More

    ಹೊಸ ಪಾತ್ರದಲ್ಲಿ ಐಪಿಎಲ್‌ಗೆ ಮರಳುತ್ತಿದ್ದಾರೆ ಸುರೇಶ್ ರೈನಾ!

    ನವದೆಹಲಿ: ಐಪಿಎಲ್ ಇತಿಹಾಸ ಕಂಡ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆನಿಸಿದ್ದ ಸುರೇಶ್ ರೈನಾ ಕಳೆದ ಮೆಗಾ ಹರಾಜಿನಲ್ಲಿ ಯಾವುದೇ ತಂಡಕ್ಕೆ ಬಿಕರಿಯಾಗಿರಲಿಲ್ಲ. ಆದರೂ ಐಪಿಎಲ್ 15ನೇ ಆವೃತ್ತಿಯಲ್ಲಿ ಕಾಣಿಸಿಕೊಳ್ಳಲು ರೈನಾ ಸಜ್ಜಾಗಿದ್ದಾರೆ. ವೀಕ್ಷಕ ವಿವರಣೆಕಾರನ ಹೊಸ ಪಾತ್ರದ ಮೂಲಕ ರೈನಾ ಈ ಬಾರಿ ಐಪಿಎಲ್‌ನಲ್ಲಿ ಭಾಗವಹಿಸಲಿದ್ದಾರೆ. ಟೀಮ್ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಕೂಡ 5 ವರ್ಷಗಳ ಬಳಿಕ ಐಪಿಎಲ್ ಕಾಮೆಂಟರಿ ಬಾಕ್ಸ್‌ಗೆ ಮರಳಲಿದ್ದಾರೆ.

    ಐಪಿಎಲ್ ಪಂದ್ಯಗಳು ಈ ಬಾರಿ 8 ಭಾಷೆಗಳಲ್ಲಿ (ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮರಾಠಿ, ಮಲಯಾಳಂ, ಬಂಗಾಳಿ) ನೇರಪ್ರಸಾರ ಕಾಣಲಿದ್ದು, ಒಟ್ಟಾರೆ 80 ವೀಕ್ಷಕ ವಿವರಣೆಕಾರರು ಕಾರ್ಯನಿರ್ವಹಿಸಲಿದ್ದಾರೆ. ರೈನಾ ಮತ್ತು ರವಿಶಾಸ್ತ್ರಿ ಇಬ್ಬರೂ ಹಿಂದಿ ಕಾಮೆಂಟರಿ ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಈ ಹಿಂದೆ ನುರಿತ ಇಂಗ್ಲಿಷ್ ಭಾಷೆಯಿಂದ ಜನಪ್ರಿಯತೆ ಪಡೆದಿದ್ದ ರವಿಶಾಸ್ತ್ರಿ ಈ ಬಾರಿ ಹಿಂದಿಯಲ್ಲಿ ಮಾತ್ರ ಕಾಮೆಂಟರಿ ಮಾಡುತ್ತಿರುವುದು ವಿಶೇಷವಾಗಿದೆ.

    ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ಮತ್ತು ಗುಜರಾತ್ ಲಯನ್ಸ್ ತಂಡಗಳ ಪರ ಆಡಿರುವ ರೈನಾ ಈ ಪೈಕಿ 12 ಆವೃತ್ತಿಗಳಲ್ಲಿ ಎಂಎಸ್ ಧೋನಿ ನಾಯಕತ್ವದಡಿಯಲ್ಲೇ ಆಡಿದ್ದರು.

    ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ಕ್ರಿಕೆಟಿಗರಿಂದ ಮೆಚ್ಚುಗೆ

    ಐಪಿಎಲ್ 15ನೇ ಆವೃತ್ತಿಯಲ್ಲಿ ಹೊಸ ಹೊಸ ನಿಯಮಗಳು ಜಾರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts