More

    ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ ಸ್ವಿಯಾಟೆಕ್, ಚೊಚ್ಚಲ ಗ್ರಾಂಡ್ ಸ್ಲಾಂ ಸಂಭ್ರಮ

    ಪ್ಯಾರಿಸ್: ಪೋಲೆಂಡ್‌ನ 19ರ ಹರೆಯದ ಆಟಗಾರ್ತಿ ಇಗಾ ಸ್ವಿಯಾಟೆಕ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದಾರೆ. ಈ ಮೂಲಕ ಚೊಚ್ಚಲ ಗ್ರಾಂಡ್ ಸ್ಲಾಂ ಪ್ರಶಸ್ತಿ ಒಲಿಸಿಕೊಂಡ ಸಾಧನೆ ಮಾಡಿದ್ದಾರೆ.

    ರೋಲ್ಯಾಂಡ್ ಗ್ಯಾರಸ್‌ನಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಇಗಾ ಸ್ವಿಯಾಟೆಕ್ ಅಮೆರಿಕದ ಸೋಫಿಯಾ ಕೆನಿನ್‌ಗೆ 6-4, 6-1 ನೇರಸೆಟ್‌ಗಳಿಂದ ಸೋಲುಣಿಸಿ ಕ್ಲೇಕೋರ್ಟ್ ರಾಣಿ ಎನಿಸಿದರು. ವರ್ಷದ ಮತ್ತು ವೃತ್ತಿಜೀವನದ 2ನೇ ಗ್ರಾಂಡ್ ಸ್ಲಾಂ ಗೆಲುವಿನ ನಿರೀಕ್ಷೆಯಲ್ಲಿದ್ದ 21 ವರ್ಷದ ಕೆನಿನ್ ಕನಿಷ್ಠ ಪ್ರತಿರೋಧವನ್ನೂ ಒಡ್ಡಲು ವಿಫಲರಾದರು.

    ಸ್ವಿಯಾಟೆಕ್ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದ ಪೋಲೆಂಡ್‌ನ ಮೊದಲ ಆಟಗಾರ್ತಿ ಎನಿಸಿದರು. ಇದಕ್ಕೂ ಮುನ್ನ 2012ರಲ್ಲಿ ಆಗ್ನೆಸ್ಕಾ ರಾಡ್ವಾಂಸ್ಕಾ ವಿಂಬಲ್ಡನ್ ರನ್ನರ್‌ಅಪ್ ಆಗಿದ್ದು ಶ್ರೇಷ್ಠ ಸಾಧನೆ ಎನಿಸಿತ್ತು. 2007ರ (ಜಸ್ಟಿನ್ ಹೆನಿನ್) ಬಳಿಕ ಪ್ಯಾರಿಸ್‌ನಲ್ಲಿ ಒಂದೂ ಸೆಟ್ ಸೋಲದೆ ಪ್ರಶಸ್ತಿ ಜಯಿಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಯೂ ಸ್ವಿಯಾಟೆಕ್ ಅವರದಾಗಿದೆ. ಅಲ್ಲದೆ ಫ್ರೆಂಚ್ ಪ್ರಶಸ್ತಿ ಗೆದ್ದ 2ನೇ ಶ್ರೇಯಾಂಕರಹಿತ ಆಟಗಾರ್ತಿ ಎನಿಸಿದ್ದಾರೆ. 3 ವರ್ಷಗಳ ಹಿಂದೆ ಜೆಲೆನಾ ಒಸ್ತಾಪೆಂಕೋ ಮೊದಲ ಬಾರಿ ಈ ಸಾಧನೆ ಮಾಡಿದ್ದರು.

    ವಿಶ್ವ ನಂ. 54 ಆಟಗಾರ್ತಿಯಾಗಿ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ಸ್ವಿಯಾಟೆಕ್ ಈ ಜಯದಿಂದ 17ನೇ ರ‌್ಯಾಂಕ್‌ಗೆ ಪ್ರಗತಿ ಕಾಣಲಿದ್ದಾರೆ. ಸ್ವಿಯಾಟೆಕ್ ಪ್ರಶಸ್ತಿ ಜತೆಗೆ 13.81 ಕೋಟಿ ರೂ. ಬಹುಮಾನ ಗೆದ್ದರೆ, ಕೆನಿನ್ 6.90 ಕೋಟಿ ರೂ. ಪಡೆದರು.

    ಮತ್ತೆ ಗೆಲುವು ಕೈಚೆಲ್ಲಿದ ಕಿಂಗ್ಸ್ ಇಲೆವೆನ್ ಪಂಜಾಬ್; ಕೆಕೆಆರ್ ವಿರುದ್ಧವೂ ಸೋಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts