More

    ಭಿಕ್ಷುಕನ ಬದುಕನ್ನೇ ಬದಲಿಸಿತು ಪಿಕೆ ಸಿನಿಮಾದ 5 ಸೆಕೆಂಡ್​ ದೃಶ್ಯ! ಇದು ರೀಲ್ ಅಲ್ಲ, ರಿಯಲ್ ಸ್ಟೋರಿ

    ಮುಂಬೈ: ರಾಜ್‌ಕುಮಾರ್ ಹಿರಾನಿ ಅವರು ಬಾಲಿವುಡ್‌ನಲ್ಲಿ ಸಾಮಾಜಿಕ ಸಂದೇಶದ ಜತೆಗೆ ಮನಸ್ಸಿಗೆ ಮುದ ನೀಡುವಂತಹ ಕತೆಗಳನ್ನು ನೀಡುವ ಖ್ಯಾತ ನಿರ್ದೇಶಕ. ಕೆಲವೇ ಸಿನಿಮಾಗಳನ್ನು ನಿರ್ದೇಶಿಸಿದ್ರೂ ಆ ಸಿನಿಮಾಗಳು ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯುತ್ತವೆ. ಪ್ರತಿಯೊಬ್ಬ ನಾಯಕನಿಗೂ ಇವರ ನಿರ್ದೇಶನದಲ್ಲಿ ನಟಿಸಲು ಆಸೆ ಇರುತ್ತದೆ. ಮುನ್ನಾ ಭಾಯ್​ ಎಂಬಿಬಿಎಸ್​ನಿಂದ ಇತ್ತೀಚಿಗೆ ಬಂದ ಡಂಕಿ ಚಿತ್ರದವರೆಗೂ ತಮ್ಮದೇ ಶೈಲಿಯಲ್ಲಿ ಸಿನಿಮಾ ಮಾಡಿ ರಂಜಿಸಿದ್ದಾರೆ.

    ಆಮೀರ್ ಖಾನ್ ಜತೆಗಿನ ಥ್ರೀ ಈಡಿಯಟ್ಸ್ ಮತ್ತು ಪಿಕೆ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಬಿರುಗಾಳಿ ಎಬ್ಬಿಸಿತ್ತು. ಜೀವನದಲ್ಲಿ ಓದುವುದೇ ಮುಖ್ಯವಲ್ಲ ಎಂದು ಥ್ರೀ ಈಡಿಯಟ್ಸ್​ ಸಿನಿಮಾ ಸಂದೇಶ ಸಾರಿತು. ವಿಮರ್ಶಕರ ಮೆಚ್ಚುಗೆ ಪಡೆದ ಈ ಚಿತ್ರ ಆಮೀರ್ ಖಾನ್ ಚಿತ್ರಗಳಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇನ್ನೂ ಆಮೀರ್ ಖಾನ್ ಅವರ ವೃತ್ತಿಜೀವನದಲ್ಲಿ ಪಿಕೆ ಚಿತ್ರವು ಮೂರನೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಆಗಿದೆ.

    ಈ ಪಿಕೆ ಸಿನಿಮಾ ಆಮೀರ್ ಖಾನ್ ಜೀವನವನ್ನಷ್ಟೇ ಬದಲಿಸಲಿಲ್ಲ, ಭಿಕ್ಷುಕನ ಬದುಕನ್ನೂ ಬದಲಾಯಿಸಿದೆ ಎಂಬುದು ನಿಮಗೆ ಗೊತ್ತಾ? ಇದು ಕೇಳಲು ವಿಚಿತ್ರ ಎನಿಸಿದರೂ ಇದು ಸತ್ಯ. ಪಿಕೆ ಸಿನಿಮಾದಲ್ಲಿ ಅನ್ಯಗ್ರಹ ಜೀವಿಯಾಗಿ ನಟಿಸಿರುವ ಅಮೀರ್ ಖಾನ್, ಕುರುಡ ಭಿಕ್ಷುಕನ ಬಟ್ಟಲಿನಿಂದ ಹಣ ಕದಿಯುವ ದೃಶ್ಯವಿದೆ. ಅದು ನಿಮಗೆ ನೆನಪಿದೆಯಾ? ಆ ದೃಶ್ಯದಲ್ಲಿ ನಟಿಸಿದ ಭಿಕ್ಷುಕ ನಿಜ ಜೀವನದಲ್ಲೂ ಭಿಕ್ಷುಕನಾಗಿದ್ದ. ಪಿಕೆ ಸಿನಿಮಾದಲ್ಲಿ ಭಿಕ್ಷುಕ ಕೇವಲ ಐದರಿಂದ ಹತ್ತು ಸೆಕೆಂಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಆದರೆ ಈ ದೃಶ್ಯವನ್ನು ನೈಜವಾಗಿಸಲು ನಿರ್ದೇಶಕರು ಎಂಟು ಭಿಕ್ಷುಕರಲ್ಲಿ ಅವರನ್ನು ಆಯ್ಕೆ ಮಾಡಿದ್ದಾರೆ. ಆ ಭಿಕ್ಷುಕನ ಹೆಸರು ಮನೋಜ್ ರಾಯ್! ಯಾರು ಈ ಮನೋಜ್​ ರಾಯ್​? ಈ ಸಿನಿಮಾದಿಂದ ಅವರ ಜೀವನ ರಾತ್ರೋರಾತ್ರಿ ಹೇಗೆ ಬದಲಾಯಿತು? ಎಂಬುದನ್ನು ನೋಡೋಣ.

    ಮನೋಜ್ ತಂದೆ ಅಸ್ಸಾಂನ ಸೋನಿತ್‌ಪುರದ ದಿನಗೂಲಿ ಕಾರ್ಮಿಕ. ಮನೋಜ್​ ಹುಟ್ಟಿದ ನಾಲ್ಕು ದಿನಗಳ ನಂತರ ಅವರ ತಾಯಿ ತೀರಿಕೊಳ್ಳುತ್ತಾರೆ. ದಿನಗಳು ಕಳೆದಂತೆ ಮನೋಜ್​ ಬಾಲ್ಯದಲ್ಲೇ ತನ್ನ ಜೀವನೋಪಾಯಕ್ಕಾಗಿ ಭಿಕ್ಷೆ ಬೇಡುವುದನ್ನು ಆರಿಸಿಕೊಳ್ಳುತ್ತಾರೆ. ದೆಹಲಿಯಲ್ಲಿ ಹೆಚ್ಚು ಜನಸಂಖ್ಯೆ ಇದ್ದು, ಸದಾ ಜನಸಂದಣಿ ಇರುವ ಜಂತರ್ ಮಂತರ್ ಬಳಿ ಮನೋಜ್​ ಭಿಕ್ಷೆ ಬೇಡುತ್ತಿದ್ದರು. ಆದರೆ, ಒಂದು ದಿನ ಅದೃಷ್ಟ ರಾಜ್‌ಕುಮಾರ್ ಹಿರಾನಿ ರೂಪದಲ್ಲಿ ಮನೋಜ್​ ಮನೆ ಬಾಗಿಲನ್ನು ತಟ್ಟಿತು. ಇಬ್ಬರು ತಮ್ಮ ಬಳಿ ಬಂದು ಸಿನಿಮಾದಲ್ಲಿ ನಟಿಸುತ್ತೀರಾ ಎಂದು ಕೇಳಿದಾಗ ನಾನು ನಟಿಸಿದರೆ ಎರಡು ದಿನ ಊಟ ಹಾಕುತ್ತದೆ ಅದೇ ಸಾಕು ನನಗೆ ಎಂದು ಮನೋಜ್​ ಉತ್ತರಿಸುತ್ತಾರೆ. ಬಳಿಕ ಮನೋಜ್​ಗೆ ಫೋನ್​ ನಂಬರ್​ ಹಾಗೂ 20 ರೂ. ಕೊಟ್ಟು ರಾಜ್​ಕುಮಾರ್​ ಹಿರಾನಿ ಕಡೆಯವರು ಅಲ್ಲಿಂದ ಹೊರಡುತ್ತಾರೆ.

    ಫೋನ್​ ನಂಬರ್​ಗೆ ಕರೆ ಮಾಡಿದಾಗ ನೆಹರು ಸ್ಟೇಡಿಯಂಗೆ ಬರಲು ಹೇಳಿದ್ದರು. ಮರುದಿನ ಅಲ್ಲಿಗೆ ಮನೋಜ್​ ಹೋದಾಗ ಅವರಂತೆ ಏಳು ಜನ ಭಿಕ್ಷುಕರ ಜೊತೆ ಆಡಿಷನ್ ಮಾಡಿಸಿದರು. ಆದರೆ ಯಾರ ಸಿನಿಮಾ ಎಂಬುದು ಆಗ ಗೊತ್ತಾಗಿಲ್ಲ. ಅಂತಿಮವಾಗಿ ಮನೋಜ್ ಆಯ್ಕೆಯಾದರು. ದೆಹಲಿಯ ಪಂಚತಾರಾ ಹೋಟೆಲ್‌ನಲ್ಲಿ ಮನೋಜ್​ ತಂಗಿದ್ದರು. ಅಲ್ಲಿನ ಸಕಲ ಸೌಕರ್ಯಗಳನ್ನೂ ಅನುಭವಿಸಿದರು. ಐದು ಸೆಕೆಂಡ್​ ನಟನೆಗೆ 10 ಸಾವಿರ ರೂ. ಸಂಭಾವನೆ ನೀಡಲಾಯಿತು. ಸಿನಿಮಾದಲ್ಲಿ ಅವಕಾಶ ಸಿಕ್ಕ ಮೇಲೆ ತೆರೆಯ ಮೇಲೆ ಮನೋಜ್​ನನ್ನು ನೋಡಿ ಜನರು ಗುರುತು ಹಿಡಿಯಲು ಆರಂಭಿಸಿದರು. ತನಗೆ ಬಂದ ಈ ಕೀರ್ತಿಯು ಮನೋಜ್​ ಅವರಲ್ಲಿ ಬದಲಾವಣೆ ತಂದಿತು. ಇನ್ನು ಮುಂದೆ ಭಿಕ್ಷೆ ಬೇಡುವುದಿಲ್ಲ ಎಂದು ನಿರ್ಧರಿಸಿ, ಸಂಭಾವನೆ ಹಣದಲ್ಲಿ ತಮ್ಮ ಗ್ರಾಮದಲ್ಲಿ ಅಂಗಡಿ ಒಂದನ್ನು ತೆರೆದು ಜೀವನ ನಡೆಸುತ್ತಿದ್ದಾರೆ. ಮನೆ ನಿರ್ಮಿಸಿ, ವಾಹನ ಖರೀದಿಸಿ ಮತ್ತು ಪ್ರೀತಿಸಿ ಮದುವೆಯಾಗಿ ಇದೀಗ ನೆಮ್ಮದಿಯಾಗಿ ನೆಲೆಸಿದ್ದಾರೆ. (ಏಜೆನ್ಸೀಸ್​)

    ಸಾಕು ನಿಲ್ಲಿಸ್ರಯ್ಯ ನಿಮ್ಮ ಕೈಮುಗಿತೀನಿ! ಕೊನೆಗೂ ಮಧ್ಯಪ್ರವೇಶ ಮಾಡಿದ ರೋಹಿತ್​ ಶರ್ಮ

    ಭಾರತದಲ್ಲಿ ಫೆಬ್ರವರಿ ತಿಂಗಳಲ್ಲೇ 76.28 ಲಕ್ಷ ಖಾತೆಗಳನ್ನು ನಿಷೇಧಿಸಿದ ವಾಟ್ಸಪ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts