More

    ಕರೊನಾ ವಾರಿಯರ್ಸ್ ಕಾರ್ಯ ಶ್ಲಾಘನೀಯ

    ಸುರಪುರ: ಕಳೆದ ಎರಡು ತಿಂಗಳಿಂದ ಆರೋಗ್ಯ ಇಲಾಖೆ, ಕಂದಾಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಹಗಲು-ರಾತ್ರಿ ಎನ್ನದೆ ಕರೊನಾ ಸೇನಾಗಿಗಳಾಗಿ ಸೇವೆ ಸಲ್ಲಿಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಶಾರದಾ ಭೀಮಣ್ಣ ಬೇವಿನಾಳ ಹೇಳಿದರು.

    ತಾಪಂ ಕಚೇರಿಯಲ್ಲಿ ಮಂಗಳವಾರ ಕರೆದಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಡೀ ಜಗತ್ತನ್ನೆ ತಲ್ಲಣಗೊಳಿಸಿರುವ ಕರೊನಾ ವೈರಸ್ ನಿಯಂತ್ರಣ ಮಾಡುವಲ್ಲಿ ಶ್ರಮಿಸಿದ ನಮ್ಮ ಸೇನಾನಿಗಳ ಕಾರ್ಯ ಅಮೋಘವಾಗಿದೆ ಎಂದರು.

    ಚೀನಿ ವೈರಸ್ ಕುರಿತು ನಾವೇಲ್ಲರೂ ನಮ್ಮ ಕ್ಷೇತ್ರದ ಜನರಿಗೆ ಜಾಗೃತಿ ಮೂಡಿಸಬೇಕು ಅಲ್ಲದೆ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.

    ನಂತರ ಕರಡಕಲ್ ತಾಪಂ ಸದಸ್ಯೆ ಕವಿತಾ ಹೆಗ್ಗೆರಿ ಮಾತನಾಡಿ, ಸಭೆಯ ಪ್ರಗತಿ ವರದಿ ಮುಂಚಿತವಾಗಿ ನೀಡುವಂತೆ ಹೇಳಿದರೂ, ಸಭೆಗೆ ಬಂದ ಮೇಲೆ ನೀಡುತ್ತೀರಿ. ಇದು ನೀವು ಸದಸ್ಯರಿಗೆ ನೀಡುವ ಗೌರವ ಇದೇನಾ ಎಂದು ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಇತರ ಸದಸ್ಯರು ವರದಿ ಕನ್ನಡದಲ್ಲಿ ನೀಡುವಂತೆ ಹೇಳಿದರೂ ಇಂಗ್ಲಿಷ್ನಲ್ಲಿ ನೀಡುತ್ತೀರಿ ಈ ರೀತಿಯ ಅಧಿಕಾರಿಗಳ ವರ್ತನೆ ಸಲ್ಲದು ತಾಪಂ ಇಒ ಮೇಲೆ ಹರಿಹಾಯ್ದರು.

    ಇಒ ಅಂಬ್ರೀಶ ಮಾತನಾಡಿ, ಈ ಬಾರಿ ಕರೊನಾ ವೈರಸ್ನ ಮುಂಜಾಗ್ರತಾ ಕ್ರಮ ಮತ್ತು ಇನ್ನಿತರ ಅಭಿವೃದ್ಧಿ ಕಾರ್ಯಗಳ ಕ್ರೀಯಾಯೋಜನೆ ತುತರ್ಾಗಿ ಸಲ್ಲಿಸಬೇಕಾಗಿರುವುದರಿಂದ ಮುಂಗಡವಾಗಿ ನೀಡಲು ಆಗಿಲ್ಲ ಎಂದು ಸಮಜಾಯಿಸಿ ನೀಡಿದರು.

    ತಾಲೂಕು ವೈದ್ಯಾಧಿಕಾರಿ ಡಾ. ಆರ್.ವಿ.ನಾಯಕ ಮಾತನಾಡಿ, ಕರೊನಾ ವೈರಸ್ ಕುರಿತು ಜಾಗೃತಿ ಅಗತ್ಯವಾಗಿದೆ. ಜನರು ಈ ಕುರಿತು ಭಯಪಡುವುದು ಬೇಡ. ಮುಂಜಾಗ್ರತೆ ವಹಿಸಿದರೆ ಸಾಕು. ಈಗಾಗಲೇ ಹೊರ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್ ಮಾಡಲಾಗಿದೆ. ಸಧ್ಯ ತಾಲೂಕಿನಲ್ಲಿ 7 ಜನರಿಗೆ ವೈರಸ್ ತಗುಲಿದೆ ಎಲ್ಲ ಜನರು ಗುಜರಾತ್, ಮಹಾರಾಷ್ಟ್ರ ರಾಜ್ಯಗಳಿಂದ ಬಂದವರಿಗೆ ಈ ವೈರಸ್ ತಗುಲಿದೆ ಜಿಲ್ಲಾ ಆಸ್ಪತ್ರೆಯಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

    ಗ್ರಾಮೀಣ ನೀರು ಸರಬರಾಜು, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಂಚಾಯತ ರಾಜ್ಯ, ಕೃಷಿ ಇಲಾಖೆ, ತೋಟಗಾರಿಕೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸೇರಿ ಇನ್ನಿತರ ಇಲಖೆಯ ಪ್ರಗತಿ ವರದಿ ಮಂಡಿಸಲಾಯಿತು. ನಂತರ 15ನೇ ಹಣಕಾಸು ಯೋಜನೆ ಕ್ರೀಯಾ ಯೋಜನೆಯ ಇನ್ನಿತರ ವಿಷಯ ಕುರಿತು ಚರ್ಚಿಸಲಾಯಿತು.

    ಸಭೆಯಲ್ಲಿ ತಾಪಂ ಉಪಾಧ್ಯಕ್ಷೆ ಮಂಜುಳಾ ಸಾಹೇಬಗೌಡ, ಸದಸ್ಯರಾದ ದೊಡ್ಡಕೊತ್ಲಪ್ಪ ಹಾವಿನ್, ಬೈಲಪ್ಪಗೌಡ ವಾಗಣಗೇರಾ, ನಂದನಗೌಡ ದೇವಾಪುರ, ಮಲ್ಲಿಕಾಜರ್ುನ ಸಾಹುಕಾರ ಇತರ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts