More

    ಭಾರತ-ಆಸ್ಟ್ರೇಲಿಯಾ ನಡುವಿನ ಸಿಡ್ನಿ ಟೆಸ್ಟ್‌ಗೆ ಕರೊನಾತಂಕ!

    ಮೆಲ್ಬೋರ್ನ್: ಬಾರ್ಡರ್-ಗಾವಸ್ಕರ್ ಟ್ರೋಫಿಗೆ ಚಾಲನೆ ದೊರೆತಿರುವ ಬೆನ್ನಲ್ಲಿಯೇ ಸರಣಿಯ ಮೂರನೇ ಟೆಸ್ಟ್ ಪಂದ್ಯ ನಿಗದಿಯಾಗಿರುವ ಸಿಡ್ನಿಯಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ. ಇದರಿಂದಾಗಿ ನ್ಯೂ ಸೌತ್ ವೇಲ್ಸ್ ರಾಜ್ಯದ ಗಡಿಯಲ್ಲಿ ಬಿಗಿ ನಿರ್ಬಂಧ ಹೇರಲಾಗಿದ್ದು, ಪಂದ್ಯ ಆಯೋಜನೆಗೆ ಆತಂಕ ಎದುರಾಗಿದೆ. ಆದರೆ ಆತಿಥೇಯ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಸದ್ಯಕ್ಕೆ ಯಾವುದೇ ಗಲಿಬಿಲಿಗೊಳಗಾಗದೆ, ನಿಗದಿಯಂತೆಯೇ ಪಂದ್ಯ ಆಯೋಜಿಸುವ ವಿಶ್ವಾಸ ವ್ಯಕ್ತಪಡಿಸಿದೆ.

    ಇದನ್ನೂ ಓದಿ: ಕಪಿಲ್ ದೇವ್ ದಾಖಲೆ ಹಿಂದಿಕ್ಕಿದ ಆರ್.ಅಶ್ವಿನ್..!

    ಭಾರತ ತಂಡ ಪ್ರವಾಸದ ಆರಂಭದಲ್ಲಿ ತಲಾ 2 ಏಕದಿನ ಮತ್ತು ಟಿ20 ಪಂದ್ಯಗಳ ಸಹಿತ ಸೀಮಿತ ಓವರ್ ಸರಣಿಯ 4 ಪಂದ್ಯಗಳನ್ನು ಸಿಡ್ನಿಯಲ್ಲೇ ಆಡಿತ್ತು. ಟೆಸ್ಟ್ ಸರಣಿಯ 3ನೇ ಪಂದ್ಯ ಜನವರಿ 7ರಿಂದ 11ರವರೆಗೆ ಸಿಡ್ನಿಯ ಎಸ್‌ಸಿಜಿ ಮೈದಾನದಲ್ಲೇ ನಿಗದಿಯಾಗಿದೆ. ಆದರೆ ಇದೀಗ ಸಿಡ್ನಿಯಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ದಿಢೀರ್ ಏರಿಕೆ ಕಂಡಿದ್ದು, ಶುಕ್ರವಾರ 28 ಸಕ್ರಿಯ ಪ್ರಕರಣಗಳು ಕಂಡುಬಂದಿವೆ.

    ‘ನಮ್ಮ ವೈದ್ಯಕೀಯ ತಜ್ಞರು ಸಾಕಷ್ಟು ಚರ್ಚೆ ಮತ್ತು ಸಭೆಗಳನ್ನು ನಡೆಸುತ್ತಿದ್ದಾರೆ. ಆದರೆ ನಾವು ಈ ಕಾರಣಕ್ಕಾಗಿ ಈ ಬಾರಿ ಬೇಸಗೆಯ ಋತುವಿನಲ್ಲಿ ನಮ್ಮ ಆಟಗಾರರನ್ನು ಬಯೋ-ಬಬಲ್ ವಲಯದಲ್ಲಿಟ್ಟಿದ್ದೇವೆ. ಪರಿಸ್ಥಿತಿಯ ಮೇಲೆ ನಾವು ಗಮನವಿಟ್ಟಿದ್ದೇವೆ. ನಾವೀಗಲೇ ಗಾಬರಿಗೊಳ್ಳುವುದಿಲ್ಲ. ಶಾಂತವಾಗಿ ಪರಿಶೀಲಿಸಲಿದ್ದೇವೆ. ಸರ್ಕಾರಗಳು ಈ ಸಾಂಕ್ರಾಮಿಕ ಪಿಡುಗನ್ನು ಉತ್ತಮವಾಗಿ ನಿಭಾಯಿಸುತ್ತಿವೆ. ನಾವು ಅವರೊಂದಿಗೆ ನಿಕಟ ಸಂಪರ್ಕದಲ್ಲಿರುತ್ತೇವೆ’ ಎಂದು ಸಿಎಯ ಮಧ್ಯಂತರ ಮುಖ್ಯಸ್ಥ ನಿಕ್ ಹಾಕ್ಲೆ ತಿಳಿಸಿದ್ದಾರೆ.

    ಇದನ್ನೂ ಓದಿ:  ಕರೊನಾ ಹಾವಳಿಯಿಂದಾಗಿ ಮತ್ತೊಂದು ಕ್ರೀಡಾ ಲೀಗ್ ಮುಂದೂಡಿಕೆ

    ಪಂದ್ಯ ನಿಗದಿಯಂತೆ ನಡೆಯುವ ಬಗ್ಗೆ ಸದ್ಯಕ್ಕೆ ಯಾವುದೇ ಅನುಮಾನ ಬೇಡ. ಇದಕ್ಕಾಗಿಯೇ ನಾವು ಬಯೋ-ಬಬಲ್ ರಚಿಸಿದ್ದೇವೆ. ಮಹಿಳಾ ಬಿಗ್‌ಬಾಷ್, ಬಿಬಿಎಲ್, ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಎಲ್ಲ ನಿಯಮಗಳನ್ನು ಶಿಸ್ತಾಗಿ ಪಾಲಿಸುತ್ತಿದ್ದಾರೆ. ಹೀಗಾಗಿ ಯಾವುದೇ ಭೀತಿ ಬೇಡ ಎಂದು ನಿಕ್ ಹಾಕ್ಲೆ ಹೇಳಿದ್ದಾರೆ. ಆದರೂ ಮುಂದಿನ 3 ದಿನಗಳ ನಿರ್ಣಾಯಕವಾಗಿರಲಿವೆ ಎಂದಿದ್ದಾರೆ.

    ಸರಣಿಯ 2ನೇ ಟೆಸ್ಟ್ ಪಂದ್ಯ ಡಿಸೆಂಬರ್ 26ರಿಂದ ಮೆಲ್ಬೋರ್ನ್‌ನಲ್ಲಿ ನಡೆಯಲಿದೆ. ಅಗತ್ಯಬಿದ್ದರೆ ಸರಣಿಯ ಮೂರನೇ ಪಂದ್ಯವನ್ನೂ ಇಲ್ಲೇ ಆಯೋಜಿಸಲು ಸಿದ್ಧರಿದ್ದೇವೆ ಎಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನ ಮುಖ್ಯಸ್ಥ ಸ್ಟುವರ್ಟ್ ಫಾಕ್ಸ್ ತಿಳಿಸಿದ್ದಾರೆ.

    ಸತತ ವೈಫಲ್ಯದಿಂದ ಭಾರಿ ಟ್ರೋಲ್‌ಗೆ ಒಳಗಾದ ಪೃಥ್ವಿ ಷಾ

    ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸೋಲುಣಿಸಿದ ನ್ಯೂಜಿಲೆಂಡ್

    ಯೋಗಾಸನ ಇನ್ನು ಸ್ಪರ್ಧಾತ್ಮಕ ಕ್ರೀಡೆ, ಯೋಗಪಟುಗಳಿಗೆ ಏನೇನು ಲಾಭವಿದೆ ಗೊತ್ತೇ?

    ಪಾಕ್ ಕ್ರಿಕೆಟ್ ಮಂಡಳಿಯಿಂದ ಕಿರುಕುಳ, 28ನೇ ವಯಸ್ಸಲ್ಲೇ ವೇಗಿ ಆಮೀರ್ ವಿದಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts