More

    ಟಿ.ಎನ್​. ಸೀತಾರಾಂ, ಕಿರುತೆರೆಯ ಡಾ. ರಾಜ್​ ಇದ್ದಂತೆ ಎಂದ ಪಿ. ಶೇಷಾದ್ರಿ

    ಬೆಂಗಳೂರು: ಟಿ.ಎನ್​. ಸೀತಾರಾಂ ಅವರು ಕನ್ನಡ ಕಿರುತೆರೆಯ ಡಾ. ರಾಜಕುಮಾರ್​ ಎಂದರೆ ತಪ್ಪಿಲ್ಲ. ರಾಜಕುಮಾರ್​ ಅವರು ಹೇಗೆ ಒಂದು ದೊಡ್ಡ ಪ್ರೇಕ್ಷಕರ ವಲಯವನ್ನು ಸಿನಿಮಾದತ್ತ ಸೆಳೆದರೋ, ಸೀತಾರಾಂ ಸಹ ಕಿರುತೆರೆಯತ್ತ ಜನರನ್ನು ಸೆಳೆದರು ಎಂದು ನಿರ್ದೇಶಕ ಪಿ. ಶೇಷಾದ್ರಿ ಹೇಳಿದ್ದಾರೆ.

    ಇದನ್ನೂ ಓದಿ: ಬ್ರಹ್ಮಾಸ್ತ್ರ ಬಿಡ್ತಾರಾ? ಕರ್ಣ ಆಗ್ತಾರಾ? ಯಶ್​ ಮುಂದಿದೆ ಎರಡು ಆಯ್ಕೆಗಳು

    ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಧಾರಾವಾಹಿಯಾದ ‘ಮಾಯಾಮೃಗ’ದ ಮುಂದುವರೆದ ಭಾಗ ಪ್ರಸಾರವಾಗುವುದಕ್ಕೆ ಸಜ್ಜಾಗಿದೆ. ಈ ಹೊಸ ಧಾರಾವಾಹಿಯು ಸಿರಿ ಕನ್ನಡ ಚಾನಲ್​ನಲ್ಲಿ ಅಕ್ಟೋಬರ್ 31ರಿಂದ ಪ್ರತಿ ರಾತ್ರಿ 9ಕ್ಕೆ ಪ್ರಸಾರ ಕಾಣಲಿದೆ. ಈ ಸಂದರ್ಭದಲ್ಲಿ ‘ಮತ್ತೆ ಮಾಯಾಮೃಗ’ ತಂಡದವರು ಇತ್ತೀಚೆಗೆ ಧಾರಾವಾಹಿಯ ಬಗ್ಗೆ ಪ್ರಚಾರ ಮಾಡಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಪಿ. ಶೇಷಾದ್ರಿ, ’25 ವರ್ಷಗಳ ಹಿಂದೆ ಪ್ರಸಾರವಾದ ‘ಮಾಯಾಮೃಗ’ದ ಮುಂದುವರೆದ ಭಾಗ ಇದು. ಆ ಧಾರಾವಾಹಿಗೆ ಆಗಿನ ಕಾಲಕ್ಕೆ ದೊಡ್ಡ ಮನ್ನಣೆ ಸಿಕ್ಕಿತ್ತು. ಬರೀ ಧಾರಾವಾಹಿಗಷ್ಟೇ ಅಲ್ಲ, ಅದಕ್ಕೆ ಕೆಲಸ ಮಾಡಿದ ನಮಗೂ ಸಿಕ್ಕಿತ್ತು. ಈ ಧಾರಾವಾಹಿಗೆ ಪ್ರೇಪಕ್ಷಕರ ದೊಡ್ಡ ವೃಂದ ಉಂಟಾಗಲು ಕಾರಣ ಟಿ.ಎನ್​. ಸೀತಾರಾಂ. ರಾಜಕುಮಾರ್​ ಅವರು ಹೇಗೆ ಒಂದು ದೊಡ್ಡ ಪ್ರೇಕ್ಷಕರ ವಲಯವನ್ನು ಸಿನಿಮಾದತ್ತ ಸೆಳೆದರೋ, ಸೀತಾರಾಂ ಸಹ ಕಿರುತೆರೆಯತ್ತ ಜನರನ್ನು ಸೆಳೆದರು’ ಎಂದರು.

    ಈಗ ಧಾರಾವಾಹಿ ಮಾಡುವುದು ಬಡವರ ಮಕ್ಕಳು, ಶ್ರೀಮಂತರ ಮಕ್ಕಳ ಜತೆಗೆ ರನ್ನಿಂಗ್​ ರೇಸ್​ ಮಾಡಿದಂತೆ ಎನ್ನುವ ಅವರು, ‘ಆಗ ಪೈಪೋಟಿಗೆ ಮೂರು ಧಾರಾವಾಹಿಗಳಿದ್ದವು. ಈಗ 50 ಧಾರಾವಾಹಿಗಳಿವೆ. ದೊಡ್ಡ ಬಜೆಟ್​ನ ಧಾರಾವಾಹಿಗಳ ಜತೆಗೆ ಪೈಪೋಟಿ ನಡೆಸುವುದು ಸುಲಭದ ಮಾತಲ್ಲ. ಇದೊಂಥರಾ ಬಡವರ ಮಕ್ಕಳು, ಶ್ರೀಮಂತರ ಮಕ್ಕಳ ಜತೆಗೆ ರನ್ನಿಂಗ್​ ರೇಸ್​ ಮಾಡಿದಂತೆ. 5000 ವಷರ್ಗಳಿಂದ ‘ಮಾಯಾಮೃಗ’ ಯಾರಿಗೂ ಸಿಕ್ಕಿಲ್ಲ. ನಮಗೂ ಸಿಕ್ಕಿಲ್ಲ. ನಿಮಗೂ ಸಿಗುವುದಿಲ್ಲ. ಆದರೂ ಅದನ್ನು ಹಿಡಿಯಲು ಓಡುತ್ತಿರುತ್ತೇವೆ. ಇದು ಈ ಧಾರಾವಾಹಿಯ ಆಶಯ ಸಹ ಹೌದು’ ಎಂದರು.

    ಇದನ್ನೂ ಓದಿ: ‘ಗಂಧದ ಗುಡಿ’ಯಲ್ಲಿ ಮಿಂದೆದ್ದ ಅಭಿಮಾನಿಗಳು; ಇಂದು ಎಲ್ಲಾ ಪ್ರದರ್ಶನಗಳು ಫುಲ್​

    ‘ಮತ್ತೆ ಮಾಯಾಮೃಗ’ ಧಾರಾವಾಹಿಯನ್ನು ಟಿ.ಎನ್​. ಸೀತಾರಾಂ, ಪಿ. ಶೇಷಾದ್ರಿ ಮತ್ತು ನಾಗೇಂದ್ರ ಶಾನ್​ ಜಂಟಿಯಾಗಿ ನಿರ್ದೇಶನ ಮಾಡುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಲಕ್ಷ್ಮೀ ಚಂದ್ರಶೇಖರ್​, ಮಾಳವಿಕಾ, ಎಂ.ಡಿ. ಪಲ್ಲವಿ, ದೀಪಶ್ರೀ ಮುಂತಾದವರು ನಟಿಸುತ್ತಿದ್ದಾರೆ.

    ಬದುಕು ಬದಲಾಗಬಹುದು, ಭಾವನೆಗಳಲ್ಲ … ಮತ್ತೆ ಬರಲಿದೆ ‘ಮಾಯಾಮೃಗ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts