More

    ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಶುಭಾರಂಭ ಕಂಡ ಕರ್ನಾಟಕ ತಂಡ

    ವಿಜಯವಾಣಿ ಸುದ್ದಿಜಾಲ, ಬೆಂಗಳೂರು : ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೆಎಲ್ ಶ್ರೀಜಿತ್ (48*ರನ್, 31 ಎಸೆತ, 1 ಬೌಂಡರಿ, 3 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ಯತ್ನದ ಫಲವಾಗಿ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಶುಭಾರಂಭ ಕಂಡಿತು. ನಗರದ ಹೊರವಲಯದಲ್ಲಿರುವ ಆಲೂರಿನ ಕೆಎಸ್‌ಸಿಎ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ 43 ರನ್‌ಗಳಿಂದ ಜಮ್ಮು ಕಾಶ್ಮೀರ ಎದುರು ಜಯ ದಾಖಲಿಸಿತು. ಕರೊನಾದಲ್ಲಿ ನಡೆಯುತ್ತಿರುವ ಮೊದಲ ದೇಶೀಯ ಕ್ರಿಕೆಟ್ ಟೂರ್ನಿ ಇದಾಗಿದ್ದು, ದೇಶದ ಆರು ನಗರಗಳಲ್ಲಿ ಲೀಗ್‌ ಹಂತದ ಪಂದ್ಯಗಳಿಗೆ ಚಾಲನೆ ನೀಡಲಾಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ 5 ವಿಕೆಟ್‌ಗೆ 150 ರನ್ ಪೇರಿಸಿದರೆ, ಜಮ್ಮು ಕಾಶ್ಮೀರ ತಂಡ 18.4 ಓವರ್‌ಗಳಲ್ಲಿ 107 ರನ್‌ಗಳಿಗೆ ಸರ್ವಪತನ ಕಂಡಿತು.

    ಇದನ್ನೂ ಓದಿ: ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಸವಾಲಿನ ಗುರಿ ನೀಡಿದ ಆಸ್ಟ್ರೇಲಿಯಾ 

    ಕರ್ನಾಟಕ: 5 ವಿಕೆಟ್‌ಗೆ 150 (ಕೆಎಲ್ ಶ್ರೀಜಿತ್ 48*, ಅನಿರುದ್ಧ್ ಜೋಷಿ 29, ಕರುಣ್ ನಾಯರ್ 27, ಪವನ್ ದೇಶಪಾಂಡೆ 27, ಅಕಿಬ್ ನಬಿ 30ಕ್ಕೆ 2, ಪರ್ವೇಜ್ ರಸೂಲ್ 18ಕ್ಕೆ 2). ಜಮ್ಮು ಕಾಶ್ಮೀರ: 18.4 ಓವರ್‌ಗಳಲ್ಲಿ 107 (ಶುಭಮಾನ್ ಪುಂದಿರ್ 20, ಅಬ್ದುಲ್ ಸಮದ್ 30, ಅಭಿಮನ್ಯು ಮಿಥುನ್ 24ಕ್ಕೆ 2, ಪ್ರಸಿದ್ಧ್ ಕೃಷ್ಣ 34ಕ್ಕೆ 3, ಜೆ.ಸುಚಿತ್ 17ಕ್ಕೆ 2, ಕೆ.ಗೌತಮ್ 13ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts