More

    ಆಯವ್ಯಯಕ್ಕೆ ಹಲವು ಸಲಹೆ ಕೊಟ್ಟ ಟಿ.ಎ.ಶರವಣ

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ತೆರಿಗೆ ಪದ್ಧತಿಯನ್ನು ಆಮೂಲಾಗ್ರವಾಗಿ ಹಾಗೂ ವೈಜ್ಞಾನಿಕವಾಗಿ ಬದಲಾಯಿಸಬೇಕು. ಬಡ, ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತೆ ಹೊಸ ಸ್ಲಾಬ್ ಪದ್ಧತಿ ತರುವಂತೆ ಎಂಎಲ್ಸಿ ಟಿ.ಎ.ಶರವಣ ಸಲಹೆ ನೀಡಿದ್ದಾರೆ.

    ಬೆಂಗಳೂರು ನಗರದ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸೋಮವಾರ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಶರವಣ, ಪತ್ರದಲ್ಲಿರುವ ಅಂಶಗಳನ್ನು ಬಜೆಟ್‌ನಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು. ಪೂರ್ವನ್ವಯವಾಗುವಂತೆ ಏರಿಕೆಯಾದ ಆಸ್ತಿ ತೆರಿಗೆಯನ್ನು ರದ್ದು ಮಾಡಬೇಕು. ಪಾಲಿಕೆಯಲ್ಲಿ ಸಾರ್ವಜನಿಕ ಕುಂದುಕೊರತೆಗಾಗಿ ಪ್ರತ್ಯೇಕ ವಿಭಾಗ ತೆರೆದು ಏಕ ಕಿಂಡಿ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಪಾಲಿಕೆ ಶಾಲೆಗಳಿಗೆ ವಿಶೇಷ ಕ್ರಿಯಾಯೋಜನೆ ಜಾರಿಗೆ ತಂದು ಖಾಸಗಿ ಸಹಭಾಗಿತ್ವದಲ್ಲಿ ಆಧುನಿಕ ಶಿಕ್ಷಣ ವ್ಯವಸ್ಥೆ ಕಲ್ಪಿಸಬೇಕು. ಪೌರಕಾರ್ಮಿಕರ ಮಕ್ಕಳಿಗಾಗಿ ವಿಶೇಷ ಸ್ಕಾಲರ್‌ಶಿಪ್, ವಸತಿ ಶಾಲೆಗಳನ್ನು ತೆರೆದು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ವಿಶೇಷ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಕಾರ್ತಿಕ್​​ಗೆ ಈ ಗೆಲುವು ತುಂಬಾನೇ ಅವಶ್ಯಕತೆ ಇತ್ತು, ಆತ ಗೆದ್ದಿದ್ದು ಖುಷಿ ತಂದಿದೆ
    ಬೆಂಗಳೂರು ರಸ್ತೆ ನಿರ್ವಹಣೆಗೆ ಪ್ರಸ್ತುತ ಕಾಯ್ದೆಗಳಿಗೆ ತಿದ್ದುಪಡಿ ತಂದು ಹೊಸ ಕಾಯ್ದೆಯನ್ನು ರೂಪಿಸಬೇಕು. ಇದಕ್ಕಾಗಿ ರಸ್ತೆಗುಂಡಿ ನಿರ್ವಹಣೆಗೆ ಹೊಸ ಘಟಕ ಸ್ಥಾಪನೆ ಮಾಡಬೇಕು. ಅಪಘಾತ ಸಂಭವಿಸಿದರೆ ಅಧಿಕಾರಿಗಳನ್ನು ಶಿಕ್ಷಿಸುವ ಪದ್ಧತಿ ಇರಬೇಕು. ಸಂಚಾರ ದಟ್ಟಣೆ ನಿವಾರಣೆಗೆ ಹೊಸ ನೀತಿ ೋಷಿಸಬೇಕು. ಪಾಲಿಕೆ ವ್ಯಾಪ್ತಿಯ ಸರ್ಕಾರಿ ಭೂಮಿ ಕಬಳಿಕೆ ಪತ್ತೆ ಹಚ್ಚಲು ಮತ್ತು ಕಬಳಿಕೆದಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಶಿಕ್ಷಣ ಪ್ರಮಾಣ ಹೆಚ್ಚಿಸಲು ಕಾಯ್ದೆ ತಿದ್ದುಪಡಿ ತರಬೇಕು. ನಗರದಲ್ಲಿ ಕನ್ನಡ ಲಕಗಳನ್ನು ಕಡ್ಡಾಯ ಮಾಡಬೇಕು. ಪರವಾನಗಿ ನೀಡುವ ಪೂರ್ವದಲ್ಲಿಯೇ ಇದನ್ನು ಕಡ್ಡಾಯ ಮಾಡಬೇಕು ಎಂದು ಶರವಣ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts