More

    ಬೆಂಗಳೂರು: ಪೆಟ್ರೋಲ್​ ಖಾಲಿಯಾಗಿ ನಿರ್ಜನ ರಸ್ತೆಯಲ್ಲಿ ಪರದಾಡುತ್ತಿದ್ದ ವ್ಯಕ್ತಿ , ಸ್ವಿಗ್ಗಿ ಬಾಯ್​​​​​ ಸಹಾಯಕ್ಕೆ ಭಾರೀ ಮೆಚ್ಚುಗೆ..!

    ಕೆಲವೊಮ್ಮೆ ಗಾಡಿಯಲ್ಲಿ ಪೆಟ್ರೋಲ್​​ ಖಾಲಿಯಾಗುತ್ತೆ ಅನ್ನೋದನ್ನ ಮರೆತು ನಾವು ದೂರದ ಪ್ರದೇಶಕ್ಕೆ ಪ್ರಯಾಣ ಬೆಳೆಸಲು ಹೋಗಿರುತ್ತೇವೆ. ಪೆಟ್ರೋಲ್​​ ಖಾಲಿ ಆಯ್ತು ಅನ್ನೋ ಸಂದರ್ಭ ವಾಹನಗಳನ್ನ ಹತ್ತಿರದ ಪೆಟ್ರೋಲ್​​ ಬಂಕ್​ಗೆ ಕೊಂಡೊಯ್ಯಲು ಪರದಾಡಿರುತ್ತೇವೆ.
    ಅದೇ ರೀತಿ ಇದೀಗ ಬೆಂಗಳೂರಿನ ನಿರ್ಜನ ರಸ್ತೆಯಲ್ಲಿ ತಡರಾತ್ರಿ ಶ್ರವಣ್ ಟಿಕೂ ಎಂಬ ವ್ಯಕ್ತಿ ಪೆಟ್ರೋಲ್​ ಖಾಲಿಯಾಗಿ ಅಲ್ಲೇ ಬೈಕ್​ ನಿಲ್ಲಿಸಿ ಸ್ಚವಲ್ಪ ಹೊತ್ತು ಪರದಾಡಿದ್ದಾನೆ.


    ಕೋರಮಂಗಲದಲ್ಲಿರುವ ಸ್ನೇಹಿತರೊಬ್ಬರ ಮನೆಯಿಂದ ಸರ್ಜಾಪುರ ರಸ್ತೆಯಲ್ಲಿರುವ ತಮ್ಮ ಮನೆಗೆ ಹಿಂದಿರುಗುತ್ತಿದ್ದಾಗ ದ್ವಿಚಕ್ರ ವಾಹನ ಏಕಾಏಕಿ ಪೆಟ್ರೋಲ್ ಖಾಲಿಯಾಗಿ ನಿಂತಿದೆ.


    ಮರಾತ್ರಿಯ ಬೈಕ್‌ನಲ್ಲಿ ಇಂಧನ ಖಾಲಿಯಾಗಿದ್ದರಿಂದ ಸುಮಾರು 2.5 ಕಿಲೋಮೀಟರ್ ದೂರದಲ್ಲಿದ್ದ ಪೆಟ್ರೋಲ್ ಬಂಕ್​ಗೆ, ಅವನು ತನ್ನ ಬೈಕನ್ನು ಎಳೆಯಲು ಪ್ರಾರಂಭಿಸಿದ್ದಾನೆ.


    ಅಲ್ಲೇ ಹತ್ತಿರದಲ್ಲಿದ್ದ ಓರ್ವ ಸ್ವಿಗ್ಗಿ ಡೆಲಿವರಿ ಬಾಯ್​​ ವ್ಯಕ್ತಿ ವಾಹನವನ್ನ ತಳ್ಳುತ್ತಿರೋದನ್ನ ಕಂಡ ಆತನ ಸಹಾಯಕ್ಕೆ ಆಗಮಿಸಿದ್ದಾನೆ. ಈತ ಡೆಲಿವರಿ ತಲುಪಿಸಬೇಕಿದ್ದರೂ ಅಪರಿಚಿತ ವ್ಯಜಕ್ತಿಗೆ ಸಹಾಯ ಮಾಡೋಕೆ ಮುಂದಾಗಿದ್ದಾನೆ. ಪೆಟ್ರೋಲ್ ಬಂಕ್ ಕಡೆಗೆ ಟಿಕೂನ ಬೈಕನ್ನು ಎಳೆದುಕೊಂಡು ಹೋಗಲು ಅವನು ತನ್ನ ಸ್ವಂತ ಮೋಟಾರ್ ಸೈಕಲ್ ಉಪಯೋಗಿಸಿದ್ದು, ಪೆಟ್ರೋಲ್​ ಬಂಕ್​​ಗೆ ಇಬ್ಬರೂ ಜತೆಯಾಗಿ ತೆರಳಿದ್ದಾರೆ.


    ಆದರೆ ಇವರಿಬ್ಬರೂ ಪೆಟ್ರೋಲ್​ ಬಂಕ್​ಗೆ ತೆರಳಿದಾಗ ಅದು ಮುಚ್ಚಲ್ಪಟ್ಟಿತ್ತು. ಇಬ್ಬರೂ ಅಲ್ಲಿಂದ ಮತ್ತೆ 3 ಕಿ.ಮೀ. ದುರದಲ್ಲಿದ್ದ ಪೆಟ್ರೋಲ್​ ಬಂಕ್​ಗೆ ಬೈಕನ್ನ ಎಳೆದೊಯ್ದಿದ್ದಾರೆ ನಂತರ ಪೆಟ್ರೋಲ್​ ಹಾಕಿಸಿಕೊಂಡಿದ್ದಾರೆ.


    ಟಿಕೂ ಸ್ವಿಗ್ಗಿ ಬಾಯ್​ಗೆ 500ರೂ. ಗಳನ್ನ ನೀಡೋಕೆ ಮುಂದಾಗಿದ್ದು, ಏಜೆಂಟ್​​​ ಸಹಾಯ್ಕಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಟಿಕೂ ಏಜೆಂಟ್ಗೆ 500 ರೂಪಾಯಿಗಳನ್ನು ಮೆಚ್ಚುಗೆಯ ಸಂಕೇತವಾಗಿ ನೀಡಿಲು ಮುಂದಾದರೂ ಕೂಡಾ ಏಜೆಂಟ್ ಹಣವನ್ನು ನಿರಾಕರಿಸಿದ್ದಾರೆ.


    ಸದ್ಯ ಟುಕೂ ತಮ್ಮ ಮತ್ತು ಡೆಲಿವರಿ ಬಾಯ್​​ ಜತೆಗಿನ ಸೆಲ್ಫಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಭಾರೀ ಮಟ್ಟಿನಲ್ಲಿ ವೈರಲ್​ ಆಗಿದೆ. ಜತೆಗೆ ಡೆಲಿವರಿ ಬಾಯ್​​​ ಸಹಾಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts