More

    ಹರಿಣ ಪಡೆಯನ್ನು ಬಗ್ಗುಬಡಿಯಲು ರಿಂಕು ಸಿಂಗ್​ಗೆ ರಾಹುಲ್​ ದ್ರಾವಿಡ್​ ಕೊಟ್ಟ ಸಲಹೆ ಹೀಗಿದೆ…

    ನವದೆಹಲಿ: ಟೀಮ್​ ಇಂಡಿಯಾದ ಭರವಸೆಯ ಸ್ಫೋಟಕ ಆಟಗಾರ ರಿಂಕು ಸಿಂಗ್​, ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದ ವೇಗದ ಮತ್ತು ಬೌನ್ಸ್​ ಪಿಚ್​ಗಳಲ್ಲಿ ತಮ್ಮ ಬ್ಯಾಟಿಂಗ್​ ಪ್ರದರ್ಶನ ತೋರಲು ಸಜ್ಜಾಗಿದ್ದಾರೆ. ಇಂತಹ ಪಿಚ್​ಗಳಲ್ಲಿ ಉತ್ತಮವಾಗಿ ಆಡಲು ಹೆಚ್ಚುವರಿ ಶ್ರಮ ಮತ್ತು ಅಭ್ಯಾಸದ ಅಗತ್ಯವಿದೆ ಎಂದು ರಿಂಕು ಸಿಂಗ್​ ಅಭಿಪ್ರಾಯಪಟ್ಟಿದ್ದಾರೆ.

    ಇತ್ತೀಚೆಗಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ತಮ್ಮ ಬಿರುಸಿನ ಬ್ಯಾಟಿಂಗ್​ ಪ್ರದರ್ಶನದಿಂದ ರಿಂಕು ಸಿಂಗ್​ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇಂದು ನಡೆದ ತರಬೇತಿಯ ವೇಳೆ ಆಫ್ರಿಕಾದ ಪಿಚ್​ ಸ್ಥಿತಿಯನ್ನು ಅರಿತುಕೊಂಡಿದ್ದು, ಈ ಬಗ್ಗೆ ಮಾತನಾಡಿರುವ ರಿಂಕು, ಇಂದು ಬ್ಯಾಟಿಂಗ್​ ಮಾಡುವಾಗ ಭಾರತೀಯ ಪಿಚ್​ಗಳಲ್ಲಿ ಸಾಮಾನ್ಯವಾಗಿ ಅನುಭವಿಸುವ ಅನುಭವಕ್ಕೆ ಹೋಲಿಸಿದರೆ ಇಲ್ಲಿನ ಪಿಚ್​ಗಳಲ್ಲಿ ಹೆಚ್ಚಿನ ಮಟ್ಟದ ಬೌನ್ಸ್ ಆಗುವುದನ್ನು ನಾನು ಗಮನಿಸಿದ್ದೇನೆ ಎಂದು ತಿಳಿಸಿದರು.

    ಹರಿಣಗಳ ವಿರುದ್ಧ ನಡೆಯಲಿರುವ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದ ಭಾನುವಾರ ಆರಂಭವಾಗಲಿದ್ದು, ರಿಂಕು ಸಿಂಗ್​ ನಂ.5 ಅಥವಾ 6 ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿಯಲಿದ್ದಾರೆ. ತಂಡದ ಮುಖ್ಯ ತರಬೇತುದಾರ ರಾಹುಲ್​ ದ್ರಾವಿಡ್​ ಅವರು ನೀಡಿದ ಬ್ಯಾಟಿಂಗ್​ ಸಲಹೆಯನ್ನು ಇದೇ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ. ಆಫ್ರಿಕಾ ಪಿಚ್​ ಎಂದೂ ನೋಡದೇ ನೀನು ಮಾಮೂಲಿಯಂತೆ 5 ಅಥವಾ 6ನೇ ಕ್ರಮಾಂಕದಲ್ಲಿ ಆಟವಾಡುವಂತೆ ದ್ರಾವಿಡ್​ ಸಲಹೆ ನೀಡಿದ್ದಾರಂತೆ.

    ಮೊದಲ ಅಭ್ಯಾಸದ ಅವಧಿ, ಉತ್ತಮ ಹವಾಮಾನದಿಂದಾಗಿ ನಾನು ಎಂಜಾಯ್​ ಮಾಡಿದ್ದೇನೆ. ರಾಹುಲ್​ ದ್ರಾವಿಡ್​ ಸರ್​ ಅವರ ಜತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು, ನನಗೆ ತುಂಬಾ ಕುಸಿಯಾಗಿದೆ. ಈ ಹಿಂದೆ ಹೇಗೆ ಆಡುತ್ತಿದ್ದನೋ ಅದೇ ರೀತಿಯಲ್ಲಿ ಆಟವಾಡುವುದನ್ನು ಮುಂದುವರಿಸುವಮತೆ ಮತ್ತು ತನ್ನ ಮೇಲೆ ನಂಬಿಕೆಯನ್ನು ಮುಂದುವರಿಸುವಂತೆ ಸಲಹೆ ನೀಡಿದರು ಎಂದು ರಿಂಕು ಸಿಂಗ್​ ಬಿಸಿಸಿಐ ಟಿವಿಗೆ ಹೇಳಿದ್ದಾರೆ.

    ರಿಂಕು ಸಿಂಗ್​ ಕುರಿತು
    ರಿಂಕು ಅವರು ಉತ್ತರ ಪ್ರದೇಶದ ಆಲಿಗಢದಲ್ಲಿ ಜನಿಸಿದರು. 2023ನೇ ಸಾಲಿನ ಐಪಿಎಲ್​ಗೆ ಅವರನ್ನು 55 ಲಕ್ಷ ರೂ.ಗೆ ಕೆಕೆಆರ್​ ತಂಡ ತಮ್ಮಲ್ಲೇ ಉಳಿಸಿಕೊಂಡಿತು. 2018ರಲ್ಲಿ 80 ಲಕ್ಷ ರೂ.ಗೆ ರಿಂಕು ಅವರನ್ನು ಕೆಕೆಆರ್​ ಪ್ರಪ್ರಥಮವಾಗಿ ಹರಾಜಿನಲ್ಲಿ ಖರೀದಿ ಮಾಡಿತು. ಆದರೆ, ತನ್ನ ಚೊಚ್ಚಲ ಸೀಸನ್​ನಲ್ಲಿ ರಿಂಕು ಅವರು ಉತ್ತಮ ಪ್ರದರ್ಶನವನ್ನು ತೋರದಿದ್ದರೂ ಅವರ ಸಾಮರ್ಥ್ಯವನ್ನು ಪರಿಗಣಿಸಲಾಯಿತು ಮತ್ತು ಅವರನ್ನು 2019ನೇ ಸಾಲಿನ ಐಪಿಎಲ್​ ಟೂರ್ನಿಗೂ ತಂಡದಲ್ಲಿ ಉಳಿಸಿಕೊಳ್ಳಲಾಯಿತು. ರಿಂಕು ಅವರು ತಮ್ಮ ಬ್ಯಾಟಿಂಗ್‌ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಕೆಕೆಆರ್​ ಅಕಾಡೆಮಿಯಲ್ಲಿ ಕೆಕೆಆರ್​ ಸಹಾಯಕ ಕೋಚ್ ಅಭಿಷೇಕ್ ನಾಯರ್ ಸಲಹೆ ಪಡೆದುಕೊಂಡಿದ್ದಾರೆ. ಅದರ ಫಲಿತಾಂಶಗಳು ಉತ್ತರ ಪ್ರದೇಶಕ್ಕಾಗಿ ಅವರ 2018-19 ರಣಜಿ ಟ್ರೋಫಿ ಆಡಿದಾಗ ಗೋಚರಿಸಿದವು. ರಣಜಿಯಲ್ಲಿ ರಿಂಕು ಉತ್ತಮ ಪ್ರದರ್ಶನ ನೀಡಿದರು. ನಾಲ್ಕು ಶತಕಗಳೊಂದಿಗೆ ಪಂದ್ಯಾವಳಿಯಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ (10 ಇನ್ನಿಂಗ್ಸ್‌ಗಳಲ್ಲಿ 953 ರನ್) ಆಟಗಾರ ಎನಿಸಿಕೊಂಡರು. 2017ರಲ್ಲಿ ರಿಂಕು ಅವರು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ (ಈಗ ಪಂಜಾಬ್ ಕಿಂಗ್ಸ್) ಭಾಗವಾಗಿದ್ದರು. ಅನುಮತಿ ಪಡೆಯದೆ ಅಬುಧಾಬಿಯಲ್ಲಿ ರಂಜಾನ್ ಟಿ20 ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಬಿಸಿಸಿಐ ಮೂರು ತಿಂಗಳು ರಿಂಕು ಅವರನ್ನು ಅಮಾನತುಗೊಳಿಸಿತ್ತು. ಇಲ್ಲಿಯವರೆಗೆ ರಿಂಕು ಅವರು 40 ಪ್ರಥಮ ದರ್ಜೆ, 50 ಲಿಸ್ಟ್-ಎ ಮತ್ತು 78 ಟಿ20 ಪಂದ್ಯಗಳನ್ನು ಆಡಿದ್ದಾರೆ. ಎಂಟು ಶತಕಗಳು ಮತ್ತು 41 ಅರ್ಧಶತಕಗಳೊಂದಿಗೆ 6,016 ರನ್ ಗಳಿಸಿದ್ದಾರೆ. (ಏಜೆನ್ಸೀಸ್​)

    ರಿಂಕು ಸಿಂಗ್​ ಕ್ರಿಕೆಟರ್​​ ಆಗುವ ಮುನ್ನ ಸ್ವೀಪರ್​ ಕೆಲಸ ಮಾಡ್ತಿದ್ರಾ? ಇಲ್ಲಿದೆ ಅಸಲಿ ಸಂಗತಿ…

    10 ಸೆಕೆಂಡುಗಳಲ್ಲಿ ಮಿಯಾವ್..​ಮಿಯಾವ್​ ಕ್ಯಾಟ್​​ ಎಲ್ಲಿದೆ ಪತ್ತೆ ಮಾಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts