More

    ಲಿವ್​ಇನ್ ಸಂಬಂಧ ರೇಪ್ ಆದೀತೇ? ಸುಪ್ರೀಂ ಕೋರ್ಟ್ ಪ್ರಶ್ನೆ

    ನವದೆಹಲಿ: ಲಿವ್ ಇನ್ (ಸಹಬಾಳ್ವೆ) ಸಂಬಂಧದಲ್ಲಿರುವವರ ಲೈಂಗಿಕ ಸಂಬಂಧವನ್ನು ಅತ್ಯಾಚಾರ ಎಂದು ಪರಿಗಣಿಸಬಹುದೇ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಲಿವ್ ಇನ್ ಸಂಬಂಧದಲ್ಲಿ ಬಾಳುತ್ತಿರುವವರ ನಡುವಣ ಪರಸ್ಪರ ಒಪ್ಪಿಗೆಯ ಲೈಂಗಿಕ ಸಂಬಂಧ ಕುರಿತ ವಿಚಾರವನ್ನು ಪರಿಶೀಲಿಸುತ್ತಿರುವ ಸಿಜೆಐ ಎಸ್.ಎ. ಬೊಬ್ಡೆ ನೇತೃತ್ವದ ನ್ಯಾಯಪೀಠ ಈ ಪ್ರಶ್ನೆಯನ್ನು ಎತ್ತಿದೆ.

    ‘ಒಂದು ಜೋಡಿಯು ಪತಿ ಹಾಗೂ ಪತ್ನಿಯಂತೆ ಒಟ್ಟಿಗೆ ಬಾಳುತ್ತಿದ್ದರೆ ಪುರುಷ ಹೆಚ್ಚು ಬರ್ಬರವಾಗಿ ವರ್ತಿಸಬಹುದು. ಆದರೆ ಅವರ ನಡುವಿನ ಲೈಂಗಿಕ ಚಟುವಟಿಕೆಯನ್ನು ರೇಪ್ ಎಂದು ಪರಿಗಣಿಸಬಹುದೇ ಎನ್ನುವುದು ಪ್ರಶ್ನೆಯಾಗಿದೆ. ಆದರೆ, ಮದುವೆಯಾಗುವುದಾಗಿ ಸುಳ್ಳು ಆಶ್ವಾಸನೆ ನೀಡಿ ಲೈಂಗಿಕ ಸಂಬಂಧ ಬೆಳೆಸುವುದು ತಪು್ಪ’ ಎಂದೂ ಕೋರ್ಟ್ ಹೇಳಿದೆ.

    ಎರಡು ವರ್ಷಕ್ಕಿಂತ ಹೆಚ್ಚು ಸಮಯ ಲಿವ್​ಇನ್ ಸಂಬಂಧದಲ್ಲಿದ್ದ ಸಂಗಾತಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆಯೊಬ್ಬರು ದೂರು ಕೊಟ್ಟಿರುವ ಪ್ರಕರಣ ಇದಾಗಿದೆ. ಆ ಪುರುಷ ಬೇರೊಬ್ಬ ಮಹಿಳೆಯನ್ನು ವಿವಾಹವಾದ ನಂತರ ಆತನ ವಿರುದ್ಧ ಮಹಿಳೆ ಎಫ್​ಐಆರ್ ದಾಖಲಿಸಿದ್ದಾರೆ.

    ಅವಳಿಗೆ ಈಗ ತಾನು ಹೆಂಗಸಂತಲೇ ಅನಿಸುತ್ತಿಲ್ಲವಂತೆ!; ಉಲ್ಟಾ ಹೊಡೆಯಿತು ಸೌಂದರ್ಯಚಿಕಿತ್ಸೆ…

    ಇದಿನ್ನೂ ಟ್ರೇಲರ್​​, ಸದ್ಯದಲ್ಲೇ ಇನ್ನಿಬ್ಬರು ಸಚಿವರ ಸಿಡಿ ರಿಲೀಸ್​!? ಈ ಭಾಗದ ಸಚಿವರ ಸಿಡಿ ರಿಲೀಸ್​ ಆಗೋ ಸಾಧ್ಯತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts