More

    ಹಬ್ಬದಾಚರಣೆಯಿಂದ ಧರ್ಮದ ಉಳಿವು

    ಶಿಕಾರಿಪುರ: ಹಬ್ಬ ಹರಿದಿನ, ಜಾತ್ರೆ, ಉತ್ಸವ, ಆಚಾರ, ವಿಚಾರಗಳು ನಮ್ಮ ಮಣ್ಣಿನಿಂದ ಬಂದಂತಹ ಆಚರಣೆಗಳಾಗಿವೆ. ಈ ಆಚರಣೆಗಳು ಉಳಿದರೆ ಧರ್ಮ ಉಳಿಯುತ್ತದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
    ಶುಕ್ರವಾರ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಶಿವರಾತ್ರಿ ಮಹೋತ್ಸವ ವಿಶೇಷ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಇಂದು ನಾವೆಲ್ಲ ಶಿವ ಧ್ಯಾನದಿಂದ ಪುನೀತರಾಗುವ ದಿನ. ದೇಶದ ದ್ವಾದಶ ಜ್ಯೋತಿರ್ಲಿಂಗಗಳು ಶೈವ ಸಿದ್ಧಾಂತ ಸಾರುತ್ತಿವೆ. ಶಿವರಾತ್ರಿಯಂದು ರಾತ್ರಿಯಿಡೀ ಜಾಗರಣೆ ಮಾಡಿ ಶಿವನ ಆರಾಧನೆ ಮಾಡುತ್ತಾರೆ. ಶಿವ ಪಂಚಾಕ್ಷರಿ ಮಂತ್ರ ಅದ್ಭುತ ಮಂತ್ರ ಎಂದರು.
    ಹಬ್ಬದ ಪ್ರಯುಕ್ತ ಈಶ್ವರೀಯ ವಿದ್ಯಾಲಯದಲ್ಲಿ ಸ್ನೇಹಕ್ಕ ಅವರು ಉತ್ತಮ ಕಾರ್ಯಕ್ರಮ ಆಯೋಜಿಸಿದ್ದಾರೆ. ವಿದ್ಯಾಲಯ ನಿರಂತರವಾಗಿ ಧರ್ಮ ಜಾಗೃತಿ ಕಾರ್ಯವನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥದಿಂದ ಮಾಡುತ್ತಿದ್ದು, ಭಕ್ತಿಯ ಶಕ್ತಿಯನ್ನು ಜಗತ್ತಿಗೆ ಸಾರುತ್ತಿದೆ ಎಂದರು ವಿದ್ಯಾಲಯದ ಸಂಚಾಲಕಿ ಸ್ನೇಹಕ್ಕ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎನ್.ವಿ.ಈರೇಶ್, ತಾಲೂಕು ಬ್ರಾಹ್ಮಣ ಸಮಾಜದ ಗೌರವಾಧ್ಯಕ್ಷ ವಸಂತ ಮಾಧವ, ಪ್ರಮುಖರಾದ ವಿಜಯಕುಮಾರ್, ರುದ್ರಮುನಿ, ಕಾಂಚನಾ ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts