More

    “ಒಬ್ಬರ ಶಿಫ್ಟ್ ರಾತ್ರಿಯಾದರೆ ಇನ್ನೊಬ್ಬರದ್ದು ಬೆಳಗ್ಗೆ, ಮದುವೆ ಮುರಿಯುವ ಮುನ್ನ ಜತೆಗಿರಲು ಪ್ರಯತ್ನಿಸಿ” ಎಂದ ನ್ಯಾಯಾಲಯ!

    ನವದೆಹಲಿ: ಟೆಕ್ಕಿ ದಂಪತಿಗೆ ತಮ್ಮ ಮದುವೆ ಸಫಲವಾಗಲು ಎರಡನೇ ಬಾರಿ ಪ್ರಯತ್ನ ಪಡುವಂತೆ ಸುಪ್ರೀಂ ಕೋರ್ಟ್ ಒತ್ತಾಯಿಸಿದೆ. 

    ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್ ಮತ್ತು ಬಿವಿ ನಾಗರತ್ನ ಅವರ ಪೀಠವು ಈ ತೀರ್ಪು ಹಾಗೂ ಸಲಹೆಯನ್ನು ನೀಡಿದೆ. ಪತಿ ಮತ್ತು ಪತ್ನಿ ಇಬ್ಬರೂ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿದ್ದು, ಒಬ್ಬರು ಹಗಲು ಮತ್ತು ಇನ್ನೊಬ್ಬರು ರಾತ್ರಿ ಕರ್ತವ್ಯಕ್ಕೆ ಹೋಗುತ್ತಾರೆ. ವಿಚಾರಣೆಯ ಸಂದರ್ಭದಲ್ಲಿ, ಪೀಠವು ವಿಚ್ಛೇದನವನ್ನು ತೆಗೆದುಕೊಳ್ಳುವ ಬದಲು ಮದುವೆ ಉಳಿಸಿಕೊಳ್ಳಲು ಎರಡನೇ ಬಾರಿ ಪ್ರಯತ್ನಪಡುವ ಬಗ್ಗೆ ಯೋಚಿಸುವಂತೆ ದಂಪತಿಗಳಿಗೆ ಸಲಹೆ ನೀಡಿದೆ.

    ಇದನ್ನೂ ಓದಿ: ನ್ಯಾಯಾಲಯದಲ್ಲೇ ಮಹಿಳೆ ಮೇಲೆ ಗುಂಡಿನ ದಾಳಿ!

    ವಕೀಲರು ಈ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಕಕ್ಷಿದಾರರ ನಡುವೆ ಇತ್ಯರ್ಥದ ಸಾಧ್ಯತೆಯನ್ನು ಕಂಡುಕೊಳ್ಳಲು ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ಕೇಂದ್ರಕ್ಕೆ ರೆಫರ್​ ಮಾಡಲಾಗಿದೆ ಎಂದು ಹೇಳಿದರು.

    ಕಡೆಗೂ ನಡೆದ ವಿಚ್ಛೇದನ…

    “ಈ ನ್ಯಾಯಾಲಯದ ಮುಂದೆ ಸಲ್ಲಿಸಲಾದ 23.02.2023 ದಿನಾಂಕದ ಇತ್ಯರ್ಥ ಒಪ್ಪಂದದ ರೂಪದಲ್ಲಿ ಆದ ಒಪ್ಪಂದಕ್ಕೆ ಪಕ್ಷಗಳು ಒಪ್ಪಿಕೊಂಡಿವೆ ಎಂದು ಅವರು ಮಾಹುತಿ ನೀಡಿರುತ್ತಾರೆ. ಕೆಲವು ನಿಯಮಗಳು ಮತ್ತು ಷರತ್ತುಗಳ ಮೇಲೆ 1955 ರ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13B ಅಡಿಯಲ್ಲಿ ಪರಸ್ಪರ ಒಪ್ಪಿಗೆಯಿಂದ, ವಿಚ್ಛೇದನದ ತೀರ್ಪಿನ ಮೂಲಕ ಪಕ್ಷಗಳು ತಮ್ಮ ವಿವಾಹವನ್ನು ವಿಸರ್ಜಿಸಲು ನಿರ್ಧರಿಸಿವೆ ಎಂದು ಅವರು ಹೇಳಿರುತ್ತಾರೆ” ಎಂದು ಪೀಠವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

    ಇದನ್ನೂ ಓದಿ: ಶಿಕ್ಷೆ ತಡೆಯುವಂತೆ ಕೋರಿ ರಾಹುಲ್​ ಗಾಂಧಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಾಲಯ

    ಪ್ರತಿವಾದಿ-ಪತಿಯು ಪತ್ನಿಗೆ ಶಾಶ್ವತ ಜೀವನಾಂಶವಾಗಿ ಅರ್ಜಿದಾರರ ಎಲ್ಲಾ ವಿತ್ತೀಯ ಕೈಮ್‌ಗಳ ಪೂರ್ಣ ಮತ್ತು ಅಂತಿಮ ಇತ್ಯರ್ಥಕ್ಕಾಗಿ ಪ್ರತಿವಾದಿ-ಪತಿ ಒಟ್ಟು 12,51,000 ರೂಪಾಯಿಗಳನ್ನು ಪಾವತಿಸುತ್ತಾರೆ ಎಂದು ಪೀಠಕ್ಕೆ ತಿಳಿಸಲಾಯಿತು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts