More

  ವ್ಯವಸ್ಥೆ ವಿಚಾರದಲ್ಲಿ ನಿರ್ಲಕ್ಷೃ ಸಲ್ಲ

  ಗಂಗಾವತಿ: ಹನುಮಮಾಲೆ ಧರಿಸಿದ ಭಕ್ತರ ಅನುಕೂಲಕ್ಕಾಗಿ ನದಿ ಮತ್ತು ಕಾಲುವೆಗಳಿಗೆ ನೀರು ಹರಿಸುವ ನೀತಿಯನ್ನು ನೀರಾವರಿ ಸಲಹಾ ಸಮಿತಿ ರೂಪಿಸಬೇಕಿದೆ ಎಂದು ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಹೇಳಿದರು.

  ಇದನ್ನೂ ಓದಿ: ನೀರು, ಮೇವಿನ ಸಮಸ್ಯೆಗೆ ತಕ್ಷಣ ಸ್ಪಂದಿಸಿ; ನಿರ್ಲಕ್ಷೃ ವಹಿಸಿದ ಅಧಿಕಾರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ; ಡಿಸಿ ಎಚ್ಚರಿಕೆ

  ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಡಿ.24ರಂದು ಜರುಗಲಿರುವ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮ ಪೂರ್ವ ಸಿದ್ಧತೆ ಪರಿಶೀಲಿಸಿ, ನಂತರ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದರು.

  ಅಯೋಧ್ಯೆಯ ರಾಮ ಮಂದಿರದಷ್ಟೆ ಕಿಷ್ಕಿಂದಾದ ಅಂಜನಾದ್ರಿ ಬೆಟ್ಟ ಮುಖ್ಯವಾಗಿದ್ದು, ಹನುಮಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತರು ಬರುವ ನಿರೀಕ್ಷೆಯಿದ್ದರೂ, ವ್ಯವಸ್ಥೆ ವಿಚಾರದಲ್ಲಿ ತಾಲೂಕಾಡಳಿತ ನಿರ್ಲಕ್ಷೃವಹಿಸಿದೆ. ಕೆಲವೇ ದಿನ ಬಾಕಿಯಿದ್ದಾರು ಶೇ.40ರಷ್ಟು ವ್ಯವಸ್ಥೆ ಪೂರ್ಣಗೊಂಡಿಲ್ಲ.

  ನದಿ ಮತ್ತು ಕಾಲುವೆ ದಡದಲ್ಲಿ ಸ್ನಾನಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಪ್ರತಿವರ್ಷದಂತೆ ಈ ಬಾರಿಯು ವಿಸರ್ಜನೆ ವೇಳೆ ನೀರು ಬಿಡುವ ಪದ್ಧತಿಯನ್ನು ನೀರಾವರಿ ಸಲಹಾ ಸಮಿತಿ ನಿರ್ಣಯಿಸಬೇಕಿದ್ದು, ಸದಸ್ಯರು ಒತ್ತಡ ಹಾಕಬೇಕಿದೆ.

  ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ಶ್ರೀರಾಮ ಸರ್ಕ್ಯೂಟ್ ಯೋಜನೆಯಡಿ ಕಿಷ್ಕಿಂದಾ ಕ್ಷೇತ್ರವನ್ನೊಳಪಡಿಸುವುದರ ಜತೆಗೆ ವಿಶೇಷ ಅನುದಾನ ೋಷಿಸಬೇಕು. ಮೊದಲ ಹಂತದ ಅಭಿವೃದ್ಧಿಗೆ 500 ಕೊ.ರೂ.ಗಳ ಅಗತ್ಯ, ಅನುದಾನ ಬಿಡುಗಡೆಗೆ ಕೇಂದ್ರ ಸರ್ಕಾರದ ರಾಜ್ಯ ಪ್ರತಿನಿಧಿಗಳು ಒತ್ತಡ ಹೇರಬೇಕಿದೆ.

  ವ್ಯವಸ್ಥೆ ವಿಚಾರದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಸರಿಯಲ್ಲ. ಹನುಮಮಾಲೆ ಕಾರ್ಯಕ್ರಮ ಸಂದರ್ಭದಲ್ಲಿ ವ್ಯಾಪಾರಕ್ಕೆ ಎಲ್ಲ ಸಮುದಾಯಕ್ಕೂ ಅವಕಾಶ ಕಲ್ಪಿಸಬೇಕಿದೆ ಎಂದರು. ವಾಹನ ಪಾರ್ಕಿಂಗ್, ಪಾಕಶಾಲೆ, ಸ್ನಾನಘಟ್ಟ ಪ್ರದೇಶ ಸೇರಿ ಹಲವೆಡೆ ಪರಿಶೀಲಿಸಿ, ವ್ಯವಸ್ಥೆ ಸರಿಪಡಿಸಲು ಅಧಿಕಾರಿಗಳಿಗೆ ಸಲಹೆ ನೀಡಿದರು.

  ದೇವಾಲಯ ಸಮಿತಿ ಸಿಇಒ ಅರವಿಂದ ಸುತಗುಂಡಿ, ಗ್ರೇಡ್2 ತಹಸೀಲ್ದಾರ್ ಮಹಾಂತಗೌಡ ಗೌಡರ್, ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ಆರೋಗ್ಯ ನಿರೀಕ್ಷಕ ಎ.ನಾಗರಾಜ್, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts