More

    ದೇವರಿಗೆ ಚಳಿಯಾಗದಿರಲು ಭಕ್ತರಿಂದ ಸ್ವೆಟರ್, ಶಾಲು ಕಾಣಿಕೆ! ಬಿಸಿ ಬಿಸಿ ನೈವೇದ್ಯವೂ ಅರ್ಪಣೆ

    ನವದೆಹಲಿ: ಚಳಿಗಾಲ ಆರಂಭವಾಗಿದ್ದು, ದಿನ ಕಳೆದಂತೆ ಚಳಿಯು ಹೆಚ್ಚಾಗಲಿದೆ. ಕೊರೆಯುವ ಚಳಿಯಿಂದ ರಕ್ಷಿಸಿಕೊಳ್ಳಲು ಇನ್ನು ಮುಂದೆ ಜನರು ಮಂದವಾದ ಬೆಡ್​ಶೀಟ್​ ಅಥವಾ ಸ್ವೆಟರ್​ಗಳ ಮೊರೆ ಹೋಗಲಿದ್ದಾರೆ. ಅಚ್ಚರಿಯ ಸಂಗತಿ ಏನೆಂದರೆ, ಕೇವಲ ಮನುಷ್ಯರಿಗೆ ಮಾತ್ರವಲ್ಲದೆ ದೇವರುಗಳಿಗೂ ಸ್ವೆಟರ್ ಹೊದಿಸಲಾಗುತ್ತದೆ. ಇದು ಕೇಳಲು ವಿಚಿತ್ರ ಎನಿಸಿದರೂ ಈ ಸುದ್ದಿ ಓದಿದ ಮೇಲೆ ನೀವೇ ನಂಬುತ್ತೀರಿ. ​

    ಮಧ್ಯಪ್ರದೇಶದ ಭೋಪಾಲ್​ನಲ್ಲಿರುವ ಸಂಕಟ್ ಮೋಚನ್ ಹನುಮಾನ್ ದೇವಸ್ಥಾನದಲ್ಲಿ ಭಕ್ತರು ದೇವರಿಗೆ ಸ್ವೆಟರ್​ ಮತ್ತು ಶಾಲೂಗಳನ್ನು ಅರ್ಪಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಹನುಮಂತ, ವಿನಾಯಕ, ಶಿವ, ರಾಮ ಮತ್ತು ಸೀತಮ್ಮ ದೇವರ ವಿಗ್ರಹಗಳನ್ನು ಸ್ವೆಟರ್​ ಮತ್ತು ಶಾಲೂಗಳಿಂದ ಹೊದಿಸಲಾಗುತ್ತಿದೆ.

    ಈ ಬಗ್ಗೆ ದೇವಸ್ಥಾನದ ಅರ್ಚಕರೊಬ್ಬರು ಮಾತನಾಡಿದ್ದು, ನಮಗೆ ತಣ್ಣಗಾದಂತೆ ಅಥವಾ ಚಳಿಯಾದಂತೆ ದೇವರಿಗೂ ಚಳಿಯಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಹನುಮಂತ ಸೇರಿದಂತೆ ಎಲ್ಲ ದೇವರು ಮತ್ತು ದೇವತೆಗಳಿಗೆ ಸ್ವೆಟರ್ ಮತ್ತು ಶಾಲುಗಳಂತಹ ಉಣ್ಣೆಯ ಬಟ್ಟೆಗಳನ್ನು ಧರಿಸಲಾಗಿದೆ ಎಂದರು.

    ಇದೇ ರೀತಿ ದಮೋಹ್‌ನ ಜಾನಕಿ ದೇವಸ್ಥಾನದಲ್ಲಿ ಮಾತೆ ದುರ್ಗೆಯ ವಿಗ್ರಹಕ್ಕೂ ಸ್ವೆಟರ್​ ಹಾಕಲಾಗಿದೆ. ಅಲ್ಲದೆ, ಛಿಂದ್ವಾರಾ, ಗ್ವಾಲಿಯರ್ ಸೇರಿದಂತೆ ರಾಜ್ಯದ ಇತರ ಹಲವು ದೇವಾಲಯಗಳಲ್ಲಿ ಮೂರ್ತಿಗಳನ್ನು ಚಳಿಯಿಂದ ರಕ್ಷಿಸಲು ಬೆಚ್ಚಗಿನ ಬಟ್ಟೆಗಳನ್ನು ಧರಿಸಲಾಗಿದೆ. ಅಷ್ಟೇ ಅಲ್ಲ, ಚಳಿಯಲ್ಲಿ ಬಿಸಿಬಿಸಿ ಆಹಾರವನ್ನೂ ದೇವರಿಗೆ ನೈವೇದ್ಯ ಅರ್ಪಿಸಲಾಗುತ್ತಿದೆ.

    ಚಳಿಗಾಲದಲ್ಲಿ ಸ್ವೆಟರ್​ ಮತ್ತು ಬೆಡ್​ಶೀಟ್​ಗಳನ್ನು ಹೊದಿಸುವ ನಮ್ಮ ಭಕ್ತರು ಬೇಸಿಗೆಯಲ್ಲಿ ಎಸಿ ಮತ್ತು ಫ್ಯಾನ್‌ಗಳನ್ನು ಸಹ ಹಾಕುತ್ತಾರೆ. ಭಾರತದ ಅನೇಕ ದೇವಾಲಯಗಳಲ್ಲಿಯೂ ಇಂತಹ ಘಟನೆಗಳು ನಡೆದಿರುವುದು ನಿಜ. ಕೆಲವು ದೇವಸ್ಥಾನಗಳಲ್ಲಿ ಬೇಸಿಗೆಯ ತಾಪ ನಿವಾರಿಸಲು ಎಸಿ, ಫ್ಯಾನ್ ಅಳವಡಿಸಿದ್ದಾರೆ. ಬಿಹಾರದ ಗಯಾದಲ್ಲಿ ದೇವರಿಗೆ ಎಸಿಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಕೋವಿಡ್ ಸಮಯದಲ್ಲಿ ದೇಶದ ಅನೇಕ ದೇವಾಲಯಗಳಲ್ಲಿ ದೇವರಿಗೆ ಮಾಸ್ಕ್​ ಧರಿಸಿದ ಉದಾಹರಣೆಗಳು ಇವೆ. (ಏಜೆನ್ಸೀಸ್​)

    ರಕ್ತದಾನದ ಮೂಲಕ ಜೀವದಾನ ಮಾಡಿದ ಶ್ವಾನ! ಅಪರೂಪದ ಸಂದರ್ಭಕ್ಕೆ ಸಾಕ್ಷಿಯಾದ ಅಕ್ಕಿಆಲೂರ

    ಹರಿಣ ಪಡೆಯನ್ನು ಬಗ್ಗುಬಡಿಯಲು ರಿಂಕು ಸಿಂಗ್​ಗೆ ರಾಹುಲ್​ ದ್ರಾವಿಡ್​ ಕೊಟ್ಟ ಸಲಹೆ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts