More

    ಈಶ್ವರ ಖಂಡ್ರೆಯನ್ನು ಡಿಸಿಎಂ ಮಾಡುವಂತೆ ಮಠಾಧೀಶರ ಒತ್ತಾಯ

    ರಾಯಚೂರು: ಬಹುಮತ ಗಳಿಸಿರುವ ಕಾಂಗ್ರೆಸ್​ ಪಕ್ಷಕ್ಕೆ ಸಿಎಂ ಆಯ್ಕೆ ವಿಚಾರದಲ್ಲಿ ಇನ್ನೂ ಒಮ್ಮತಕ್ಕೆ ಬರಲಾಗಿಲ್ಲ. ಆದರೆ ಇದರ ನಡುವೆಯೇ ಉಪ ಮುಖ್ಯಮಂತ್ರಿ ವಿಚಾರವಾಗಿ ಒತ್ತಡ ಸೃಷ್ಟಿಯಾಗಿದೆ.

    ಈಶ್ವರ ಖಂಡ್ರೆ ಅವರನ್ನು ಉಪ ಮುಖ್ಯಮಂತ್ರಿ ಆಗಿಸುವಂತೆ ವೀರಶೈವ ಲಿಂಗಾಯತ ಮಠಾಧೀಶರು ಒತ್ತಡ ಹೇರಲಾರಂಭಿಸಿದ್ದಾರೆ. ರಾಯಚೂರಿನ ಕಿಲ್ಲೆ ಬೃಹನ್ಮಠದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಠಾಧೀಶರು ಈಶ್ವರ ಖಂಡ್ರೆಯನ್ನು ಡಿಸಿಎಂ ಆಗಿಸಬೇಕು ಎಂದು ಒತ್ತಾಯಿಸಿದರು.

    ಇದನ್ನೂ ಓದಿ: ಹವಾಲಾ ಮಾದರಿಯಲ್ಲಿ ಚುನಾವಣೆಗೆ ಹಣ ಹಂಚಿಕೆ, ಇಬ್ಬರ ಮೇಲೆ ಎಫ್​ಐಆರ್​

    ಕಾಂಗ್ರೆಸ್ ಪಕ್ಷಕ್ಕೆ ಮತದಾರರು ನಿಚ್ಚಳ ಬಹುಮತ ಕೊಟ್ಟಿದ್ದಾರೆ, ಮುಖ್ಯಮಂತ್ರಿ ಸ್ಥಾನದ ಆಯ್ಕೆ ನಡೆಯುತ್ತಿದೆ. ನಂಜುಂಡಪ್ಪ ವರದಿ ಜಾರಿಗೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಿಎಂ ಸ್ಥಾನ ಕೊಡಬೇಕು. ಸಿಎಂ ಸ್ಥಾನ ಕೊಡದಿದ್ದರೂ ಕಲ್ಯಾಣ ಕರ್ನಾಟಕಕ್ಕೆ ಡಿಸಿಎಂ ಸ್ಥಾನ ಕೊಡಲೇಬೇಕು. ಈಶ್ವರ ಖಂಡ್ರೆಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

    ಮಾತ್ರವಲ್ಲ, ಈಶ್ವರ ಖಂಡ್ರೆಗೆ ಡಿಸಿಎಂ ಸ್ಥಾನದ ಜೊತೆಗೆ ಕಲ್ಯಾಣ ಕರ್ನಾಟಕದ ಇತರರಿಗೂ ಸಚಿವ ಸ್ಥಾನ ಕೊಡಬೇಕು. ಹಂಪನಗೌಡ ಬಾದರ್ಲಿಗೆ ಮಂತ್ರಿ ಸ್ಥಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಕೊಡಬೇಕು ಎಂದೂ ಮಠಾಧೀಶರು ಆಗ್ರಹ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಮತ್ತೆ ಜೀವ ಬೆದರಿಕೆ!

    ಎಲೆಬಿಚ್ಚಾಲಿ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಚಾರ್ಯ ಸ್ವಾಮೀಜಿ, ನವಲಕಲ್ ಬೃಹನ್ಮಠ, ಸುಲ್ತಾನಪುರ ಮಠ, ಮಂಗಳವಾರಪೇಟೆ ಮಠ, ಯದ್ದಲದೊಡ್ಡಿ ಮಠ ಸೇರಿ ವಿವಿಧ ಮಠಾಧೀಶರಿಂದ ಈ ಒತ್ತಾಯ ವ್ಯಕ್ತವಾಯಿತು.

    ಚುನಾವಣಾ ಫಲಿತಾಂಶದ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ಕಾಂಗ್ರೆಸ್ ಅಭ್ಯರ್ಥಿ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts