More

    ಲಾಕ್​ಡೌನ್​ ಆದೇಶಕ್ಕೆ ಸುಪ್ರೀಂ ಕೋರ್ಟ್​ ತಡೆ! ರಾಜ್ಯ ಸರ್ಕಾರದಿಂದ ವರದಿ ಕೇಳಿದ ನ್ಯಾಯಾಲಯ

    ಲಖನೌ: ಉತ್ತರ ಪ್ರದೇಶದ ಐದು ಪ್ರಮುಖ ನಗರಗಳಲ್ಲಿ ಒಂದು ವಾರದ ಕಾಲ ಲಾಕ್​ಡೌನ್​ ಘೋಷಿಸಿದ್ದ ಅಲಹಾಬಾದ್​ ಹೈ ಕೋರ್ಟ್​ನ ಆದೇಶಕ್ಕೆ ಸುಪ್ರೀಂ ಕೋರ್ಟ್​ ತಡೆ ನೀಡಿದೆ. ಲಾಕ್​ಡೌನ್​ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿರುವ ಹಿನ್ನೆಲೆಯಲ್ಲಿ ತಡೆ ನೀಡಲಾಗಿದೆ.

    ಏಪ್ರಿಲ್​ 19ರಿಂದ 26ರವರೆಗೆ ವಾರಣಾಸಿ, ಲಖನೌ, ಕಾನ್ಪುರ, ಗೋರಕ್ಪುರ ಮತ್ತು ಪ್ರಯಾಗ್​ರಾಜ್​ನಲ್ಲಿ ಲಾಕ್​ಡೌನ್​ ಮಾಡಬೇಕೆಂದು ಅಲಹಾಬಾದ್​ ಹೈ ಕೋರ್ಟ್​ ಸೋಮವಾರ ಸಂಜೆ ಆದೇಶ ಹೊರಡಿಸಿತ್ತು. ಆದರೆ ಈ ರೀತಿಯ ಆದೇಶದಿಂದ ಈ ನಗರಗಳ ಬಡವರ ಬದುಕಿಗೆ ಹೊಡೆತ ಬೀಳಲಿದೆ ಎಂದು ರಾಜ್ಯ ಸರ್ಕಾರ ವಾದಿಸಿದೆ. ಹೈ ಕೋರ್ಟ್​ ಹೇಳಿರುವ ಕ್ರಮಗಳಲ್ಲಿ ಹಲವನ್ನು ಈಗಾಗಲೇ ತೆಗೆದುಕೊಂಡಿರುವುದಾಗಿ ತಿಳಿಸಲಾಗಿದೆ. ಲಾಕ್​ಡೌನ್​ ಅವಶ್ಯಕತೆ ಸದ್ಯಕ್ಕೆ ಇಲ್ಲವೆಂದು ರಾಜ್ಯ ಸರ್ಕಾರದ ಪರ ವಕೀಲ ತುಷಾರ್​ ಮೆಹ್ತಾ ವಾದಿಸಿದ್ದಾರೆ.

    ಲಾಕ್​ಡೌನ್​ ಆದೇಶಕ್ಕೆ ಸುಪ್ರೀಂ ಕೋರ್ಟ್​ ತಡೆ ನೀಡಿದೆ. ಈ ನಗರಗಳಲ್ಲಿ ಕರೊನಾ ಸೋಂಕಿನ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರವಾದ ವರದಿಯನ್ನು ಹೈ ಕೋರ್ಟ್​ಗೆ ಸಲ್ಲಿಸುವಂತೆ ಸೂಚಿಸಲಾಗಿದೆ. (ಏಜೆನ್ಸೀಸ್​)

    ಬಿಗ್​ಬಾಸ್​ ಮನೆ ಖಾಲಿ ಖಾಲಿ! ಇದ್ದಕ್ಕಿದ್ದಂತೆ ಎಲ್ಲವನ್ನೂ ಹಿಂಪಡೆಯುವುದಕ್ಕೆ ಕಾರಣವೇನು?

    ರಾತ್ರಿಯೆಲ್ಲ ನರಳಾಡಿ ಆಸ್ಪತ್ರೆಯಲ್ಲೇ ನೇಣಿಗೆ ಕೊರಳೊಡ್ಡಿದ ಕರೊನಾ ಸೋಂಕಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts