More

    ರಾಜ್ಯ ಕಾಂಗ್ರೆಸ್‌ಗೆ ಇನ್ನು ಸುರ್ಜೆವಾಲಾ ಉಸ್ತುವಾರಿ; ದಿನೇಶ್‌ಗೆ 3 ರಾಜ್ಯಗಳ ಜವಾಬ್ದಾರಿ

    ಬೆಂಗಳೂರು: ಇಪ್ಪತ್ಮೂರು ಹಿರಿಯ ನಾಯಕರು ಬರೆದ ಪತ್ರದ ಹಿನ್ನೆಲೆಯಲ್ಲಿ ಅಖಿಲ ಭಾರತ ಕಾಂಗ್ರೆಸ್‌ನಲ್ಲಿ ಇತ್ತೀಚೆಗೆ ಉಂಟಾದ ಗದ್ದಲದ ಬಳಿಕ ಶುಕ್ರವಾರ ಸಂಘಟನೆಯನ್ನು ಪುನಾರಚಿಸಲಾಗಿದ್ದು ಎಐಸಿಸಿ ನೂತನ ತಂಡದ ಪಟ್ಟಿ ಪ್ರಕಟಿಸಲಾಗಿದೆ.

    ಕರ್ನಾಟಕದ ಉಸ್ತುವಾರಿಯಾಗಿದ್ದ ಕೆ.ಸಿ.ವೇಣುಗೋಪಾಲ್ ಅವರ ಜಾಗಕ್ಕೆ ರಣದೀಪ್ ಸಿಂಗ್ ಸುರ್ಜೆವಾಲ ನೇಮಕಗೊಂಡಿದ್ದಾರೆ. ವೇಣುಗೋಪಾಲ್ ಎಐಸಿಸಿ ಸಂಘಟನಾ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ. ರಾಜ್ಯ ಉಸ್ತುವಾರಿ ಆಗಿರುವ 52 ವಯಸ್ಸಿನ ರಣದೀಪ್ ಸುರ್ಜೆವಾಲ ಹರಿಯಾಣ ಮೂಲದವರು. ಶಾಸಕ, ಮಂತ್ರಿಯೂ ಆಗಿದ್ದರು. ಸದ್ಯ ಪಕ್ಷದ ಅಧಿಕೃತ ವಕ್ತಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಾಣಿಜ್ಯ ಮತ್ತು ಕಾನೂನು ಪದವೀಧರರು. ಈ ಹಿಂದೆ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಇದನ್ನೂ ಓದಿ: ಪುಸ್ತಕ ಪ್ರಿಯರಿಗೆ ಗುಡ್​ನ್ಯೂಸ್​; ಗ್ರಂಥಾಲಯಗಳನ್ನು ತೆರೆಯಲು ಅನುಮತಿ

    ದಿನೇಶ್ ಗುಂಡೂರಾವ್ ಅವರನ್ನು ತಮಿಳುನಾಡು, ಪುದುಚೆರಿ, ಗೋವಾದ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಮಹಾರಾಷ್ಟ್ರಕ್ಕೆ ಎಚ್.ಕೆ.ಪಾಟೀಲ್ ಅವರನ್ನು ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ. ಕೃಷ್ಣಬೈರೇಗೌಡ ಅವರು ಮಧೂಸೂಧನ್ ಮಿಸಿ ನೇತೃತ್ವದ ಎಐಸಿಸಿ ಚುನಾವಣಾ ಘಟಕದಲ್ಲಿ ಸ್ಥಾನ ಪಡೆದಿದ್ದಾರೆ. ಎಐಸಿಸಿ ಅಧ್ಯಕ್ಷರ ನೇತೃತ್ವದ ಕಾರ್ಯಕಾರಿ ಸಮಿತಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಖಾಯಂ ಆಹ್ವಾನಿತರಾಗಿ ಕೆ.ಎಚ್. ಮುನಿಯಪ್ಪ, ದಿನೇಶ್ ಗುಂಡೂರಾವ್, ಎಚ್.ಕೆ.ಪಾಟೀಲ್, ವಿಶೇಷ ಆಹ್ವಾನಿತರ ಪಟ್ಟಿಯಲ್ಲಿ ಬಿ.ವಿ. ಶ್ರೀನಿವಾಸ್ ಅವಕಾಶ ಪಡೆದಿದ್ದಾರೆ.

    ಕೇಂದ್ರ ಸಚಿವ ಸುರೇಶ್​ ಅಂಗಡಿಯವರಿಗೆ ಕೊವಿಡ್​​-19 ಸೋಂಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts