More

    ಮಳೆಗಾಲದಲ್ಲಿ ಜನರ ಆರೋಗ್ಯದತ್ತ ಕಾಳಜಿ ವಹಿಸಿ

    ಇಂಡಿ: ಇತ್ತೀಚೆಗೆ ತಾಲೂಕಿನ ಕಂದಾಯ ಉಪವಿಭಾಗಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಅಬೀದ್ ಗದ್ಯಾಳ ಅವರು ಪಟ್ಟಣದ ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಶನಿವಾರ ಪರಿಶೀಲಿಸಿದರು.

    ಧೂಳಖೇಡ ಜಾಕ್‌ವೆಲ್‌ನಲ್ಲಿ ಎಲ್ಲ ರೀತಿಯ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದು, ಸಮರ್ಪಕ ನಿರ್ವಹಣೆಗೆ ತಾಕೀತು ಮಾಡಿದರು. ಸಾರ್ವಜನಿಕ ವಿದ್ಯುತ್ ದೀಪಗಳ ಸಮರ್ಪಕ ನಿರ್ವಹಣೆ ಕುರಿತಾಗಿ ಮೇಲ್ವಿಚಾರಣೆ ನಡೆಸಿ, ಅಧಿಕಾರಿಗಳಿಗೆ ಸೂಕ್ತ ಸಲಹೆ ನೀಡಿದರು.

    ಮಳೆಯಿಂದ ಉಂಟಾಗಬಹುದಾದ ರೋಗಗಳ ಕುರಿತಾಗಿ ಆರೋಗ್ಯಾಧಿಕಾರಿಗಳಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ತಿಳಿಸುತ್ತಾ, ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

    ಸಾರ್ವಜನಿಕ ಶೌಚಗೃಹಗಳ ಸ್ಥಿತಿಗತಿಗಳನ್ನು ಖುದ್ದಾಗಿ ಪರಿಶೀಲಿಸಿ, ಸ್ವಚ್ಛತೆಗೆ ಮುಂದಾಗಲು ಸೂಚಿಸಿದರು. ಪಟ್ಟಣದ ವಿವಿಧ ರಸ್ತೆಗಳಲ್ಲಿ ಸಾಕಷ್ಟು ಸರ್ಕಲ್‌ಗಳಿರುವುದನ್ನು ಕಂಡು ಕಳವಳ ವ್ಯಕ್ತಪಡಿಸಿದರು. ಸಾರ್ವಜನಿಕರ ಸುಗಮ ಸಂಚಾರಕ್ಕೆ ಸರ್ಕಲ್‌ಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಬೇಕು ಎಂದು ಸಲಹೆ ನೀಡಿದರು.

    ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಕೆ. ಲಕ್ಷ್ಮೀಶ, ಆರೋಗ್ಯಾಧಿಕಾರಿ ಎಲ್.ಎಸ್. ಸೋಮನಾಯಕ ಉಪಸ್ಥಿತರಿದ್ದರು.

    ಇಂದಿರಾ ಕ್ಯಾಂಟೀನ್‌ಗೆ ಭೇಟಿ

    ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಶುಕ್ರವಾರ ಬೆಳಗ್ಗೆ 6ಗಂಟೆಯಿಂದ ಪಟ್ಟಣದ ವಿವಿಧ ವಾರ್ಡ್, ಇಂದಿರಾ ಕ್ಯಾಂಟೀನು ಮತ್ತು ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬೆಳಗ್ಗೆ ವಾರ್ಡ್ ನಂ 1ರ ಅಂಬೇಡ್ಕರ ನಗರ ಹಾಗೂ ಹುಸೇನಬಾಷಾ ದರ್ಗಾಕೆಕ ಭೇಟಿ ನೀಡಿದ್ದರು. ದರ್ಗಾ ಸಮಿತಿಯ ಆರ್.ಕೆ. ಮಕಾನದಾರ, ಮಹಿಬೂಬ ಮೌಲಾಸಾಬ ಮಕಾನದಾರ, ತುಕಾರಾಮ ವಾಲಿಕಾರ, ಅದಿಲ್ ಮಕಾನದಾರ, ಕಮರಲಿ ಮಕಾನದಾರ, ಸಿದ್ದು ಐರೋಡಗಿ ಅವರ ಜತೆಗೆ ಸಮಸ್ಯೆಗಳ ಕುರಿತು ಚರ್ಚಿಸಿದರು. ನಂತರ ಬಸ್ ನಿಲ್ದಾಣ ಹತ್ತಿರದ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಅಲ್ಲಿ ವಿದ್ಯಾರ್ಥಿಗಳೊಂದಿಗೆ ಉಪಹಾರ ಸೇವಿಸಿದರು. ಗುಣಮಟ್ಟ ಕುರಿತು ಕ್ಯಾಂಟೀನ ಗುತ್ತಿಗೆದಾರು, ವಿದ್ಯಾರ್ಥಿಗಳು, ಸಾರ್ವಜನಿಕರೊಂದಿಗೆ ಚರ್ಚಿಸಿದರು. ಅಲ್ಲಿಂದ ಪುರಸಭೆಯ ಘನ ತ್ಯಾಜ್ಯ ಘಟಕಕ್ಕೆ ಭೇಟಿ ನೀಡಿ ಪರಿಕ್ಷೀಸಿದರು. ಪುರಸಭೆಯ ಸೋಮು ನಾಯಕ, ಚಂದು ಕಾಲೆಭಾಗ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts