More

    ಸುಶಾಂತ್​ ಸಾಯುವ ಮುನ್ನ ಗೂಗಲ್​ನಲ್ಲಿ ಸರ್ಚ್​ ಮಾಡಿದ್ದೇನು?; ಮುಂಬೈ ಪೊಲೀಸ್​ ನೀಡಿದ್ದಾರೆ ಅಚ್ಚರಿಯ ಮಾಹಿತಿ!

    ಸುಶಾಂತ್ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಬಗೆಯ ತಿರುವು ಪಡೆದುಕೊಳ್ಳುತ್ತಿದೆ. ಬಿಹಾರ ಪೊಲೀಸರೂ ಮುಂಬೈಗೆ ಆಗಮಿಸಿ ವಿಚಾರಣೆಗೆ ಮುಂದಾಗಿದ್ದಾರೆ. ರಿಯಾ ಚಕ್ರವರ್ತಿ ಅವರನ್ನು ಪತ್ತೆ ಮಾಡುವ ಕಾರ್ಯ ಸಹ ಚಾಲ್ತಿಯಲ್ಲಿದೆ. ಈ ನಡುವೆ ಮುಂಬೈ ಮತ್ತು ಪಾಟ್ನಾ ಪೊಲೀಸರ ಮಧ್ಯೆ ಪ್ರಕರಣ ಸಂಬಂಧ ಮುಸುಕಿನ ಗುದ್ದಾಟವೂ ನಡೆಯುತ್ತಿದೆ. ಇಷ್ಟೆಲ್ಲ ಏರಿಳಿತಗಳ ನಡುವೆ ಇದೀಗ ಮುಂಬೈ ಪೊಲೀಸ್​ ಇಲಾಖೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವವಾದ ಅಂಶವನ್ನು ಹೊರಹಾಕಿದೆ. 
     
    ಅಂದರೆ, ಸುಶಾಂತ್​ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಕೆಲ ಗಂಟೆಗಳ ಮುನ್ನ ಆನ್​ಲೈನ್​ನಲ್ಲಿ ಏನೆಲ್ಲ ಸರ್ಚ್ ಮಾಡಿದ್ದರು ಎಂಬ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ‘ನೋವಿಲ್ಲದೆ ಸಾಯುವುದು ಹೇಗೆ’? ಎಂದು ಹುಡುಕಿದ್ದಾರೆ. ಸದ್ಯ ಈ ವಿಚಾರ ಮತ್ತಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಆತ್ಮಹತ್ಯೆಯೋ ಕೊಲೆಯೋ ಎಂಬುದು ಮತ್ತಷ್ಟು ಕಗ್ಗಂಟಾಗಿದೆ. 
     
    ಇದೆಲ್ಲದರ ಜತೆಗೆ ಮ್ಯಾನೇಜರ್ ದಿಶಾ ಸಾಲಿಯಾನ್  ಅವರ ಹೆಸರನ್ನೂ ಸುಶಾಂತ್​ ಗೂಗಲ್​ ಮಾಡಿದ್ದಾರೆ. ತಮ್ಮ ಹೆಸರನ್ನೂ ಹುಡುಕಿದ್ದು, ತಮ್ಮ ಕುರಿತಾದ ಒಂದಷ್ಟು ಲೇಖನಗಳನ್ನೂ ಓದಿದ್ದರು ಎಂಬ ವಿಚಾರ ಈ ಹಿಂದೆಯೇ ಬಹಿರಂಗವಾಗಿತ್ತು. ಈ ವಿಚಾರವನ್ನೂ ಪೊಲೀಸ್ ಇಲಾಖೆ ಹೇಳಿಕೊಂಡಿದೆ.
     
     
    ಇದೇ ವೇಳೆ ಬೈಪೋಲಾರ್ ಕಾಯಿಲೆ ಇರುವ ವಿಚಾರವನ್ನೂ ಮಾಧ್ಯಮದ ಎದುರು ಮತ್ತೊಮ್ಮೆ ಪ್ರಸ್ತಾಪಿಸಿ, ಕಳೆದ ಕೆಲ ತಿಂಗಳಿಂದ ಮಾತ್ರೆ ಸೇವಿಸುತ್ತಿದ್ದರು ಎಂದು  ಮುಂಬೈ ಪೊಲೀಸ್ ಕಮಿಷನರ್​ ಪರಮ್​ ಬೀರ್​ ಸಿಂಗ್​  ಹೇಳಿದ್ದಾರೆ. (ಏಜೆನ್ಸೀಸ್​)
     

    ಅರ್ನಬ್​ ಗೋಸ್ವಾಮಿ ಬಗ್ಗೆ ಚಿತ್ರ ಮಾಡ್ತಾರಂತೆ ವರ್ಮಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts