More

    ತಲಪಾಡಿ ಗಡಿಯಲ್ಲಿ ಮುಕ್ತ ಸಂಚಾರ

    ಉಳ್ಳಾಲ ಕರೊನಾ ನಿಯಂತ್ರಣ ನಿಟ್ಟಿನಲ್ಲಿ ಕೇರಳದಿಂದ ಬರುವವರಿಗೆ ಆರ್‌ಟಿ-ಪಿಸಿಆರ್ ವರದಿ ಶನಿವಾರದಿಂದ ಕಡ್ಡಾಯಗೊಳಿಸಲಾಗಿದ್ದರೂ, ಕೇರಳಿಗರ ವಿರೋಧದಿಂದ ಜಿಲ್ಲಾಡಳಿತ ತಟಸ್ಥವಾಗಿದೆ.

    ಮಂಗಳೂರಿನಲ್ಲಿ ಕರೊನಾ ಸೋಂಕಿತರ ಪೈಕಿ ಹೆಚ್ಚಿನವರು ಕೇರಳದಿಂದ ಬಂದವರು ಎನ್ನುವ ಕಾರಣಕ್ಕೆ ಜಿಲ್ಲಾಡಳಿತ ಶುಕ್ರವಾರವೇ ತಲಪಾಡಿಯಲ್ಲಿ ಚೆಕ್ ಪಾಯಿಂಟ್ ಸ್ಥಾಪಿಸಿದ್ದು, ಶನಿವಾರದಿಂದ ನೆಗೆಟಿವ್ ವರದಿ ಕಡ್ಡಾಯ ಎಂದು ತಿಳಿಸಲಾಗಿತ್ತು. ಶನಿವಾರ ಬೆಳಗ್ಗೆ ಆರೋಗ್ಯಾಧಿಕಾರಿ ಮತ್ತು ಪೊಲೀಸರು ಕಾರ್ಯಾಚರಣೆ ಆರಂಭಿಸಿದಾಗ, ಕೇರಳ ರಾಜಕೀಯ ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾಯಿತು.

    ಕೇರಳ ಭಾಗದಿಂದ ಬರುವ ಪ್ರಯಾಣಿಕರು ನೆಗೆಟಿವ್ ವರದಿ ಹೊಂದಿರಬೇಕು ಅಥವಾ ಸ್ಥಳದಲ್ಲೇ ತಪಾಸಣೆ ನಡೆಸಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದರು. ಕೆಲವರು ಉಚಿತ ತಪಾಸಣೆ ಮಾಡಿಸಿಕೊಂಡಿದ್ದು, ಅವರ ವಿಳಾಸ ಪಡೆದು ಕರ್ನಾಟಕ ಪ್ರವೇಶಿಸಲು ಅವಕಾಶ ನೀಡಲಾಗುತ್ತಿತ್ತು. ಇದಕ್ಕೆ ಗಡಿಭಾಗದ ಕಾಂಗ್ರೆಸ್ ಮತ್ತು ಲೀಗ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು. ಆರ್‌ಟಿ-ಪಿಸಿಆರ್ ಕಡ್ಡಾಯ ಎನ್ನುವ ನಿಯಮ ಜಾರಿಗೆ ತಂದಲ್ಲಿ ತಲಪಾಡಿ ಗಡಿ ಬಂದ್ ಮಾಡಿ ಕರ್ನಾಟಕದಿಂದ ಕೇರಳಕ್ಕೆ ವಾಹನ ಮತ್ತು ಪ್ರಯಾಣಿಕರನ್ನು ತಡೆಯಲಾಗುವುದು ಎಂದು ಎಚ್ಚರಿಸಿದರು. ಇದರಿಂದಾಗಿ ಶನಿವಾರವೂ ನಿಯಮ ಜಾರಿಯಾಗಲಿಲ್ಲ.

    ತಹಸೀಲ್ದಾರ್ ಗುರುಪ್ರಸಾದ್ ಮಾತನಾಡಿ, ಗಡಿ ಬಂದ್ ಮಾಡಲು ಜಿಲ್ಲಾಡಳಿತ ಮುಂದಾಗದಿದ್ದರೂ, ಜಾಲತಾಣಗಳಲ್ಲಿ ಅಂತಹ ವರದಿಗಳು ಬಂದಿವೆ. ಆದರೆ ಕೋವಿಡ್ ನೆಗೆಟಿವ್ ವರದಿ ತರುವುದು ಕಡ್ಡಾಯ. ವರದಿ ಇಲ್ಲದಿದ್ದರೆ ಸ್ಥಳದಲ್ಲೇ ಆರೋಗ್ಯ ಇಲಾಖೆಯಿಂದ ತಪಾಸಣೆಗೆ ವ್ಯವಸ್ಥೆ ಮಾಡಿದ್ದೇವೆ. ಇದಕ್ಕೆ ಗಡಿಭಾಗದ ಜನರ ಸಹಕಾರ ಅಗತ್ಯ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts