More

    ವೆಂಟಿಲೇಟರ್​ಗಳ ಸಮಸ್ಯೆ; ಆರಂಭದಲ್ಲಿ ಕೊರತೆ, ಈಗ ಬಾಹುಳ್ಯದ್ದೇ ಚಿಂತೆ

    ನವದೆಹಲಿ: ದೇಶದಲ್ಲಿ ಮಾರ್ಚ್​ನಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಂತೆ ಚಿಕಿತ್ಸೆಗೆ ವೆಂಟಿಲೇಟರ್​ಗಳು ಸಿಗದೆ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಉಸಿರಾಟದ ಸಮಸ್ಯೆ ಕಾಣಿಸುತ್ತಲೇ ಜನರನ್ನು ವೆಂಟಿಲೇಟರ್​ನಲ್ಲಿ ಇಟ್ಟು ಕೃತಕವಾಗಿ ಆಮ್ಲಜನಕವನ್ನು ಪೂರೈಕೆ ಮಾಡಲಾಗುತ್ತಿತ್ತು. ಹಾಗಾಗಿ ಆ ಸಂದರ್ಭದಲ್ಲಿ ವೆಂಟಿಲೇಟರ್​ಗಳ ಕೊರತೆಯ ಬಗ್ಗೆ ಹುಯ್ಯಲ್ಲೆದ್ದಿತ್ತು.

    ಇದನ್ನು ಮನಗಂಡ ವೆಂಟಿಲೇಟರ್​ ತಯಾರಕರಲ್ಲದೆ, ಮಾರುತಿ ಸುಜುಕಿ ಇಂಡಿಯಾ ಸೇರಿ ಕಾರು ಉತ್ಪಾದನಾ ಸಂಸ್ಥೆಗಳು ಕೂಡ ಕಾರುಗಳ ಉತ್ಪಾದನೆ ನಿಲ್ಲಿಸಿ ವೆಂಟಿಲೇಟರ್​ಗಳ ತಯಾರಿಕೆಗೆ ಒತ್ತು ನೀಡಿದ್ದರು. ಇದರ ಪರಿಣಾಮ ರಾಷ್ಟ್ರಾದ್ಯಂತ ಈಗ ಬೇಡಿಕೆಗಿಂತಲೂ ಹೆಚ್ಚಿನ ವೆಂಟಿಲೇಟರ್​ಗಳ ದಾಸ್ತಾನುಗೊಂಡಿದೆ.

    ಇದನ್ನೂ ಓದಿ: ಮುಂದಿನ ವರ್ಷದವರೆಗೂ ಇರುತ್ತೆ ಕರೊನಾ: ಡಿಸಿಎಂ ಅಶ್ವತ್ಥನಾರಾಯಣ

    ಇದಕ್ಕೆ ಕಾರಣ, ಕೋವಿಡ್​-19 ಸೋಂಕಿತರಿಗೆ ವೈದ್ಯರು ಕೃತಕವಾಗಿ ಆಮ್ಲಜನಕ ನೀಡುವ ಬದಲು ಸಾಮಾನ್ಯ ರೀತಿಯಲ್ಲೇ ಚಿಕಿತ್ಸೆ ನೀಡಲು ಮುಂದಾಗುತ್ತಿರುವುದು. ಇದರಿಂದಾಗಿ ವೆಂಟಿಲೇಟರ್​ಗಳನ್ನು ಕೇಳುವವರು ದಿಕ್ಕಿಲ್ಲವಾಗಿ 47 ಸಾವಿರ ವೆಂಟಿಲೇಟರ್​ಗಳು ಹಾಗೆಯೇ ಉಳಿದಿವೆ. ಹೀಗಾಗಿ, ರಫ್ತಿಗೆ ಅವಕಾಶ ದೊರೆತರೆ ಅವನ್ನು ಅನ್ಯರಾಷ್ಟ್ರಗಳಿಗೆ ಮಾರಾಟ ಮಾಡಿ ನಷ್ಟವನ್ನು ತುಂಬಿಸಿಕೊಳ್ಳುವ ಬಗ್ಗೆ ತಯಾರಕರು ಚಿಂತನೆ ನಡೆಸಿದ್ದಾರೆ.
    ವೆಂಟಿಲೇಟರ್​ಗಳಿಗೆ ಬೇಡಿಕೆ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿ ಸಣ್ಣಪುಟ್ಟ ತಯಾರಕರು ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​, (ಬಿಇಎಲ್​), ಭಾರತ್​ ಹೆವಿ

    ಎಲೆಕ್ಟ್ರಿಕಲ್ಸ್​ ಲಿಮಿಟೆಡ್​ (ಬಿಎಚ್​ಇಎಲ್​) ಮತ್ತು ಮಾರುತಿ ಸುಜುಕಿ ಕಂಪನಿಗಳೊಂದಿಗೆ ಕೈಜೋಡಿಸಿದ್ದರು. ವೆಂಟಿಲೇಟರ್​ಗಳು ಮಾರಾಟವಾಗದಿರುವುದರಿಂದ ಇಂಥವರು ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.

    ಗಾಳಿಯಿಂದಲೂ ಹರಡುತ್ತೆ ಕರೊನಾ ಸೋಂಕು; ತಡೆಯುವುದಕ್ಕೆ ಇಲ್ಲಿವೆ ಉಪಾಯಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts