More

    ವೀಡಿಯೋ ಕಾನ್ಫರೆನ್ಸ್ ಮೂಲಕ ಅತಿ ಹೆಚ್ಚು ಕೇಸುಗಳನ್ನು ನಡೆಸಿದ ಸುಪ್ರೀಂ ಕೋರ್ಟ್

    ನವದೆಹಲಿ: ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಜಗತ್ತಿನಲ್ಲೇ ಅತಿಹೆಚ್ಚು ಸಂಖ್ಯೆಯ ಕೇಸುಗಳನ್ನು ವಿಚಾರಣೆ ನಡೆಸಿದ ಹೆಗ್ಗಳಿಕೆಯನ್ನು ಭಾರತದ ಸುಪ್ರೀಂ ಕೋರ್ಟ್ ಪಡೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕರೊನಾ ಸಂದರ್ಭದಲ್ಲಿ ಭಾರತದ ವಿವಿಧ ಹೈಕೋರ್ಟ್​ಗಳು ಮತ್ತು ಜಿಲ್ಲಾ ನ್ಯಾಯಾಲಯಗಳು ಕೂಡ ಆಧುನಿಕ ತಂತ್ರಜ್ಞಾನಕ್ಕೆ ಸೂಕ್ತವಾಗಿ ಅಳವಡಿಸಿಕೊಂಡಿದ್ದು, 2020ರ ಲಾಕ್​ಡೌನ್ ಸಮಯದಲ್ಲಿ 18,000 ನ್ಯಾಯಾಲಯಗಳ ಕಂಪ್ಯೂಟರೀಕರಣವಾಗಿದೆ ಎಂದಿದ್ದಾರೆ.

    ಗುಜರಾತ್ ಹೈಕೋರ್ಟ್​ನ ಡೈಮೆಂಡ್​ ಜ್ಯೂಬಿಲಿ ಆಚರಣೆಯ ಸಂದರ್ಭದಲ್ಲಿ ಶನಿವಾರ ವೀಡಿಯೋ ಕಾನ್ಫರೆನ್ಸ್ ಮುಖಾಂತರವಾಗಿ ಮಾತನಾಡಿದ ಪ್ರಧಾನಿ ಮೋದಿ, ಭಾರತದ ನ್ಯಾಯಾಂಗವು ಸಂವಿಧಾನವನ್ನು ಬಲಪಡಿಸುವಲ್ಲಿ ಬಹಳ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ವೈಯಕ್ತಿಕ ಹಕ್ಕುಗಳ ರಕ್ಷಣೆಯೊಂದಿಗೆ ರಾಷ್ಟ್ರಹಿತ ಮತ್ತು ಸತ್ಯಪರತೆಯನ್ನು ಸಮಾನವಾಗಿ ಕಾಪಾಡಿಕೊಂಡು ಬರುತ್ತಿದೆ ಎಂದಿರುವ ಮೋದಿ, ಈ ಕಾರ್ಯದಲ್ಲಿ ನ್ಯಾಯಾಧೀಶರು ಮತ್ತು ವಕೀಲರ ಕೊಡುಗೆ ಎರಡೂ ಮುಖ್ಯವಾಗಿವೆ ಎಂದಿದ್ದಾರೆ.

    ಇದನ್ನೂ ಓದಿ: ಮಗುವಿನ ಸಾಕ್ಷಿ ಸರಿ ಇಲ್ಲದಿದ್ದರೇನು… ತಾಯಿಯ ಮಾತು ಕೇಳಿ ಎಂದ ಹೈಕೋರ್ಟ್

    ಭಾರತದಲ್ಲಿ ವಿಶ್ವ ಮಟ್ಟದ ನ್ಯಾಯವ್ಯವಸ್ಥೆಯನ್ನು ಸ್ಥಾಪಿಸುವುದು ನ್ಯಾಯಾಂಗ ಮತ್ತು ಸರ್ಕಾರದ ಜಂಟಿ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ದೇಶದ ನ್ಯಾಯವ್ಯವಸ್ಥೆಯನ್ನು ‘ಫ್ಯೂಚರ್ ರೆಡಿ’ ಆಗಿ ಮಾಡಲು ಆಧುನಿಕ ಸೌಲಭ್ಯಗಳೊಂದಿಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್​ಅನ್ನು ಬಳಸುವ ಪ್ರಯತ್ನ ಸಾಗಿದೆ. ಇದು ‘ಈಸ್ ಆಫ್ ಜಸ್ಟೀಸ್’ಅನ್ನು ಹೆಚ್ಚಿಸಲಿದೆ. ಒಳ್ಳೆಯ ನ್ಯಾಯವ್ಯವಸ್ಥೆಯು ಸಮಾಜದಲ್ಲಿ ನಿಶ್ಚಿಂತತೆ ತರುತ್ತದೆ. ಅದರಿಂದ ದೇಶದ ಪ್ರಗತಿ ಸಾಧ್ಯ ಎಂದಿದ್ದಾರೆ.

    60 ವರ್ಷಗಳನ್ನು ಪೂರೈಸಿರುವ ಗುಜರಾತ್ ಹೈಕೋರ್ಟ್ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ಸತ್ಯನಿಷ್ಠವಾಗಿ ಕೆಲಸ ಮಾಡುತ್ತಾ ಬಂದಿದೆ. ಗುಜರಾತಿನ ಜುನಾಗಡ್​ನಲ್ಲೇ ದೇಶದ ಮೊದಲ ಲೋಕ್ ಅದಾಲತ್ ಆರಂಭವಾಗಿದ್ದು, ಸಂಜೆ ನ್ಯಾಯಾಲಯಗಳ ಪ್ರತೀತಿಯನ್ನು ಕೂಡ ಗುಜರಾತ್ ಆರಂಭಿಸಿದೆ.

    ಇದನ್ನೂ ಓದಿ: ದೇಶದ ಒಗ್ಗಟ್ಟು ಕಾಪಾಡಿಕೊಳ್ಳೋಣ ಎಂದಿದ್ದ ಸಚಿನ್​​ ತೆಂಡೂಲ್ಕರ್​ ಕಟೌಟ್​ಗೆ ಕಪ್ಪು ಮಸಿ ಎರಚಿದ ಕಾಂಗ್ರೆಸ್​ ನಾಯಕರು

    ಕರೊನಾ ಪರಿಸ್ಥಿತಿಯಲ್ಲಿ ನಮ್ಮ ನ್ಯಾಯಾಲಯಗಳು ಸಮರ್ಪಣೆ ಮತ್ತು ಕರ್ತವ್ಯ ನಿಷ್ಠೆಯಿಂದ ದುಡಿದಿವೆ. ಲಾಕ್ಡೌನ್ ಆರಂಭಕಾಲದಲ್ಲೇ ವೀಡಿಯೋ ಕಾನ್ಫರೆನ್ಸ್ ಮತ್ತು ಈ-ಫೈಲಿಂಗ್​ನಂಥ ಸೌಲಭ್ಯಗಳೊಂದಿಗೆ ನ್ಯಾಯಾಂಗದ ಕೆಲಸವನ್ನು ಮುಂದುವರಿಸಲಾಯಿತು. ಡಿಜಿಟಲ್ ಇಂಡಿಯಾ ಮಿಷನ್ ಅಡಿಯಲ್ಲಿ ವರ್ಚುಯಲ್ ಕೋರ್ಟ್​ಅನ್ನು ಸೃಷ್ಟಿಸಲಾಗುತ್ತಿದೆ. ಕೋರ್ಟ್ ಕಲಾಪಗಳ ಲೈವ್ ಸ್ಟ್ರೀಮಿಂಗ್, ನ್ಯಾಯಾಲಯದ ಆವರಣದಲ್ಲಿ ಈ-ಸೇವಾ ಕೇಂದ್ರಗಳು, ಈ-ಲೋಕ್ ಅದಾಲತ್ ಗಳು ನಡೆಯುತ್ತಿವೆ ಎಂದು ಮೋದಿ ತಿಳಿಸಿದ್ದಾರೆ.(ಏಜೆನ್ಸೀಸ್)

    ‘ಕೃಷಿ ಕಾನೂನುಗಳಲ್ಲಿ ಲೋಪವೇನು ತೋರಿಸಿ’ ಎಂದು ಸವಾಲು ಹಾಕಿದ ತೋಮರ್

    ಪ್ರಧಾನಿ ಮೋದಿ ಜೊತೆ ಕಾಡಿನಲ್ಲಿ ಚಹಾ ಕುಡಿದ ಕ್ಷಣಗಳನ್ನು ನೆನೆದ ಬೇರ್ ಗ್ರಿಲ್ಸ್

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts