More

  ಮದುವೆ ಫೋಟೋ ಅಥವಾ ವೀಡಿಯೋ ಹಂಚಿಕೊಳ್ಳಲ್ಲ! ಕಡೆಗೂ ಯಾಕೆಂದು ಕಾರಣ ಬಿಚ್ಚಿಟ್ಟ ನಟಿ ತಾಪ್ಸಿ ಪನ್ನು

  ಬೆಂಗಳೂರು: ಇತ್ತೀಚೆಗಷ್ಟೇ ತಮ್ಮ ಬಹುಕಾಲದ ಸ್ನೇಹಿತ ಡೆನ್​ಮಾರ್ಕ್​ನ ಹೆಸರಾಂತ ಬ್ಯಾಡ್ಮಿಂಟನ್​ ಆಟಗಾರ ಮಥಿಯಾಸ್​ ಬೋ ಅವರೊಂದಿಗೆ ಕ್ರಿಶ್ಚಿಯನ್​ ಹಾಗೂ ಸಿಖ್​ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಹುಭಾಷಾ ತಾರೆ ತಾಪ್ಸಿ ಪನ್ನು, ಕಡೆಗೂ ತಮ್ಮ ಮದುವೆಯ ಕುರಿತು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದ ವದಂತಿಗಳ ಬಗ್ಗೆ ಮೌನ ಮುರಿದಿದ್ದಾರೆ.

  ಇದನ್ನೂ ಓದಿ: ಫ್ಯೂಚರ್​ ನೋಡಬೇಕಾ? ಹಾಗಾದ್ರೆ ಭಾರತಕ್ಕೆ ಬನ್ನಿ; ಭಾರತದ ಅಭಿವೃದ್ಧಿ ಪಯಣ ಶ್ಲಾಘಿಸಿದ ಯುಎಸ್ ರಾಯಭಾರಿ

  ಕಳೆದ ಮಾರ್ಚ್ 22ರಂದು ಉದಯಪುರದಲ್ಲಿ ತಮ್ಮ ಬಹುಕಾಲದ ಗೆಳೆಯ ಮಥಿಯಾಸ್ ಬೋ ಅವರೊಂದಿಗೆ ಅದ್ಧೂರಿ ಮತ್ತು ನಿಕಟ ಸಮಾರಂಭದಲ್ಲಿ ತಾಪ್ಸಿ ವಿವಾಹವಾದರು. ನಟಿಯ ಮದುವೆ ಸುದ್ದಿ ಹೊರಬೀಳುತ್ತಿದ್ದಂತೆ ಎಚ್ಚರಗೊಂಡ ನೆಟ್ಟಿಗರು, ತಾಪ್ಸಿ ಕದ್ದು-ಮುಚ್ಚಿ ಮದುವೆಯಾಗಿದ್ದಾರೆ. ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಕಾರಣವೇನು? ಇಲ್ಲಿಯವರೆಗೆ ತಮ್ಮ ಮದುವೆ ಬಗ್ಗೆ ಒಂದೇ ಒಂದು ಫೋಟೋ ಅಥವಾ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಏಕೆ ಹಂಚಿಕೊಂಡಿಲ್ಲ ಎಂದು ಪ್ರಶ್ನಿಸಿದ್ದರು.

  ಇನ್ನು ನಿರಂತರವಾಗಿ ಸೋಷಿಯಲ್ ಮೀಡಿಯಾದಲ್ಲಿ ತನ್ನ ಮದುವೆಯ ಬಗ್ಗೆ ಕೇಳಿಬರುತ್ತಿದ್ದ ಸುದ್ದಿಗಳಿಗೆ ತಲೆಕೆಡಿಸಿಕೊಳ್ಳದ ತಾಪ್ಸಿ ಇಲ್ಲಿಯವರೆಗೆ ಬಹಿರಂಗವಾಗಿ ಎಲ್ಲಿಯೂ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಇದೀಗ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ಷಣಗಳ ಫೋಟೋಗಳು ಮತ್ತು ವೀಡಿಯೊಗಳನ್ನು ಏಕೆ ಹಂಚಿಕೊಂಡಿಲ್ಲ ಎಂಬುದರ ಹಿಂದಿರುವ ಕಾರಣವನ್ನು ತಿಳಿಸಿದ್ದಾರೆ.

  ಇದನ್ನೂ ಓದಿ:2nd PUC ಫಲಿತಾಂಶ ಪ್ರಕಟ; ದಕ್ಷಿಣ ಕನ್ನಡ ಫಸ್ಟ್, ಉಡುಪಿ ಸೆಕೆಂಡ್.. ಬಾಲಕಿಯರೇ ಮೇಲುಗೈ 

  “ಸೀಕ್ರೆಟ್​ ಮಾಡುವ ಉದ್ದೇಶ ನನ್ನದಾಗಿರಲಿಲ್ಲ. ನನ್ನ ವೈಯಕ್ತಿಕ ಜೀವನ ಸಾರ್ವಜನಿಕವಾಗುವುದು ನನಗೆ ಇಷ್ಟವಿರಲಿಲ್ಲ. ಹೀಗಾಗಿ ಮದುವೆ ಸಮಾರಂಭಗಳ ಯಾವುದೇ ಫೋಟೋ ಅಥವಾ ವಿಡಿಯೋಗಳನ್ನು ಹಂಚಿಕೊಳ್ಳಲು ನಾನು ಬಯಸಲಿಲ್ಲ” ಎಂದು ಹೇಳಿದರು. ಸದ್ಯ ನಟಿಯ ಈ ಹೇಳಿಕೆ ಹೊರಬೀಳುತ್ತಿದ್ದಂತೆ ಅವರ ಫ್ಯಾನ್ಸ್​ ಭಾರೀ ಬೇಸರ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

  ಎಕ್ಕೆ ಎಲೆ ನೋಡಿ ರೈತರು ಹೇಳ್ತಾರೆ ಭವಿಷ್ಯ! ಇದು ಯುಗಾದಿ ಹಬ್ಬದಂದು ಮಾತ್ರ ಸಾಧ್ಯ…

  ಐಪಿಎಲ್​ 10 ತಂಡಕ್ಕೂ ರೋಹಿತ್​ ಶರ್ಮಾನೇ ಕ್ಯಾಪ್ಟನ್​; ಸುರೇಶ್​ ರೈನಾ ಹೇಳಿಕೆಯ ಹಿಂದಿದೆ ಈ ಕಾರಣ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts