More

    ಪ್ರೋತ್ಸಾಹದಿಂದ ಜಾನಪದ ಕಲೆಗಳ ಉಳಿವು

    ತ್ಯಾಗರ್ತಿ: ನಮ್ಮ ಪೂರ್ವಿಕರು ಅಕ್ಷರಜ್ಞಾನ ಇಲ್ಲದಿದ್ದರೂ ಜಾನಪದ ಕಲೆಗಳ ಮೂಲಕ ಮುಂದಿನ ಪೀಳಿಗೆಗೆ ಶಿಕ್ಷಣ ನೀಡುತ್ತ ಬಂದಿದ್ದಾರೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಹಸೆ ಚಿತ್ತಾರ ಕಲಾವಿದೆ ಲಕ್ಷ್ಮೀ ರಾಮಪ್ಪ ಹೇಳಿದರು.

    ಸಮೀಪದ ಉಳ್ಳೂರು ಸಿಗಂದೂರೇಶ್ವರಿ ಎಜುಕೇಶನಲ್ ಟ್ರಸ್ಟ್‌ನ ಸಾಗರ ಗಂಗೋತ್ರಿ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ 2023-24ನೇಸಾಲಿನ ವಿದ್ಯಾರ್ಥಿ ವೇದಿಕೆ, ಎನ್‌ಎಸ್‌ಎಸ್, ಯುವ ರೆಡ್‌ಕ್ರಾಸ್ ಘಟಕ ಹಾಗೂ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
    ಆಧುನಿಕ ಶಿಕ್ಷಣದಿಂದ ಜಾನಪದ ಕಲೆಗಳು ಮರೆಯಾಗುತ್ತಿವೆ. ಇದನ್ನು ಉಳಿಸಲು ಜಾನಪದ ಕಲಾವಿದರನ್ನು ಪ್ರೋತ್ಸಾಹಿಸಬೇಕು. ಜಾನಪದ ಕಲೆಯಲ್ಲಿ ಆಸಕ್ತಿ ಹೊಂದಿದ್ದ ನನಗೆ ಹಿರಿಯರು ಹೇಳಿಕೊಟ್ಟ ಸಾಹಿತ್ಯ ಓದು ಬರಹ ಇಲ್ಲದಿದ್ದರೂ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ ಎಂದರು.
    ಕವಿರತ್ನ ಕಾಳಿದಾಸ, ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಹಾಗೂ ದ.ರಾ.ಬೇಂದ್ರೆ ಅವರ ಅಕ್ಷರ ಜ್ಞಾನದ ಮಹತ್ವವನ್ನು ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೃಷ್ಣಮೂರ್ತಿ ಬಿಳಗಲ್ಲೂರು ವಿವರಿಸಿದರು. ಚುನಾವಣೆ, ವಿದ್ಯಾರ್ಥಿ ವೇದಿಕೆ, ಜನಪ್ರತಿನಿಧಿಗಳ ಜವಾಬ್ದಾರಿ ಕುರಿತು ಕಾನೂನು ಕಾಲೇಜಿನ ಪ್ರಾಚಾರ್ಯ ವಿ.ಎಸ್.ವಿನಯ್ ತಿಳಿಸಿದರು. ಕಾಲೇಜಿನಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜಾನಪದ ಕಲಾವಿದ ಆನಂದಪುರ ನಾಗರಾಜ್ ತೊಂಬ್ರಿ ಅವರನ್ನು ಸನ್ಮಾನಿಸಲಾಯಿತು.
    ಎನ್‌ಎಸ್‌ಎಸ್ ಯೋಜನಾಧಿಕಾರಿ ಎಂ.ಎಸ್.ಜ್ಯೋತಿ, ಉಪನ್ಯಾಸಕರಾದ ಜಿ.ಎಸ್.ಚಿದಾನಂದ, ವಿನಾಯಕ ಹೆಗಡೆ, ಎಸ್.ಚೈತ್ರಾ, ದೀಪಾ, ರೇವತಿ ಹೆಗಡೆ, ವಕೀಲ ಗಿರೀಶ್, ವಿದ್ಯಾರ್ಥಿ ಪ್ರತಿನಿಧಿಗಳಾದ ಗೋಕುಲರಾಜ್, ಅಕ್ಷರ, ಭೂಮಿಕಾ, ಅಕ್ಷಯ್ ಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts