More

    ರಾಜ್​ಕುಮಾರ್ ಹಿರಾನಿ ಚಿತ್ರದಲ್ಲಿ ಶಾರುಖ್‌ಗೆ ತಾಪ್ಸೀ ಜೋಡಿ?

    ಮುಂಬೈ: ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಸುದೀರ್ಘ ಎರಡು ವರ್ಷಗಳ ಬಳಿಕ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಪಠಾಣ್ ಚಿತ್ರದ ಚಿತ್ರೀಕರಣದಲ್ಲಿಯೂ ಭಾಗಿಯಾಗಿದ್ದಾರೆ. ಇದೆಲ್ಲದರ ನಡುವೆ ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಸಿನಿಮಾ ವಿಚಾರವೂ ಮತ್ತೆ ಮುನ್ನೆಲೆಗೆ ಬಂದಿದೆ. ಶಾರುಖ್ ನಟಿಸಲಿರುವ ಈ ಚಿತ್ರದಲ್ಲಿ ನಾಯಕಿಯಾಗಿ ತಾಪ್ಸೀ ಪನ್ನು ಆಯ್ಕೆಯಾಗಿದ್ದಾರೆಂಬ ಸುದ್ದಿ ಬಿಟೌನ್‌ನಲ್ಲಿ ಹರಿದಾಡುತ್ತಿದೆ.

    ಇದನ್ನೂ ಓದಿ: PHOTO GALLERY| ಕಣ್ಣು ಕುಕ್ಕೋ ಫೋಟೋಗಳಲ್ಲಿ ಕಾರುಣ್ಯಾ ಮಿಂಚಿಂಗ್…

    ಅಂದಹಾಗೆ, ಈ ಹಿಂದೆ ‘ಬದ್ಲಾ’ ಸಿನಿಮಾದಲ್ಲಿ ಅಮಿತಾಭ್ ಜತೆಗೆ ತಾಪ್ಸೀ ನಟಿಸಿದ್ದರು. ಆ ಚಿತ್ರಕ್ಕೆ ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಬಂಡವಾಳ ಹೂಡಿತ್ತು. ಇದೀಗ ಇನ್ನೂ ಶೀರ್ಷಿಕೆ ಅಂತಿಮವಾಗದ ಸಿನಿಮಾದಲ್ಲಿ ಶಾರುಖ್‌ಗೆ ಜೋಡಿಯಾಗಿ ತಾಪ್ಸೀ ಕಾಣಿಸಿಕೊಳ್ಳಲಿದ್ದಾರಂತೆ.

    ಇದನ್ನೂ ಓದಿ: PHOTO GALLERY| ಮಾಲ್ಡೀವ್ಸ್​ ಕಡಲ ಕಿನಾರೆಯಲ್ಲಿನ ಮತ್ತಷ್ಟು ಫೋಟೋ ಹಂಚಿಕೊಂಡ ರಾಕಿಂಗ್ ದಂಪತಿ

    ಸದ್ಯ ಈ ಬಗ್ಗೆ ನಟಿ ತಾಪ್ಸೀ ಮತ್ತು ನಿರ್ದೇಶಕ ಹಿರಾನಿ ತುಟಿ ಬಿಚ್ಚಿಲ್ಲ. ಶಾರುಖ್ ‘ಪಠಾಣ್’ ಚಿತ್ರದಲ್ಲಿ ಬಿಜಿಯಾದರೆ, ಇತ್ತ ತಾಪ್ಸೀ ಪನ್ನು ಸಹ ಹಲವು ಪ್ರಾಜೆಕ್ಟ್ ಒಪ್ಪಿಕೊಂಡು ಅವುಗಳತ್ತ ಗಮನ ಹರಿಸಿದ್ದಾರೆ. ಇದನ್ನು ಹೊರತುಪಡಿಸಿದರೆ, ಶಾರುಖ್- ಹಿರಾನಿ ಸಿನಿಮಾದಲ್ಲಿ ತಾಪ್ಸೀ ಇದ್ದಾರಾ, ಇಲ್ಲವೋ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಚಿತ್ರತಂಡಗಳಿಂದಲೇ ಅಧಿಕೃತವಾಗಿ ಮಾಹಿತಿ ಹೊರಬರಬೇಕಿದೆ. -ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts