More

  ಘೋಷಣೆ ಕೂಗಿದವರ ವಿರುದ್ಧ ಕ್ರಮಕೈಗೊಳ್ಳಿ

  ಶೃಂಗೇರಿ: ವಿಧಾನ ಸೌಧದಲ್ಲಿ ರಾಜ್ಯಸಭಾ ಚುನಾವಣೆ ಗೆದ್ದ ಸಂಭ್ರಮಾಚರಣೆ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಟ್ಟೆಬಾಗಿಲಿನಲ್ಲಿ ಬುಧವಾರ ಶೃಂಗೇರಿ ಬಿಜೆಪಿ ಮಂಡಲ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
  ಬಿಜೆಪಿ ಮಂಡಲದ ಅಧ್ಯಕ್ಷ ಉಮೇಶ್ ತಲಗಾರು ಮಾತನಾಡಿ, ಕಾಂಗ್ರೆಸ್ ಸರ್ಕಾರದ ದೇಶ ದ್ರೋಹಿಗಳನ್ನು ಬೆಳೆಸುತ್ತಿದ್ದು, ದೇಶದ ಅಸ್ಮಿತೆ ಹಾಳುಮಾಡುತ್ತಿದೆ. ಕ್ಷೇತ್ರದ ಶಾಸಕ ರಾಜೇಗೌಡ ಕೇವಲ ತಮ್ಮ ಪಕ್ಷದ ಓಲೈಕೆಗಾಗಿ ತಮ್ಮ ಅಧಿಕಾರವನ್ನು ಮೀಸಲಾಗಿಟ್ಟಿದ್ದು ಕ್ಷೇತ್ರದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ದೇಶದ ಮಣ್ಣಿನಲ್ಲಿ ಹುಟ್ಟಿದವರಲ್ಲಿ ದೇಶಪ್ರೇಮ ಇಲ್ಲದಿರುವುದು ದುರದೃಷ್ಟಕರ. ನಮ್ಮ ಭಾರತದಲ್ಲಿ ಇದ್ದುಕೊಂಡು ಪಾಕಿಸ್ತಾನವನ್ನು ಹೊಗಳುವುದು ಕಾಂಗ್ರೆಸ್ ಪರಮ ಧ್ಯೇಯವಾಗಿದೆ. ಸರ್ಕಾರ ಕೂಡಲೇ ೋಷಣೆ ಕೂಗಿದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.
  ಮಂಡಲದ ಪ್ರಧಾನ ಕಾರ್ಯದರ್ಶಿ ನೂತನ್ ಕುಮಾರ್, ಎಚ್.ಎಸ್.ವೇಣುಗೋಪಾಲ್, ಪಪಂ ಸದಸ್ಯರಾದ ರಾಕಾಜಯಕುಮಾರ್, ಶ್ರೀವಿದ್ಯಾ, ಪಪಂ ಮಾಜಿ ಅಧ್ಯಕ್ಷ ನಾಗೇಶ್ ಕಾಮತ್, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಾ, ತಾಪಂ ಮಾಜಿ ಸದಸ್ಯ ಕೆ.ಎಸ್.ರಮೇಶ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts