More

    2ಎ ಮೀಸಲಾತಿಗಾಗಿ ಅ.1ರಿಂದ ಧರಣಿ : ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ

    ತುಮಕೂರು : ಪಂಚಮಸಾಲಿ ಲಿಂಗಾಯತ ಸವಾಜದ 2ಎ ಮೀಸಲಾತಿ ಕಲ್ಪಿಸುವ ಸಂಬಂಧ ಸರ್ಕಾರ ನೀಡಿದ್ದ ಗಡುವು ಸೆ.15ಕ್ಕೆ ಮುಗಿದಿದ್ದು, ಇನ್ನೆರಡು ದಿನದಲ್ಲಿ ಮೀಸಲಾತಿ ೋಷಣೆ ವಾಡದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅ.1 ರಿಂದ ಧರಣಿ ಸತ್ಯಾಗ್ರಹ ನಡೆಸುವುದಾಗಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

    ನಗರದ ಸಿದ್ಧಗಂಗಾ ಮಠಕ್ಕೆ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಅಭಿಯಾನದ ಅಂಗವಾಗಿ ಮಂಗಳವಾರ ಸಂಜೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ವಾತನಾಡಿದ ಅವರು, ಲಿಂಗಾಯತ ಪಂಚಮಸಾಲಿ ಮತ್ತು ಅದರ ಉಪನಾಮಗಳಾಗಿರುವ ಲಿಂಗಾಯತ ಗೌಡ, ಮಲೇಗೌಡ, ದೀಕ್ಷಾ ಲಿಂಗಾಯತ ಸಮುದಾಯದ ಮಕ್ಕಳಿಗೆ ಸಾವಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ತೊಂದರೆಯಾಗುತ್ತಿದೆ. ಹಾಗಾಗಿ, ನಮ್ಮ ಸಮುದಾಯವನ್ನು 2ಎಗೆ ಸೇರಿಸುವಂತೆ ಆಗ್ರಹಿಸುತ್ತೇವೆ ಎಂದರು.

    ಸರ್ಕಾರ ಸೆ.15 ರೊಳಗಾಗಿ ನಮ್ಮ ಸವಾಜಕ್ಕೆ ನ್ಯಾಯ ಒದಗಿಸುವುದಾಗಿ ವಾತು ಕೊಟ್ಟಿತ್ತು. ಆದರೆ, ಈಗ ಗಡುವು ಮುಗಿದಿದೆ. ಹಾಗಾಗಿ ಸರ್ಕಾರ ಕೊಟ್ಟಿರುವ ವಾತು ನೆನಪಿಸಿ, ಮತ್ತಷ್ಟು ಎಚ್ಚರಿಸಲು ಹಾಗೂ ಸಮುದಾಯವನ್ನು ಒಗ್ಗೂಡಿಸುವ ಸಲುವಾಗಿ ಪಂಚಮಸಾಲಿ ಪ್ರತಿಜ್ಞಾ ಅಭಿಯಾನ ನಡೆಸಲಾಗುತ್ತಿದೆ ಎಂದರು. ಮೀಸಲಾತಿ ಕಲ್ಪಿಸುವ ಸಂಬಂಧ ಸಿಎಂ ಬಸವರಾಜ ಬೊವ್ಮಾಯಿ, ಸಚಿವ ಸಿ.ಸಿ.ಪಾಟೀಲ್ ಕೂಡ ಸರ್ಕಾರದ ಅವಧಿಯೊಳಗೆ 2ಎ ಮೀಸಲಾತಿ ಕಲ್ಪಿಸುವುದಾಗಿ ಭರವಸೆ ನೀಡಿ, ಹೋರಾಟ ಮುಂದುವರಿಸುವುದು ಬೇಡ ಎಂದು ಸಲಹೆ ವಾಡಿದ್ದಾರೆ. ಆದರೆ, ನಾವು ಅಕ್ಟೋಬರ್ 1 ರಿಂದ ಬೆಂಗಳೂರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರಣಿ ಸತ್ಯಾಗ್ರಹ ಆರಂಭಿಸುವುದಾಗಿ ೋಷಣೆ ವಾಡಿದ್ದೇವೆ ಎಂದರು.

    ಪಾದಯಾತ್ರೆ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ವಿಜಯಾನಂದ ಕಾಶಪ್ಪನವರ್ ವಾತನಾಡಿ, ಸರ್ಕಾರ ಕೊಟ್ಟ ವಾತು ಉಳಿಸಿಕೊಳ್ಳಬೇಕು, ನಮ್ಮ ಈ ಹೋರಾಟ ಅಂತಿಮಗೊಳಿಸುವುದಿಲ್ಲ, ನಮಗೆ ಮೀಸಲಾತಿ ಆದೇಶ ಪತ್ರ ಕೈ ಸೇರಬೇಕು. ನಮ್ಮ ಸಮುದಾಯದ ಮಕ್ಕಳ ಆದೇಶ ಪತ್ರ ಹಿಡಿದು ತಹಸೀಲ್ದಾರ್ ಕಚೇರಿಗಳಿಗೆ ಹೋಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts