More

    ಟಿ20 ವಿಶ್ವಕಪ್‌ನಲ್ಲಿ ಇಂದು ಇಂಗ್ಲೆಂಡ್-ನ್ಯೂಜಿಲೆಂಡ್ ನಡುವೆ ಮೊದಲ ಸೆಮಿಫೈನಲ್

    ಅಬುಧಾಬಿ: ಟಿ20 ವಿಶ್ವಕಪ್ 7ನೇ ಆವೃತ್ತಿಯ ಮೊದಲ ಸೆಮಿಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದ್ದು, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಪ್ರಶಸ್ತಿ ಸುತ್ತಿಗೇರಲು ಬುಧವಾರ ಸೆಣಸಲಿವೆ. ಇದು 2019ರ ಏಕದಿನ ವಿಶ್ವಕಪ್ ಫೈನಲ್ ಎದುರಾಳಿಗಳ ಮರುಮುಖಾಮುಖಿ ಆಗಿದೆ.

    ಗಾಯ ಮತ್ತಿತರ ಕಾರಣಗಳಿಂದ ಕೆಲ ಪ್ರಮುಖ ಆಟಗಾರರು ಅಲಭ್ಯರಾಗಿರುವ ನಡುವೆಯೂ ಇಂಗ್ಲೆಂಡ್ ತಂಡ ಸೂಪರ್-12ರ ಹಂತದಲ್ಲಿ ಭರ್ಜರಿ ನಿರ್ವಹಣೆ ತೋರಿದ್ದು, ಗ್ರೂಪ್-1ರಲ್ಲಿ 4 ಜಯ, 1 ಸೋಲಿನೊಂದಿಗೆ ಅಗ್ರಸ್ಥಾನ ಗಳಿಸಿತ್ತು. ಮತ್ತೊಂದೆಡೆ ನ್ಯೂಜಿಲೆಂಡ್ ತಂಡವೂ ಇಷ್ಟೇ ಜಯ, ಸೋಲಿನೊಂದಿಗೆ ಗ್ರೂಪ್-2ರಲ್ಲಿ 2ನೇ ಸ್ಥಾನ ಗಳಿಸಿತ್ತು. ಇಂಗ್ಲೆಂಡ್ ತಂಡ ಸ್ಫೋಟಕ ಬ್ಯಾಟ್ಸ್‌ಮನ್‌ಗಳಿಂದ ಕೂಡಿದ್ದರೆ, ನ್ಯೂಜಿಲೆಂಡ್ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಹೀಗಾಗಿ ಈ ಕಾದಾಟ ತೀವ್ರ ಕುತೂಹಲ ಕೆರಳಿಸಿದೆ.

    ಇಂಗ್ಲೆಂಡ್ ತಂಡ ಏಕದಿನದ ಜತೆಗೆ ಟಿ20 ವಿಶ್ವಕಪ್‌ನಲ್ಲೂ ಏಕಕಾಲದಲ್ಲಿ ಚಾಂಪಿಯನ್ ಪಟ್ಟವೇರಿದ ಸಾಧನೆ ಮಾಡುವ ತವಕದಲ್ಲಿದ್ದರೆ, ಕಿವೀಸ್ ತಂಡ ಟೆಸ್ಟ್ ವಿಶ್ವ ಚಾಂಪಿಯನ್ ಪಟ್ಟದ ಜತೆಗೆ ಚುಟುಕು ಕ್ರಿಕೆಟ್‌ನಲ್ಲೂ ವಿಶ್ವ ಕಿರೀಟ ಧರಿಸುವ ಹಂಬಲದಲ್ಲಿದೆ. 2019ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಬೌಂಡರಿ ಕೌಂಟ್‌ನಲ್ಲಿ ಕಂಡ ನಿರಾಸೆಗೆ ಸೇಡು ತೀರಿಸಿಕೊಳ್ಳುವ ಅವಕಾಶವೂ ಕೇನ್ ವಿಲಿಯಮ್ಸನ್ ಬಳಗದ ಮುಂದಿದ್ದರೆ, ಇವೊಯಿನ್ ಮಾರ್ಗನ್ ಪಡೆ ಅದೇ ಲಿತಾಂಶ ಪುನರಾವರ್ತಿಸುವ ಛಲದಲ್ಲಿದೆ.

    ನ್ಯೂಜಿಲೆಂಡ್ ಗೆದ್ದರೆ ಸತತ 3ನೇ ಐಸಿಸಿ ಟೂರ್ನಿಯಲ್ಲಿ ಫೈನಲ್‌ಗೇರಿದ ಸಾಧನೆ ಮಾಡಲಿದೆ. ಈ ಮುನ್ನ 2019ರ ಏಕದಿನ ವಿಶ್ವಕಪ್ ಮತ್ತು ಹಾಲಿ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಆಡಿತ್ತು. ಇಂಗ್ಲೆಂಡ್ ಗೆದ್ದರೆ ಸತತ 2ನೇ ಆವೃತ್ತಿಯಲ್ಲಿ ಮತ್ತು ಒಟ್ಟಾರೆ 3ನೇ ಬಾರಿ ಫೈನಲ್‌ಗೇರಿದ ಸಾಧನೆ ಮಾಡಲಿದೆ. ಗರಿಷ್ಠ 3 ಬಾರಿ ಫೈನಲ್‌ಗೇರಿದ ಲಂಕಾ ಸಾಧನೆಯನ್ನೂ ಸರಿಗಟ್ಟಲಿದೆ. ಕಿವೀಸ್ ಗೆದ್ದರೆ ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿ ಫೈನಲ್‌ಗೇರಲಿದೆ. ಈ ಮುನ್ನ 2007 ಮತ್ತು 2016ರಲ್ಲಿ ಸೆಮೀಸ್‌ನಲ್ಲೇ ಎಡವಿತ್ತು.

    *ಟಿ20 ವಿಶ್ವಕಪ್‌ಗೆ ಮುನ್ನ ಯುಎಇಯಲ್ಲೇ ಐಪಿಎಲ್ ಟೂರ್ನಿಯಲ್ಲಿ ಆಡಿದ್ದು ಇಲ್ಲಿನ ವಾತಾವರಣದ ಬಗ್ಗೆ ತಿಳಿದುಕೊಳ್ಳಲು ನೆರವಾಯಿತು. ನಾವು ಈ ಹಂತಕ್ಕೇರಲು ಅದೃಷ್ಟದ ಬಲವನ್ನೂ ಪಡೆದಿದ್ದೇವೆ. ವೇಗಿಗಳಾದ ಟ್ರೆಂಟ್ ಬೌಲ್ಟ್ ಮತ್ತು ಟಿಮ್ ಸೌಥಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
    | ಕೇನ್ ವಿಲಿಯಮ್ಸನ್, ಕಿವೀಸ್ ನಾಯಕ

    *ಸೆಮೀಸ್‌ನಲ್ಲಿ ನಾವೇ ಫೇವರಿಟ್ ಎನ್ನಲಾರೆ. ಯಾಕೆಂದರೆ ನ್ಯೂಜಿಲೆಂಡ್ ಪೂರ್ಣ ಸಾಮರ್ಥ್ಯದ ತಂಡವನ್ನು ಹೊಂದಿದೆ. ಆದರೆ ನಮ್ಮ ಆಟಗಾರರು ಅವರ ಸವಾಲು ಎದುರಿಸಲು ಸಜ್ಜಾಗಿದ್ದಾರೆ. ಅವರನ್ನು ಸೋಲಿಸಬೇಕಾದರೆ ನಾವು ಅತ್ಯುತ್ತಮ ಆಟವಾಡಬೇಕಿದೆ.
    | ಇವೊಯಿನ್ ಮಾರ್ಗನ್, ಇಂಗ್ಲೆಂಡ್ ನಾಯಕ

    ಆಂಗ್ಲರಿಗೆ ಗಾಯದ ಹೊಡೆತ
    ಕೊನೇ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತಿದ್ದು ಮಾತ್ರವಲ್ಲದೆ, ಗಾಯದಿಂದಾಗಿ ನಾಕೌಟ್ ಹಂತಕ್ಕೆ ಇಬ್ಬರು ಪ್ರಮುಖ ಆಟಗಾರರನ್ನು ಕಳೆದುಕೊಂಡ ಹೊಡೆತವೂ ಇಂಗ್ಲೆಂಡ್‌ಗೆ ಎದುರಾಗಿದೆ. ಬಟ್ಲರ್ ಜತೆಗೆ ಬಿರುಸಿನ ಆರಂಭ ಒದಗಿಸುತ್ತಿದ್ದ ಜೇಸನ್ ರಾಯ್ ಕಾಲಿನ ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದರೆ, ವೇಗಿ ಟೈಮಲ್ ಮಿಲ್ಸ್ ಕೂಡ ತೊಡೆ ನೋವಿನಿಂದ ಅಲಭ್ಯರಾಗಿದ್ದಾರೆ. ಸ್ಪಿನ್ನರ್‌ಗಳಾದ ಮೊಯಿನ್ ಅಲಿ ಮತ್ತು ಆದಿಲ್ ರಶೀದ್ ಮೇಲೆ ಈಗ ಬೌಲಿಂಗ್ ವಿಭಾಗದಲ್ಲಿ ಹೆಚ್ಚಿನ ಭಾರ ಬಿದ್ದಿದೆ. ಜತೆಗೆ ಬಟ್ಲರ್‌ಗೆ ಹೊಸ ಆರಂಭಿಕ ಜತೆಗಾರನ ಅಗತ್ಯವಿದ್ದು, ಜಾನಿ ಬೇರ್‌ಸ್ಟೋ ಆ ಸ್ಥಾನಕ್ಕೆ ಬಡ್ತಿ ಪಡೆದರೆ, ಸ್ಯಾಮ್ ಬಿಲ್ಲಿಂಗ್ಸ್ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ಪಡೆಯಬಹುದು.

    ಕಿವೀಸ್‌ಗೆ ಬೌಲಿಂಗ್ ಪ್ರಧಾನ ಅಸ
    ಕಿವೀಸ್ ಬ್ಯಾಟಿಂಗ್ ಸರದಿಯಲ್ಲಿ ಮಾರ್ಟಿನ್ ಗುಪ್ಟಿಲ್ ಹೊರತಾಗಿ ಸ್ಫೋಟಕ ಬ್ಯಾಟ್ಸ್‌ಮನ್‌ಗಳ ಕೊರತೆ ಇದೆ. ಆದರೆ ಬೌಲಿಂಗ್ ವಿಭಾಗವೇ ಟೂರ್ನಿಯಲ್ಲಿ ಕಿವೀಸ್ ತಂಡದ ಪ್ರಮುಖ ಅಸವೆನಿಸಿದೆ. ಭಾರತವನ್ನು 110 ಮತ್ತು ಅ್ಘಾನಿಸ್ತಾನವನ್ನು 125 ರನ್‌ಗೆ ನಿಯಂತ್ರಿಸಿದ್ದು ಇದಕ್ಕೆ ಸಾಕ್ಷಿ. ಅನುಭವಿ ವೇಗಿಗಳಾದ ಟ್ರೆಂಟ್ ಬೌಲ್ಟ್, ಟಿಮ್ ಸೌಥಿ ಜತೆಗೆ ಸ್ಪಿನ್ ಬೌಲರ್‌ಗಳಾದ ಇಶ್ ಸೋಧಿ ಮತ್ತು ಮಿಚೆಲ್ ಸ್ಯಾಂಟ್ನರ್ ಕೂಡ ಪರಿಣಾಮಕಾರಿ ಎನಿಸಿದ್ದಾರೆ. ವೇಗಿ ಲಾಕಿ ರ್ಗ್ಯುಸನ್ ಗಾಯದಿಂದಾಗಿ ಕೊನೇಕ್ಷಣದಲ್ಲಿ ಹೊರಬಿದ್ದರೂ, ಅವರ ಸ್ಥಾನವನ್ನು ಆಡಂ ಮಿಲ್ನೆ ಸಮರ್ಥವಾಗಿಯೇ ತುಂಬಿದ್ದಾರೆ. ಬ್ಯಾಟಿಂಗ್‌ನಲ್ಲಿ ಗುಪ್ಟಿಲ್ ಜತೆಗೆ ಡೆರಿಲ್ ಮಿಚೆಲ್, ನಾಯಕ ವಿಲಿಯಮ್ಸನ್ ಮತ್ತು ಡೆವೊನ್ ಕಾನ್‌ವೇ ತಂಡಕ್ಕೆ ಆಸರೆಯಾಗಿದ್ದಾರೆ.

    *ಮುಖಾಮುಖಿ: 21
    ಇಂಗ್ಲೆಂಡ್: 13
    ನ್ಯೂಜಿಲೆಂಡ್: 7
    ರದ್ದು: 1
    *ಟಿ20 ವಿಶ್ವಕಪ್‌ನಲ್ಲಿ: 5
    ಇಂಗ್ಲೆಂಡ್: 3
    ನ್ಯೂಜಿಲೆಂಡ್: 2
    *ಆರಂಭ: ರಾತ್ರಿ 7.30
    *ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    VIDEO| ರವಿಶಾಸ್ತ್ರಿಗೆ ಭಾವನಾತ್ಮಕ ಬೀಳ್ಗೊಡುಗೆ; ವಿಶೇಷ ಉಡುಗೊರೆ ನೀಡಿದ ಕೊಹ್ಲಿ, ರೋಹಿತ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts