More

    ತಳವಾರ ಸಮುದಾಯದ ಧರಣಿ ಸತ್ಯಾಗ್ರಹಕ್ಕೆ ಕಟಕಧೋಂಡ ಬೆಂಬಲ

    ಚಡಚಣ: ತಳವಾರ, ಪರಿವಾರ ಜನಾಂಗಕ್ಕೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಚಡಚಣ ತಾಲೂಕು ತಳವಾರ ಹಾಗೂ ಪರಿವಾರ ಸಮಾಜ ಸೇವಾ ಸಂಘದ ವತಿಯಿಂದ ಪಟ್ಟಣದ ಎಪಿಎಂಸಿ ಆವರಣದ ಮುಂದೆ ನಡೆದಿರುವ ಧರಣಿ ಸ್ಥಳಕ್ಕೆ ಮಾಜಿ ಶಾಸಕ ವಿಠ್ಠಲ ಕಟಕಧೋಂಡ ಬುಧವಾರ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
    ನಂತರ ಮಾತನಾಡಿದ ಅವರು, ತಳವಾರ, ಪರಿವಾರ ಸಮುದಾಯಗಳು ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿವೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಿದೆ. ಆದರೆ, ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಈ ಸಮುದಾಯಗಳನ್ನು ತುಳಿಯುವಂತಹ ಕೆಲಸ ಮಾಡುತ್ತಿದೆ. ಸರ್ಕಾರದ ಈ ನಡೆಯಿಂದ ಸಂವಿಧಾನದ ಉಲ್ಲಂಘನೆಯಾಗಿದೆ ಎಂದರು.
    ಕೂಡಲೇ ಸರ್ಕಾರ ತನ್ನ ತಪ್ಪು ತಿದ್ದಿಕೊಂಡು ತಳವಾರ ಪರಿವಾರಕ್ಕೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷದ ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
    ತಳವಾರ ಸಮುದಾಯದ ಜಿಲ್ಲಾಧ್ಯಕ್ಷ ಶರಣಪ್ಪ ಸುಣಗಾರ, ತಾಪಂ ಅಧ್ಯಕ್ಷ ಭೀಮುಗೌಡ ಬಿರಾದಾರ, ಉಪಾಧ್ಯಕ್ಷ ರವಿ ಬಿರಾದಾರ, ಮುಖಂಡರಾದ ಬಸವರಾಜ ಬಿರಾದಾರ (ಹತ್ತಳ್ಳಿ), ಕಾಮೇಶ ಪಾಟೀಲ, ಮಹಾದೇವ ಹಿರೇಕುರುಬರ, ಶಬ್ಬೀರ್ ನದಾಫ್, ಪ್ರಕಾಶ ಕಟ್ಟಿಮನಿ, ತಳವಾರ ಸಮುದಾಯದ ಮುಖಂಡರಾದ ಮುದುಕಪ್ಪ ತಳವಾರ, ರೇವಣಸಿದ್ಧ ತಳವಾರ, ಪರಮಾನಂದ ತಳವಾರ, ಪುಂಡಲೀಕ ಬಿರಾದಾರ, ಮಾರುತಿ ತಳವಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts