More

    108 ಆ್ಯಂಬ್ಯುಲೆನ್ಸ್​ ಸಿಬ್ಬಂದಿಯನ್ನು ರೆಡ್​ಹ್ಯಾಂಡ್​ ಆಗಿ ಹಿಡಿದ ತಹಶೀಲ್ದಾರ್​..!

    ತುಮಕೂರು: 108 ಆ್ಯಂಬ್ಯುಲೆನ್ಸ್​ ಸೇವೆಯನ್ನು ಶುರು ಮಾಡಿದ್ದೇ ರೋಗಿಗಳಿಗೆ ತಕ್ಷಣ ಚಿಕಿತ್ಸೆ ಲಭ್ಯ ಆಗಲಿ ಎಂದು. ಆದರೆ ಇಲ್ಲಿ ಮಾತ್ರ ಆ್ಯಂಬುಲೆನ್ಸ್​ನವರು 1 ಗಂಟೆ ಕಾಯಲು ಹೇಳಿದ್ದಾರೆ!

    ಕೆಲವು ದಿನಗಳಿಂದ ಕೊರಟಗೆರೆ ತಾಲೂಕಿನ ತಹಶೀಲ್ದಾರ್​ ನಹೀದಾ ಜಂ ಜಂ ಅವರಿಗೆ ರೋಗಿಗಳಿಂದ ಆ್ಯಂಬ್ಯುಲೆನ್ಸ್​ ಬಗ್ಗೆ ಹತ್ತಾರು ದೂರುಗಳು ಬರುತ್ತಿದ್ದವು. ಈ ಹಿನ್ನೆಲೆ ತಹಶೀಲ್ದಾರ್ ಸ್ವತಃ ರಿಯಾಲಿಟಿ ಚೆಕ್​ಗೆ ಇಳಿದಿದ್ದಾರೆ. ಈ ಸಂದರ್ಭ ರಿಯಾಲಿಟಿ ಚೆಕ್ ನಲ್ಲಿ 108 ಆಂಬ್ಯುಲೆನ್ಸ್ ಸೇವೆ ಸಿಬ್ಬಂದಿಯ ನಿರ್ಲಕ್ಷ್ಯ ಬಯಲಾಗಿದೆ.

    ತಹಶೀಲ್ದಾರ್ ನಹೀದಾ, ‘ರಾಮಕ್ಕ‌’ ಹೆಸರಿನಲ್ಲಿ 108 ಸಿಬ್ಬಂದಿಗೆ ಕರೆ ಮಾಡಿದ್ದಾರೆ. ತಮಗೆ ಕೊರಟಗೆರೆ ಸಮೀಪದ ವಡ್ಡಗೆರೆ ಕ್ರಾಸ್​ನಲ್ಲಿ ಅಪಘಾತವಾಗಿದೆ. ತುರ್ತಾಗಿ ಬನ್ನು ಎಂದಯ ತಹಶೀಲ್ದಾರ್ ಕರೆ ಮಾಡಿದ್ದಾರೆ ತಹಶೀಲ್ದಾರ್​ ನಿನ್ನೆ ಸಂಜೆ 5 ಗಂಟೆ 02 ನಿಮಿಷಕ್ಕೆ 108 ಕ್ಕೆ ಕರೆ ಮಾಡಿದ್ದರು ಆದರೆ ಆ್ಯಂಬುಲೆನ್ಸ್​, ಸಂಜೆ 5ಗಂಟೆ 45 ನಿಮಿಷಕ್ಕೆ ಬಂದು ಸ್ಥಳಕ್ಕೆ ತಲುಪಿದೆ.

    ಫೋನಿನಲ್ಲಿ ಆಂಬ್ಯುಲೆನ್ಸ್ ಸಿಬ್ಬಂದಿ ಜೊತೆ ತಹಶೀಲ್ದಾರ್​ 7 ನಿಮಿಷ ಸಂಭಾಷಣೆ ನಡೆಸಿದ್ದಾರೆ. ಆದರೆ 108 ಆಂಬ್ಯುಲೆನ್ಸ್ ಸಿಬ್ಬಂದಿಯಿಂದ ತಹಶೀಲ್ದಾರ್ ನಾಹೀದಾಗೆ ಹಾರಿಕೆಯ ಉತ್ತರ ಸಿಕ್ಕಿದೆ. ತಹಶೀಲ್ದಾರ್‌ಗೆ ಅಂಬ್ಯುಲೇನ್ಸ್ ಬರಲು 1 ಗಂಟೆ ತಡ ಆಗುತ್ತೇ ಕಾಯ್ತಿರಾ ಎಂದ ಆಂಬ್ಯುಲೆನ್ಸ್ ಸಿಬ್ಬಂದಿ.

    ವಾಸ್ತವವಾಗಿ ತೋವಿನಕೆರೆಯಿಂದ ಕೊರಟಗೆರೆ ಪಟ್ಟಣಕ್ಕೆ ಆಗಮನಿಸಲು 20 ನಿಮಿಷ ಸಾಕು. ಆದರೆ ಸಿಬ್ಬಂದಿ, ಆಂಬ್ಯುಲೆನ್ಸ್ ಖಾಲಿ ಇದ್ದರು ಸಕಾಲಕ್ಕೆ ಆಗಮಿಸದೆ ಕರ್ತವ್ಯಲೋಪ ಎಸಗಿದ್ದಾರೆ. ಈ ಹಿನ್ನೆಲೆಯಲ್ಲಿ 108 ತುರ್ತುವಾಹನ ಸೇವೆಯ ಬಗ್ಗೆ ಜಿಲ್ಲಾಧಿಕಾರಿ ಮತ್ತು ಡಿಹೆಚ್‌ಓಗೆ ತಹಶೀಲ್ದಾರ್ ನಹಿದಾ ಜಂ ಜಂ​ ದೂರು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts