More

    609 ದಿನಗಳ ಬಳಿಕ ಕಣಕ್ಕಿಳಿದ ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ..!

    ಬೆಂಗಳೂರು: ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಬರೋಬ್ಬರಿ 609 ದಿನಗಳ ಬಳಿಕ ವೃತ್ತಿ ಕ್ರಿಕೆಟ್‌ಗೆ ವಾಪಸಾದರು. 2019ರ ಮೇ 12 ರಂದು ಕಡೇ ಬಾರಿಗೆ ಸ್ಪರ್ಧಾತ್ಮಕ ಪಂದ್ಯವಾಡಿದ್ದರು. ಸಿಎಸ್‌ಕೆ ತಂಡದ ರೈನಾ, 12ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಆಡಿದ್ದರು. ಕಳೆದ ಆಗಸ್ಟ್ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಆಡಿದ ಮೊದಲ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯದಲ್ಲಿ ಸುರೇಶ್ ರೈನಾ (56 ರನ್, 50 ಎಸೆತ, 2 ಬೌಂಡರಿ, 3 ಸಿಕ್ಸರ್) ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಆಲೂರಿನಲ್ಲಿ ನಡೆದ ಪಂದ್ಯದಲ್ಲಿ ಸುರೇಶ್ ರೈನಾ ಅರ್ಧಶತಕದಾಟದ ನಡುವೆಯೂ ಉತ್ತರ ಪ್ರದೇಶ ತಂಡ 11 ರನ್‌ಗಳಿಂದ ಪಂಜಾಬ್ ತಂಡಕ್ಕೆ ಶರಣಾಯಿತು.

    ಇದನ್ನೂ ಓದಿ: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಶುಭಾರಂಭ ಕಂಡ ಕರ್ನಾಟಕ ತಂಡ

    ಕಳೆದ ವರ್ಷ ಯುಎಇಯಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್‌ನಿಂದ ಸುರೇಶ್ ರೈನಾ ಹಿಂದೆ ಸರಿದಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ತಂಡದೊಂದಿಗೆ ಯುಎಇಗೆ ತೆರಳಿದ್ದ ರೈನಾ, ವೈಯಕ್ತಿಕ ಕಾರಣ ನೀಡಿ ತವರಿಗೆ ವಾಪಸಾಗಿದ್ದರು. ಇದಕ್ಕೂ ಮೊದಲು ಆಗಸ್ಟ್ 15 ರಂದು ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ದಿನವೇ ರೈನಾ ಕೂಡ ನಿವೃತ್ತಿ ಹೇಳಿದ್ದರು. ಯುಎಇಯಿಂದ ವಾಪಸಾದ ಬಳಿಕ ತವರು ಗಾಜಿಯಾಬಾದ್‌ನಲ್ಲಿ ರೈನಾ ಪ್ರತಿದಿನ ಅಭ್ಯಾಸ ನಡೆಸುತ್ತಿದ್ದರು. ರೈನಾ ವಾಪಸಾತಿಯಿಂದ ಖುಷಿಗೊಂಡಿರುವ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತೋಷ ವ್ಯಕ್ತಪಡಿಸಿದ್ದಾರೆ. ಮುಂದಿನ ಐಪಿಎಲ್‌ನಲ್ಲಿ ರೈನಾ ಸಿಎಸ್‌ಕೆ ಪರವೇ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts