More

    ಸುಶಾಂತ್ ನನ್ನು ಕೊಲೆಗೈಯಲಾಗಿದೆ ಎಂದ ಸುಬ್ರಮಣಿಯನ್ ಸ್ವಾಮಿ

    ನವದೆಹಲಿ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಷಯ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ.
    ಸುಶಾಂತ್ ನನ್ನು ‘ಕೊಲೆ ಮಾಡಲಾಗಿದೆ’ ಎಂದು ಸಂಸದ ಸುಬ್ರಮಣಿಯನ್ ಸ್ವಾಮಿ ಗುರುವಾರ ಆರೋಪಿಸಿದ್ದಾರೆ.
    ಇದು ಕೊಲೆ ಎಂಬುದಕ್ಕೆ ಅವರು ಅವರು ಟ್ವಿಟ್ಟರ್​​ನಲ್ಲಿ ದಾಖಲಾತಿಗಳನ್ನು ಪೋಸ್ಟ್ ಮಾಡಿದ್ದು, ಅವುಗಳ 26 ಅಂಶಗಳ ಪೈಕಿ 24 ಅಂಶಗಳು ಕೊಲೆ ಹೇಳಿಕೆಯನ್ನು ತೋರುತ್ತಿವೆ ಎನ್ನಲಾಗಿದೆ.
    “ಸುಶಾಂತ್ ಸಿಂಗ್ ನನ್ನು ಕೊಲೆ ಗೈಯಲಾಗಿದೆ ಎನ್ನಲು ಕಾರಣಗಳನ್ನು ನೀಡಿದ ಸ್ವಾಮಿ, ದಾಖಲಾತಿಯ ಪ್ರತಿಯನ್ನು ಲಗತ್ತಿಸಿದ್ದಾರೆ. ಅವರು ಟ್ವೀಟ್ ಮಾಡಿದ ಮಾಹಿತಿ ಪ್ರಕಾರ, ಸುಶಾಂತ್ ಅವರ ಕುತ್ತಿಗೆಯ ಗುರುತು ಆತ್ಮಹತ್ಯೆಗೆ ಹೊಂದಿಕೆಯಾಗಿಲ್ಲ ಆದರೆ ನರಹತ್ಯೆಗೆ ಹೊಂದಿಕೆಯಾಗಿದೆ.‘ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವಾತ, ಆ ಸಮಯದಲ್ಲಿ ತನ್ನ ಕಾಲುಗಳ ಕೆಳಗಿನ ಟೇಬಲ್ ತೆಗೆದು ನೇಣು ಹಾಕಿಕೊಳ್ಳಬೇಕು. ಆದರೆ ಹತ್ಯೆ ಮಾಡುವಾಗ/ ಕತ್ತು ಹಿಸುಕುವಾಗ ಇಷ್ಟು ದೊಡ್ಡ ಬಲ ಬೇಕಾಗಿಲ್ಲ” ಎಂದು ಡಾಕ್ಯುಮೆಂಟ್ ಹೇಳುತ್ತದೆ.

    ಇದನ್ನೂ ಓದಿ:  ಪರೀಕ್ಷೆಯೇ ಮಾಡದೆ ಕರೊನಾವೈರಾಣು ಸೋಂಕು ಪತ್ತೆ ಮಾಡಬಹುದು, ಹೇಗಂತೀರಾ?

    ರಜಪೂತ ದೇಹದ ಮೇಲಿನ ಗುರುತುಗಳು ‘ಹೊಡೆದಿರುವುದನ್ನು ಸೂಚಿಸುತ್ತವೆ.ಎಂದು ಡಾಕ್ಯೂಮೆಂಟ್ ಹೇಳುತ್ತದೆ.
    ಮುಂಬೈ ಪೊಲೀಸರು ಸಿಆರ್‌ಪಿಸಿ (Code of Criminal Procedure) ಯನ್ನು ಅನುಸರಿಸುತ್ತಾರೆಯೇ ಎಂದು ಸ್ವಾಮಿ ಪ್ರಶ್ನಿಸಿದ್ದಾರೆ. “ಎಂ 3 ಪ್ರಕಾರ ಮುಂಬೈ ಪೊಲೀಸರು ಎಫ್ಐಆರ್ ಎನ್ನುವುದು ಅಂತಿಮ ಮಾಹಿತಿ ವರದಿ ಎಂದೇ ನಂಬುತ್ತಾರೆ ಹೊರತು ಕ್ರಿಮಿನಲ್ ಪ್ರೊಸೀಜರ್ ಕೋಡ್ ಪ್ರಕಾರ “ಪ್ರಥಮ ಮಾಹಿತಿ ವರದಿ’ಯನ್ನಲ್ಲ. ಆದ್ದರಿಂದ ಎಫ್ಐಆರ್ ದಾಖಲಿಸಲು ಮುಂಬೈ ಪೊಲೀಸರು ಎಲ್ಲ ಮಾಹಿತಿ ಬರುವವರೆಗೆ ಕಾಯುತ್ತಿದ್ದಾರೆ.
    ಬುಧವಾರ ಸ್ವಾಮಿ ಬಿಹಾರ ಸಿಎಂ ನಿತೀಶ್ ಕುಮಾರ್ ಅವರೊಂದಿಗೆ ಮಾತನಾಡಿದ್ದು, ಈ ಕುರಿತು ಸಿಬಿಐ ತನಿಖೆಯನ್ನು ಪ್ರಾರಂಭಿಸುವುದಾಗಿ ಅವರು ಹೇಳಿರುವುದಾಗಿ ತಿಳಿಸಿದ್ದಾರೆ.

    ಇದನ್ನೂ ಓದಿ:  ಚೀನಾದ ಟಿಕ್​ಟಾಕ್​ ಆ್ಯಪ್​ ಕುರಿತು ತನಿಖೆ ಆರಂಭಿಸಿದ ಅಮೆರಿಕ

    “ನಾನು ನಿತೀಶ್ ಕುಮಾರ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಅಪರಾಧಿಗಳನ್ನು ಪತ್ತೆ ಹಚ್ಚಿ, ಸುಶಾಂತ್ ವಿಷಯದಲ್ಲಿ ನ್ಯಾಯ ಒದಗಿಸಬೇಕಾದುದು ಅಗತ್ಯ ಎಂದು ಸ್ವಾಮಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
    ಸುಶಾಂತ್ ಗೆಳತಿ ಎನ್ನಲಾದ ರಿಯಾ ಚಕ್ರವರ್ತಿ ಮತ್ತು ಅವರ ಕುಟುಂಬ ಸದಸ್ಯರು ಸೇರಿ ಇತರ ಆರು ಜನರ ವಿರುದ್ಧ ಸುಶಾಂತ್ ತಂದೆ ದೂರು ನೀಡಿದ ಬೆನ್ನಲ್ಲೇ ಸ್ವಾಮಿ ಈ ಹೇಳಿಕೆ ನೀಡಿದ್ದಾರೆ. ಸುಶಾಂತ್ ಸಾವು ಚಲನಚಿತ್ರೋದ್ಯಮದಲ್ಲಿ ಸ್ವಜನಪಕ್ಷಪಾತದ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆ ಹುಟ್ಟುಹಾಕಿದೆ.

    ಸುಳ್ಳು ಹೇಳಿ ಬಾಯ್​ಫ್ರೆಂಡ್​​ ನೋಡಲು ಹೋದ ಬ್ಯೂಟಿಷಿಯನ್ ದುರಂತ ಅಂತ್ಯ: ಅಸಲಿ ಕಾರಣ ಬಹಿರಂಗ!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts