More

    ವಿವೇಕಾನಂದರ ಹಾದಿಯಲ್ಲಿ ಮುನ್ನಡೆಯಿರಿ ; ಸಂಸದ ಎಸ್.ಮುನಿಸ್ವಾಮಿ ಸಲಹೆ

    ಕೋಲಾರ : ದೇಶದ ಭದ್ರತೆ ಹಾಗೂ ಸುರಕ್ಷತೆ ಹಿತದೃಷ್ಟಿಯಿಂದ ಯುವ ಸಮುದಾಯ ಒಗ್ಗಟ್ಟಿನಿಂದ ಸ್ವಾಮಿ ವಿವೇಕಾನಂದರ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಸಂಸದ ಎಸ್. ಮುನಿಸ್ವಾಮಿ ಹೇಳಿದರು.

    ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಉತ್ತಮನಾಗು ಉಪಕಾರಿಯಾಗು ಎಂಬ ಘೋಷವಾಕ್ಯದೊಂದಿಗೆ ಸ್ವಾಮಿ ವಿವೇಕಾನಂದರ 158ನೇ ಜನ್ಮದಿನ ಪ್ರಯುಕ್ತ ಜಿಲ್ಲಾ ಯುವ ಮೋರ್ಚಾ ಭಾನುವಾರ ಆಯೋಜಿಸಿದ್ದ ಕಾಲ್ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಯುವಕರು ಮಾದರಿಯಾಗಿ, ಉತ್ತಮ ಪ್ರಜೆಗಳಾಗಬೇಕು. ಉತ್ತಮ ಸಂಸ್ಕೃತಿ, ನಾಡು-ನುಡಿ, ಧರ್ಮಕ್ಕೆ ದುಡಿದು ದೇಶದ ಹಿತದೃಷ್ಟಿಯಿಂದ ನಾವೆಲ್ಲಾ ಒಂದೇ ಎನ್ನುವುದನ್ನು ಎತ್ತಿ ಹಿಡಿಯಬೇಕು ಎಂದರು. ಸ್ವಾಮಿ ವಿವೇಕಾನಂದರನ್ನು ಸ್ಫೂರ್ತಿಯಾಗಿ ತೆಗೆದುಕೊಂಡವರು ಉತ್ತಮ ಪ್ರಜೆಗಳಾಗಿ, ಪ್ರಧಾನಿ, ರಾಷ್ಟ್ರಪತಿಗಳಾಗಿದ್ದಾರೆ. ಉತ್ತಮನಾಗು ಉಪಕಾರಿಯಾಗು ಎಂಬ ಘೋಷವಾಕ್ಯ ಮಕ್ಕಳ ಮನಸ್ಸಿಗೆ ನಾಟಿದರೆ ಮುಂದೆ ದೇಶದ ಸತ್ಪ್ರಜೆಗಳಾಗುತ್ತಾರೆಂಬ ಸದುದ್ದೇಶದಿಂದ ಪ್ರಮುಖ ಬೀದಿಗಳಲ್ಲಿ ವಾಕಥಾನ್ ನಡೆಸಲಾಗುತ್ತಿದೆ ಎಂದರು.

    ಕೇಸರಿ ಬಣ್ಣದ ಟೀಶರ್ಟ್ ಧರಿಸಿದ್ದ ಯುವಕರು, ವಿವಿಧ ಸಂಘಟನೆ ಮುಖಂಡರು, ಸ್ವಾಮಿ ವಿವೇಕಾನಂದರ ಅಭಿಮಾನಿಗಳು ಘೋಷವಾಕ್ಯಗಳನ್ನೊಳಗೊಂಡ ಭಿತ್ತಿಫಲಕ ಪ್ರದರ್ಶನದೊಂದಿಗೆ ಕಾಲೇಜು ಆವರಣದಿಂದ ಮೆರವಣಿಗೆ ಹೊರಟು ನಗರದ ಕಾಳಮ್ಮ ಗುಡಿ ಬೀದಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ವೃತ್ತ, ಶಾರದ ಚಿತ್ರಮಂದಿರ ರಸ್ತೆ, ದೊಡ್ಡಪೇಟೆ, ಎಂಜಿ ವೃತ್ತ ಮಾರ್ಗವಾಗಿ ಸಾಗಿ ಗಾಂಧಿವನದಲ್ಲಿ ಮುಕ್ತಾಗೊಳಿಸಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್, ರಾಜ್ಯ ಉಪಾಧ್ಯಕ್ಷ ವಸಂತಗೌಡ, ಕೆಡಿಎ ಅಧ್ಯಕ್ಷ ಓಂಶಕ್ತಿ ಚಲಪತಿ, ಬಿಜೆಪಿ ನಗರಾಧ್ಯಕ್ಷ ತಿಮ್ಮರಾಯಪ್ಪ, ತಾಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರಗೌಡ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಾಲಾಜಿ, ಕೋರ್ ಕಮಿಟಿ ಸದಸ್ಯ ವಿಜಯಕುಮಾರ್, ಉಪಾಧ್ಯಕ್ಷ ಮಾಗೇರಿ ನಾರಾಯಣಸ್ವಾಮಿ,ರಾಜೇಶ್ ಶೆಟ್ಟಿ, ಬಾಬು, ಅಪ್ಪಿ ನಾರಾಯಣಸ್ವಾಮಿ, ಮಾಧ್ಯಮ ಪ್ರಮುಖ್ ಕೆಂಬೋಡಿ ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts