಬ ಅಜ್ಞಾನ ನಾಶವಾಗಲಿ ಎಂದರು.

    ಟಿಎಸ್‌ಎಸ್ ಗೋಪಾಲಕೃಷ್ಣ ವೈದ್ಯ, ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ, ಕಾರ್ಯದರ್ಶಿ ಜಿ.ವಿ. ಹೆಗಡೆ ಗೊಡವೆಮನೆ, ಪ್ರತಿಷ್ಠಾನದ ಅಧ್ಯಕ್ಷ ಆರ್.ಎನ್. ಹೆಗಡೆ ಉಳ್ಳಿಕೊಪ್ಪ, ಕಾರ್ಯದರ್ಶಿ ಸುರೇಶ ಹಕ್ಕಿಮನೆ ಇತರರು ಇದ್ದರು.

    ಪ್ರಶಸ್ತಿ ಪ್ರದಾನ

    ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಕೃಷಿ ಪ್ರತಿಷ್ಠಾನ ನೀಡುವ ರಾಜ್ಯ ಮಟ್ಟದ ಕೃಷಿ ಸಂಬಂಧಿತ ಪ್ರಶಸ್ತಿಯನ್ನು ಉಭಯ ಶ್ರೀಗಳು ಪ್ರದಾನ ಮಾಡಿದರು.

    ಉತ್ತಮ ಕೃಷಿಕ (ಕೃಷಿ ಕಂಠೀರವ) ಪ್ರಶಸ್ತಿಯನ್ನು ಯಲ್ಲಾಪುರ ಬಾರೆ ಸಮೀಪದ ವಿಘ್ನೇಶ್ವರ ನಾರಾಯಣ ಭಟ್ಟ ಹೊಸ್ತೋಟ, ಸಾಧಕ ಕೃಷಿ ಮಹಿಳೆ ಪ್ರಶಸ್ತಿಗೆ ಯಲ್ಲಾಪುರ ಸಬಗೇರಿ ಹುತ್ಕಂಡದ ವನಿತಾ ರಾಮಚಂದ್ರ ಭಟ್, ಉತ್ತಮ ಕೃಷಿ ಅವಿಭಕ್ತ ಕುಟುಂಬ ಪ್ರಶಸ್ತಿಯನ್ನು ಹೆಗಡೆಕಟ್ಟ ಹಲಸಿನಕಟ್ಟೆಯ ಎಂ.ವಿ. ಹೆಗಡೆ ಕುಟುಂಬ, ಸಾಧಕ ಕೃಷಿ ಕುಶಲಕರ್ಮಿ ಪ್ರಶಸ್ತಿಯನ್ನು ಸೋಂದಾ ಕೆಶಿನ್ಮನೆಯ ಸುರೇಶ ಮರಾಠಿ ಅವರಿಗೆ ಪ್ರದಾನ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts