More

    ಕ್ರೀಡಾ ಕ್ಷೇತ್ರದಲ್ಲಿದೆ ಅಪಾರ ಅವಕಾಶ

    ವಿಜಯವಾಣಿ ಸುದ್ದಿಜಾಲ ಆನೇಕಲ್
    ಕ್ರೀಡಾ ಕ್ಷೇತ್ರದಲ್ಲಿ ಸಾಧಿಸಲು ಅಪಾರ ಅವಕಾಶಗಳಿದ್ದು, ನೆಚ್ಚಿನ ಕ್ರೀಡೆಯಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಂಡು ಸಾಧಿಸಬೇಕು ಎಂದು ಅಲಯನ್ಸ್ ವಿಶ್ವವಿದ್ಯಾಲಯದ ಸಹ ಕುಲಪತಿ ಅಭಯ್ ಛೆಬ್ಬಿ ಅಭಿಪ್ರಾಯಪಟ್ಟರು.
    ಪಟ್ಟಣ ಸಮೀಪದ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ‘ಭಾರತದಲ್ಲಿ ಕ್ರೀಡೆಯ ಹೊಸ ಕಾನೂನು ಸವಾಲುಗಳು’ ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
    ಯುವ ಜನರು ಕ್ರೀಡಾ ಕ್ಷೇತ್ರದ ಸಂಪನ್ಮೂಲಗಳಾಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಪ್ರತಿಭಾವಂತ ಕ್ರೀಡಾ ಪಟುಗಳಿದ್ದು, ಅಂತಹವರಿಗೆ ಸೂಕ್ತ ಅವಕಾಶಗಳ ಅಗತ್ಯವಿದೆ. ಐಪಿಎಸ್, ಪ್ರೊ ಕಬಡ್ಡಿಯಿಂದಾಗಿ ಹೊಸ ಪ್ರತಿಭೆಗಳಿಗೆ ಪ್ರಾಮುಖ್ಯತೆ ದೊರೆತಿದ್ದು, ಕ್ರೀಡಾ ಪಟುಗಳಿಗೆ ಸರ್ಕಾರಿ ಉದ್ಯೋಗ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದರು.
    ಏಕಲವ್ಯ ಪ್ರಶಸ್ತಿ ಪುರಸ್ಕೃತ ಅರ್ಜುನ್ ದೇವಯ್ಯ ತೀತಮಲ , ಸಮಾಜದ ಪರಿವರ್ತನೆಯಲ್ಲಿ ಕ್ರೀಡೆಗಳ ಪಾತ್ರ ಮತ್ತು ಸಾಮೂಹಿಕ ಭ್ರಾತೃತ್ವವು ಭಾರತದ ಕ್ರೀಡಾ ವಾತಾವರಣ ವಿಷಯದ ಬಗ್ಗೆ ವಿಚಾರ ಮಂಡಿಸಿದರು. 2036ರಲ್ಲಿ ಒಲಿಂಪಿಕ್ಸ್‌ನಲ್ಲಿ ಭಾರತದ ಪಾತ್ರ ವಿಷಯದ ಬಗ್ಗೆ ಫಾಕ್ಸ್ ಮಂಡಲ್ ಅಸೋಸಿಯೇಟ್ಸ್ ಸಂತೋಷ್ ವಿಕ್ರಮ್ ಸಿಂಗ್, ಕ್ರೀಡಾ ಪತ್ರಕರ್ತೆ ಮನುಜಾ ವೀರಪ್ಪ, ಅಂಕಿತ್ ಸೂರಿ ವಿಚಾರ ಮಂಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts