More

    ಫೇಸ್​​ಬುಕ್​ ಫ್ರೆಂಡ್​ ಮದ್ವೆಯಾಗಲು ಭಾರತಕ್ಕೆ ಬಂದ ಸ್ವೀಡನ್​ ಮಹಿಳೆ! ಹಿಂದು ಸಂಪ್ರದಾಯದಂತೆ ನಡೆಯಿತು ವಿವಾಹ

    ಲಖನೌ: ನಿಜವಾದ ಪ್ರೀತಿಯು ಜಾತಿ, ಧರ್ಮ, ಬಣ್ಣ, ಭಾಷೆ ಹಾಗೂ ಗಡಿ ಎಲ್ಲವನ್ನು ಮೀರಿದ್ದು ಎಂಬುದಕ್ಕೆ ಈ ಒಂದು ಲವ್​ಸ್ಟೋರಿ ತಾಜಾ ನಿದರ್ಶನವಾಗಿದೆ. ಫೇಸ್​ಬುಕ್​ನಲ್ಲಿ ಫ್ರೆಂಡ್​ ಆದ ಉತ್ತರ ಪ್ರದೇಶ ಮೂಲದ ವ್ಯಕ್ತಿಯನ್ನು ಮದುವೆಯಾಗಲು ಸ್ವೀಡನ್​ ದೇಶದ ಮಹಿಳೆ ವಿಮಾನವೇರಿ ಭಾರತಕ್ಕೆ ಹಾರಿ ಬಂದ ಅಪರೂಪದ ಪ್ರಸಂಗ ಬೆಳಕಿಗೆ ಬಂದಿದೆ.

    ಸ್ವೀಡನ್​ ದೇಶದ ಮಹಿಳೆ ಕ್ರಿಸ್ಟನ್​​​ ಲಿಬರ್ಟ್​ ಉತ್ತರ ಪ್ರದೇಶದ ಪವನ್​ ಕುಮಾರ್​ ಎಂಬಾತನನ್ನು ಮದುವೆಯಾಗಿದ್ದಾಳೆ. ಇಬ್ಬರು ಫೇಸ್​ಬುಕ್​ ಮೂಲಕ ಪರಿಚಿತರಾಗಿದ್ದರು. ಎತಾಹದಲ್ಲಿರುವ ಶಾಲೆಯಲ್ಲಿ ಹಿಂದು ಸಂಪ್ರದಾಯದಂತೆ ಶುಕ್ರವಾರ ಇಬ್ಬರು ವಿವಾಹವಾಗಿದ್ದಾರೆ.

    ಎಎನ್​ಐ ಹಂಚಿಕೊಂಡ ಮದುವೆಯ ವಿಡಿಯೋದಲ್ಲಿ ಕ್ರಿಸ್ಟನ್ ಲೀಬರ್ಟ್, ಭಾರತೀಯ ಮದುವೆಯ ಡ್ರೆಸ್ ಧರಿಸಿ, ವರಮಾಲಾ ಸಮಾರಂಭದಲ್ಲಿ ವರನ ಕುತ್ತಿಗೆಗೆ ಹಾರವನ್ನು ಹಾಕಿದರು. ಇಬ್ಬರು 2012ರಲ್ಲಿ ಫೇಸ್​ಬುಕ್​ನಲ್ಲಿ ಪರಿಚಿತರಾದರು. ಡೆಹ್ರಾಡೂನ್​ನಲ್ಲಿ ಪವನ್​ ಬಿ.ಟೆಕ್​ ಪೂರ್ಣಗೊಳಿಸಿದ್ದು, ಸಂಸ್ಥೆಯೊಂದರಲ್ಲಿ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದಾರೆ.

    ಇಬ್ಬರು ಮದುವೆಗೆ ಪವನ್​ ಕುಟುಂಬ ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ. ಮಕ್ಕಳ ಸಂತೋಷದಲ್ಲಿ ನಮ್ಮ ಸಂತೋಷ ಅಡಗಿದೆ ಎಂದು ವರನ ತಂದೆ ಗೀತಮ್ ಸಿಂಗ್ ಹೇಳಿದರು. ಈ ಮದುವೆಗೆ ನಾವು ಸಂಪೂರ್ಣವಾಗಿ ಒಪ್ಪುತ್ತೇವೆ ಎಂದರು. (ಏಜೆನ್ಸೀಸ್​)

    PHOTOS| ಅಮೆರಿಕ ಯುವಕನನ್ನು ವರಿಸಿದ ಆಂಧ್ರ ಯುವತಿ: ಅಪರೂಪದ ಮದ್ವೆಗೆ ಸಾಕ್ಷಿಯಾದ ತಿರುಪತಿ

    ಅಪರೂಪದ ಲವ್​ ಸ್ಟೋರಿ… ಹಿಂದು ಸಂಪ್ರದಾಯದಂತೆ ಆಂಧ್ರ ಯುವಕನ ಕೈಹಿಡಿದ ಟರ್ಕೀಶ್​ ಲೇಡಿ!

    ಶ್ವಾನದಿಂದ ಶುರುವಾದ ಲವ್​ಸ್ಟೋರಿ: ಇದು ಇಂಗ್ಲಿಷ್​ ಲೇಡಿ-ಕೇರಳ ಯುವಕನ ಅಪರೂಪದ ಪ್ರೇಮ ಕತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts